ತಲೆಮರೆಸಿಕೊಳ್ಳಬೇಕಾದ ದರ್ದು ನನಗಿಲ್ಲ ಎಂದ ಮಲ್ಯ

Subscribe to Oneindia Kannada

ನವದೆಹಲಿ, ಮಾರ್ಚ್, 07: ಸುಸ್ತಿದಾರ ಎಂದು ಕರೆಸಿಕೊಂಡು ಆಸ್ತಿ ಹರಾಜಿನವರೆಗೆ ಬಂದು ನಿಂತಿದ್ದ ಮದ್ಯದ ದೊರೆ ವಿಜಯ್ ಮಲ್ಯ ಅಂತೂ ಮಾತನಾಡಿದ್ದಾರೆ. ನನ್ನ ವಿರುದ್ಧ ತಪ್ಪು ಮಾಹಿತಿ ರವಾನೆ ಮಾಡಲಾಗುತ್ತಿದೆ, ನಾನು ಎಲ್ಲಿಯೂ ತಲೆ ಮರೆಸಿಕೊಂಡಿಲ್ಲ ಎಂದು ಮಲ್ಯ ಸ್ಪಷ್ಟನೆ ನೀಡಿದ್ದಾರೆ.

ಸಾಲ ನೀಡಿದವರಿಗೆ ಹೆಚ್ಚುವರಿ ಪಾವತಿ ಮೂಲಕ ಕಂತಿನಲ್ಲಿ ಸಾಲ ತೀರಿಸಲು ಪ್ರಯತ್ನಿಸುತ್ತಿದ್ದೇನೆ. ಎಲ್ಲ ಸಾಲಗಳ ಮುಖವಾಣಿಯಾಗಿ ನನ್ನನ್ನು ಬಿಂಬಿಸಲಾಗುತ್ತಿದೆ ಮತ್ತು ನನ್ನ ವಿರುದ್ಧ ತಪ್ಪು ಮಾಹಿತಿ ರವಾನಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.[ಸಾಲ ಮಾಡಿ ತುಪ್ಪ ತಿಂದ ಮಲ್ಯಗೆ ಬಂಧನ ಭೀತಿ]

mallya

ಮಾಧ್ಯಮಗಳೊಂದಿಗೆ ಸೋಮವಾರ ಮಾತನಾಡಿ ನಾನು ಪಲಾಯನ ಮಾಡಿಲ್ಲ. ಅಂತ ತುರ್ತು ನನಗಿಲ್ಲ. ನಾನು ತಲೆ ಮರೆಸಿಕೊಂಡು ಓಡಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನನ್ನ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಬೇಕು ಎಂಬ ಉದ್ದೇಶದಿಂದ ಇಂಗ್ಲೆಂಡ್ ಗೆ ತೆರಳಬೇಕು ಎಂದು ಯೋಚನೆ ಮಾಡಿದ್ದೆ. ಪಲಾಯನ ಮಾಡುವ ಉದ್ದೇಶ ನನಗಿಲ್ಲ ಎಂದು ಮಲ್ಯ ಹೇಳಿದ್ದಾರೆ.['ಅರುವತ್ತಕ್ಕೆ ಅರಳು ಮರಳು, ಅಡ್ವಾಣಿಯಂತಾದ ಮಲ್ಯ!']

ಹಣ ಯಾರಿಗೆ ಸೇರುತ್ತೆ?
ಯುನೈಟೆಡ್ ಸ್ಪಿರಿಟ್ಸ್ ಕಂಪನಿಯ ಮುಖ್ಯಸ್ಥ ಹುದ್ದೆಯಿಂದ ನಿರ್ಗಮಿಸಿದ್ದಕ್ಕಾಗಿ ಬ್ರಿಟನ್ ನ ಡೈಜಿಯೋ ಕಂಪೆನಿಯಿಂದ ವಿಜಯ್ ಮಲ್ಯಗೆ 515 ಕೋಟಿ ರು. ನೀಡಲಿದೆ. ಆದರೆ ಇದನ್ನು ಸ್ಟೇಟ್ ಬ್ಯಾಂಕ್ ನೇತೃತ್ವದ ಬ್ಯಾಂಕುಗಳ ಒಕ್ಕೂಟ ನಮಗೆ ಸೇರಬೇಕು ಎಂದು ಅರ್ಜಿ ಸಲ್ಲಿಸಿದ್ದು ಅದರ ತೀರ್ಮಾನವನ್ನು ಬೆಂಗಳೂರಿನ ನ್ಯಾಯಾಲಯ ಸೋಮವಾರ, ಮಾರ್ಚ್ 7ರಂದು ಪ್ರಕಟ ಮಾಡಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Under fire over huge unpaid loans of long-defunct Kingfisher Airlines, a defiant Vijay Mallya on Monday, Mar 7 said he is making efforts to reach a 'one-time settlement' with banks through additional payments to the lenders, even as he denied "personally" being a "borrower or judgement defaulter" and alleged that "disinformation campaign" was being played to make him a "poster boy" of all bad loans.
Please Wait while comments are loading...