ಬಹುನಿರೀಕ್ಷಿತ ಹುಂಡೈ ಗ್ರ್ಯಾಂಡ್ i10 NIOS ಕಾರು ಬಿಡುಗಡೆ

ನವದೆಹಲಿ, ಆಗಸ್ಟ್ 20, 2019: ಭಾರತದ ಮೊದಲ ಸ್ಮಾರ್ಟ್ ಮೊಬಿಲಿಟಿ ಸಲೂಶನ್ಸ್ ಪೂರೈಕೆದಾರ ಕಂಪನಿಯಾಗಿರುವ ಹುಂಡೈ ಮೋಟರ್ಸ್ ಇಂಡಿಯಾ ಲಿಮಿಟೆಡ್ ಇಂದು ಬಹುನಿರೀಕ್ಷಿತ Hyundai GRAND i10 NIOS ಕಾರನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿತು.

ಈ ಹೊಚ್ಚ ಹೊಸ Hyundai GRAND i10 NIOS ಭಾರತೀಯ ನಗರ ಪ್ರದೇಶದ ಯುವ ಪೀಳಿಗೆಗೆ ಬೋಲ್ಡ್ & ಸ್ಟೈಲಿಶ್ ವಿನ್ಯಾಸ, ಪ್ರೀಮಿಯಂ & ವಿಶಾಲವಾದ ಕ್ಯಾಬಿನ್, ಅತ್ಯಾಧುನಿಕ ಪವರ್‍ಟ್ರೇನ್ ಆಯ್ಕೆಗಳು, ಸ್ಮಾರ್ಟ್ & ನವೀನ ತಂತ್ರಜ್ಞಾನ ಹೊಂದಿರುವಂಥ ಕಾರು ಆಗಿದೆ

Hyundai launches all new GRAND i10 NIOS in New Delhi

ಈ ಕಾರನ್ನು ಬಿಡುಗಡೆ ಮಾಡಿ ಮಾತನಾಡಿದ ಹುಂಡೈ ಮೋಟರ್ ಇಂಡಿಯಾ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ & ಸಿಇಒ ಎಸ್‍ಎಸ್ ಕಿಮ್ ಅವರು, "ಈ ಹೊಸದಾದ Hyundai GRAND i10 NIOS ಕಾರು ಭಾರತದಲ್ಲೇ ತಯಾರಾಗಿದ್ದು, ವಿಶ್ವದ ಉತ್ಪನ್ನವಾಗಿ ತಯಾರಿಸಲಾಗಿದೆ. ಹುಂಡೈನ ಜಾಗತಿಕ ಮಾರುಕಟ್ಟೆ ಪ್ರಗತಿಯ ಯೋಜನೆಯಲ್ಲಿ ಭಾರತೀಯ ಮಾರುಕಟ್ಟೆ ಪ್ರಮುಖವಾಗಿದೆ. ನಾವು ಇದೀಗ ಹೊಚ್ಚ ಹೊಸದಾದ 3 ನೇ ತಲೆಮಾರಿನ GRAND i10 NIOS ಕಾರನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ಸಂತಸವೆನಿಸುತ್ತಿದ್ದು, ಇದು ಭಾರತದಲ್ಲಿ ಐ10 ಬ್ರ್ಯಾಂಡ್‍ನ ಸತತ ಮೂರನೇ ಕಾರು ಆಗಿದೆ. ನಮ್ಮ ಗ್ರಾಹಕರನ್ನು ಸಂತುಷ್ಟರನ್ನಾಗಿ ಮಾಡುವ ನಮ್ಮ ಬದ್ಧತೆಯನ್ನು ಈ ಹೊಸ ಕಾರು ಬಿಡುಗಡೆಯೊಂದಿಗೆ ಪೂರೈಸುತ್ತಿದ್ದೇವೆ" ಎಂದು ತಿಳಿಸಿದರು.

Hyundai launches all new GRAND i10 NIOS in New Delhi

"ಹುಂಡೈ ಮೋಟರ್ ಇಂಡಿಯಾ ಪ್ರಗತಿದಾಯಕ ವಿನ್ಯಾಸ, ಸ್ಟೈಲಿಂಗ್ ಮತ್ತು ತಂತ್ರಜ್ಞಾನವನ್ನು ನಮ್ಮ ಗ್ರಾಹಕರಿಗೆ ನೀಡುವುದರಲ್ಲಿ ನಂಬಿಕೆ ಇಟ್ಟಿದೆ. 'NIOS ಪದದ ಇಂಗ್ಲೀಷಿನ ಅರ್ಥ 'MORE' ಎಂದು. ಈ ಹೊಸ ಕಾರಿನ ಮೂಲಕ ನಾವು ನಮ್ಮ ಗ್ರಾಹಕರಿಗೆ ಮೌಲ್ಯವರ್ಧಿತ ಇಂಜಿನಿಯರಿಂಗ್ ಮತ್ತು ಗುಣಮಟ್ಟವನ್ನು ನೀಡಲು ಬದ್ಧರಾಗಿದ್ದೇವೆ" ಎಂದು ಅವರು ಹೇಳಿದರು.

ಹೊಚ್ಚ ಹೊಸ Hyundai Grand i10 NIOS: ಅಭಿವೃದ್ಧಿ ಪರಿಕಲ್ಪನೆ

'NIOS' ಪದದ ಇಂಗ್ಲೀಷಿನ ಅರ್ಥ 'MORE' ಎಂದು. ಈ ಅಥ್ಲೆಟಿಕ್ ಮಿಲೇನಿಯಲ್ 3 ನೇ ತಲೆಮಾರಿನ GRAND i10 NIOS ಅನ್ನು ಅನಾವರಣ ಮಾಡಿ ಮಾತನಾಡಿದ ಅವರು ಹುಂಡೈ ಸಿಗ್ನೇಚರ್ ಡೈನಾಮಿಕ್ ಹೊರಾಂಗಣ ಲುಕ್ ಹೊಂದಿದೆ. ಇದು ಕ್ಯಾಸ್ಕೇಡಿಂಗ್ ಗ್ರಿಲ್‍ನೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದು ಹೆಚ್ಚು ಮೌಲ್ಯ, ಹೆಚ್ಚು ವೈಶಿಷ್ಟ್ಯತೆಗಳು, ಹೆಚ್ಚು ಸ್ಥಳಾವಕಾಶ, ಹೆಚ್ಚು ಆರಾಮದಾಯಕತೆ ಮತ್ತು ಹೆಚ್ಚು ಕುತೂಹಲ ಮೂಡಿಸುವಂತಹ ಕಾರು ಆಗಿದ್ದು, ಹ್ಯಾಪಿ ಮಿಲೇನಿಯಂ ಲೈಫ್‍ನ ಜೀವನದ ಅನುಭವವನ್ನು ನೀಡಲಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+