ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

16 ವಾರಗಳ ಸಂಬಳ, 6 ತಿಂಗಳ ಆರೋಗ್ಯ ಸೇವೆ: ವಜಾಗೊಂಡ 12,000 ಉದ್ಯೋಗಿಗಳಿಗೆ Google ನೀಡಿದ ಆಸರೆಗಳೇನು? ಮಾಹಿತಿ, ವಿವರ

|
Google Oneindia Kannada News

ನ್ಯೂಯಾರ್ಕ್‌, ಜನವರಿ 2023: ತಂತ್ರಜ್ಞಾನ ದೈತ್ಯ ಕಂಪನಿ ಗೂಗಲ್ ಶುಕ್ರವಾರ 12,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದೆ. ಕಷ್ಟಕರವಾದ ಆರ್ಥಿಕ ಪರಿಸ್ಥಿತಿಗಳನ್ನು ಎದುರಿಸುತ್ತಿರುವುದಾಗಿ ಗೂಗಲ್‌ ಹೇಳಿದೆ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಂದರ್ ಪಿಚೈ ಅವರು ಉದ್ಯೋಗಿಗಳಿಗೆ ತಮ್ಮ ಇಮೇಲ್‌ನಲ್ಲಿ ಕ್ಷಮಾಪಣೆ ಕೇಳಿದ್ದಾರೆ. 'ಕಂಪನಿಯು ಕಷ್ಟಕರ ಪರಿಸ್ಥಿತಿಯಲ್ಲಿದೆ. ಇಂತಹ ಸಮಯದಲ್ಲಿ ನಾವು ಈ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ. ಇದು ನಮಗೆ ಅನಿವಾರ್ಯವಾಗಿತ್ತು. ನನ್ನ ಕ್ಷೆಮೆ ಇರಲಿ' ಎಂದು ತಿಳಿಸಿದ್ದಾರೆ. ಮೈಕ್ರೋಸಾಫ್ಟ್, ಅಮೆಜಾನ್, ಮೆಟಾ ಮತ್ತು ಟ್ವಿಟರ್‌ನಂತಹ ಇತರ ದೈತ್ಯ ಸಂಸ್ಥೆಗಳು ತಮ್ಮ ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದರ ಬೆನ್ನ ಹಿಂದೆ 12,000 ಉದ್ಯೋಗಿಗಳನ್ನು ವಜಾಗೊಳಿಸುವ ನಿರ್ಧಾರವನ್ನು Google ತೆಗೆದುಕೊಂಡಿದೆ. ಸುಂದರ್ ಪಿಚೈ ಅವರು ತಮ್ಮ ಉದ್ಯೋಗಿಗಳಿಗೆ ಬರೆದ ಇಮೇಲ್‌ನ ಸಂಪೂರ್ಣ ಪಠ್ಯ ಇಲ್ಲಿದೆ. ನೀವು ಓದಿ.

 12,000 ಉದ್ಯೋಗಿಗಳ ಕಡಿತ

12,000 ಉದ್ಯೋಗಿಗಳ ಕಡಿತ

'ನಾನು ನಿಮ್ಮ ಜೊತೆಗೆ ಕೆಲವು ಕಷ್ಟಕರ ಸುದ್ದಿಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಸರಿಸುಮಾರು 12,000 ಉದ್ಯೋಗಿಗಳನ್ನು ವಜಾಗೊಳಿಸಲು ನಾವು ನಿರ್ಧರಿಸಿದ್ದೇವೆ. ಈ ದುಷ್ಪರಿಣಾಮಕ್ಕೆ ತುತ್ತಾದ US ಉದ್ಯೋಗಿಗಳಿಗೆ ನಾವು ಈಗಾಗಲೇ ಪ್ರತ್ಯೇಕ ಇಮೇಲ್ ಕಳುಹಿಸಿದ್ದೇವೆ. ಇತರ ದೇಶಗಳಲ್ಲಿನ ಉದ್ಯೋಗಿಗಳಿಗೆ ಇಮೇಲ್‌ ಬರಲಿದೆ. ಸ್ಥಳೀಯ ಕಾನೂನುಗಳ ಪ್ರಕ್ರಿಯೆಯಿಂದ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ' ಎಂದು ಪಿಚ್ಚೈ ತಿಳಿಸಿದ್ದಾರೆ.

 ಪ್ರತಿಭಾವಂತ ಜನರಿಗೆ ವಿದಾಯ

ಪ್ರತಿಭಾವಂತ ಜನರಿಗೆ ವಿದಾಯ

'ನಾವು ಕಷ್ಟಪಟ್ಟು ಕೆಲಸ ಮಾಡಿದ್ದೇವೆ. ಕೆಲಸವನ್ನು ಇಷ್ಟಪಟ್ಟಿದ್ದೇವೆ. ಪ್ರತಿಭಾವಂತ ಜನರಿಗೆ ವಿದಾಯ ಹೇಳುವುದು ಕಷ್ಟಕರವಾದ ಕೆಲಸವಾಗಿದೆ. ಅದಕ್ಕಾಗಿ ನಾನು ತೀವ್ರವಾಗಿ ವಿಷಾದಿಸುತ್ತೇನೆ. ಈ ಬದಲಾವಣೆಗಳು ಗೂಗ್ಲರ್‌ಗಳ ಜೀವನದ ಮೇಲೆ ಪರಿಣಾಮ ಬೀರುತ್ತವೆ ಎಂಬ ಅಂಶವು ನನ್ನ ಗಮನದಲ್ಲಿದೆ. ನನ್ನ ಎದೆ ಭಾರವಾಗಿದೆ. ಈ ವಿಷಾದದ ಸಂದರ್ಭಕ್ಕೆ ನಾನು ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ' ಎಂದು ಪಿಚ್ಚೈ ಹೇಳಿದ್ದಾರೆ.

 ಎರಡು ವರ್ಷಗಳಲ್ಲಿ ನಾಟಕೀಯ ಬೆಳವಣಿಗೆ

ಎರಡು ವರ್ಷಗಳಲ್ಲಿ ನಾಟಕೀಯ ಬೆಳವಣಿಗೆ

ಕಳೆದ ಎರಡು ವರ್ಷಗಳಲ್ಲಿ ನಾವು ನಾಟಕೀಯ ಬೆಳವಣಿಗೆಯ ಅವಧಿಗಳನ್ನು ನೋಡಿದ್ದೇವೆ. ಆ ಬೆಳವಣಿಗೆಯನ್ನು ಜಗತ್ತಿನಾದ್ಯಂತ ಆರ್ಥಿಕ ಬಿಕ್ಕಟ್ಟುಗಳನ್ನು ಉಂಟು ಮಾಡಿವೆ. ನಾವು ಇಂದು ಎದುರಿಸುತ್ತಿರುವ ಆರ್ಥಿಕ ವಾಸ್ತವಕ್ಕಿಂತ ವಿಭಿನ್ನವಾದ ಆರ್ಥಿಕ ವಾಸ್ತವತೆಯನ್ನು ಮುಂದೆ ನೋಡಲಿದ್ದೇವೆ ಎಂದೂ ತಿಳಿಸಿದ್ದಾರೆ. ನಮ್ಮ ಮಿಷನ್‌ನ ಶಕ್ತಿ, ನಮ್ಮ ಉತ್ಪನ್ನಗಳು ಮತ್ತು ಸೇವೆಗಳ ಮೌಲ್ಯ ಹಾಗೂ ನಮ್ಮ ಆರಂಭಿಕ ಹೂಡಿಕೆಗಳಿಗೆ ಧನ್ಯವಾದಗಳು. ನಮ್ಮ ಮುಂದೆ ಇರುವ ದೊಡ್ಡ ಅವಕಾಶದ ಬಗ್ಗೆ ನನಗೆ ಇನ್ನೂ ವಿಶ್ವಾಸವಿದೆ' ಎಂದು ತಿಳಿಸಿದ್ದಾರೆ.

 ನಾವು ಕಠಿಣ ಆಯ್ಕೆಗಳನ್ನು ಮಾಡಬೇಕಾಗಿದೆ

ನಾವು ಕಠಿಣ ಆಯ್ಕೆಗಳನ್ನು ಮಾಡಬೇಕಾಗಿದೆ

'ನಾವು ಕಠಿಣ ಆಯ್ಕೆಗಳನ್ನು ಮಾಡಬೇಕಾಗಿದೆ. ನಮ್ಮನ್ನು ತೊರೆಯುತ್ತಿರುವ ಗೂಗ್ಲರ್‌ಗಳಿಗೆ ಕಷ್ಟಪಟ್ಟು ಕೆಲಸ ಮಾಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಕೊಡುಗೆಗಳು ಅಮೂಲ್ಯವಾಗಿವೆ ಮತ್ತು ನಾವು ನಿಮಗೆ ಕೃತಜ್ಞರಾಗಿರುತ್ತೇವೆ. ಈ ನಿರ್ಧಾರವು ಸುಲಭವಲ್ಲದಿದ್ದರೂ, ಉದ್ಯೋಗಿಗಳು ತಮ್ಮ ಮುಂದಿನ ಅವಕಾಶವನ್ನು ಹುಡುಕುತ್ತಿರುವಾಗ ನಾವು ಅವರನ್ನು ಬೆಂಬಲಿಸಲಿದ್ದೇವೆ' ಎಂದು ಹೇಳಿದ್ದಾರೆ.

 Google ನೀಡಿದ ಆಸರೆಗಳೇನು?

Google ನೀಡಿದ ಆಸರೆಗಳೇನು?

'ಪೂರ್ಣ ಅಧಿಸೂಚನೆಯ ಅವಧಿಯಲ್ಲಿನ ವೇತನವನ್ನು (ಕನಿಷ್ಠ 60 ದಿನಗಳು) ನಾವು ಉದ್ಯೋಗಿಗಳಿಗೆ ಪಾವತಿಸುತ್ತೇವೆ. 16 ವಾರಗಳ ಸಂಬಳ ಮತ್ತು ಎರಡು ವಾರಗಳಿಂದ ಪ್ರಾರಂಭವಾಗುವ ಬೇರ್ಪಡಿಕೆ ಪ್ಯಾಕೇಜ್ ಅನ್ನು ಸಹ ನೀಡುತ್ತೇವೆ. ನಾವು 2022 ಬೋನಸ್ ಮತ್ತು ಉಳಿದ ರಜೆಯ ವೇತನವನ್ನೂ ಪಾವತಿಸುತ್ತೇವೆ. ಬಾಧಿತರಾದವರಿಗೆ ನಾವು 6 ತಿಂಗಳ ಆರೋಗ್ಯ ಸೇವೆ, ಉದ್ಯೋಗ ನಿಯೋಜನೆ ಸೇವೆಗಳು ಮತ್ತು ವಲಸೆ ಬೆಂಬಲವನ್ನು ನೀಡುತ್ತೇವೆ' ಎಂದು ಪಿಚ್ಚೈ ಹೇಳಿದ್ದಾರೆ.

English summary
Other giants like Microsoft, Amazon, Meta and Twitter have laid off their employees. Google has taken a decision to lay off 12,000 employees behind this
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X