ಬೆಂಗಳೂರು ಸೇರದಂತೆ ಹಲವು ನಗರಗಳಲ್ಲಿ ವಸತಿ ಮಾರಾಟದಲ್ಲಿ ಭಾರೀ ಏರಿಕೆ, ಯಾವ ನಗರದಲ್ಲಿ ಎಷ್ಟು ಹೆಚ್ಚಳ ತಿಳಿಯಿರಿ

ಬೆಂಗಳೂರು, ಅಕ್ಟೋಬರ್‌ 04: ಮನೆ ಕೊಳ್ಳಬೇಕು ಎಂಬುದು ಪ್ರತಿಯೊಬ್ಬರ ಜೀವನದ ಬಹುಮುಖ್ಯ ಆಸೆ. ಆದರೆ ರಿಯಲ್ ಎಸ್ಟೇಟ್ ಸಲಹೆಗಾರ ಕಂಪೆನಿ ಅನರಾಕ್‌ ಪ್ರಕಾರ, 2023 ರ ಮೂರನೇ ತ್ರೈಮಾಸಿಕದಲ್ಲಿ ಭಾರತೀಯ ವಸತಿ ಆಸ್ತಿ ಮಾರುಕಟ್ಟೆಯು ವಸತಿ ಮಾರಾಟದಲ್ಲಿ ಸಾರ್ವಕಾಲಿಕ ಏರಿಕೆಯಾಗಿದೆ ಎಂದು ತಿಳಿಸಿದೆ.

ನಿಧಾನಗತಿಯ ಮಾನ್ಸೂನ್ ಋತುವಿನ ಹೊರತಾಗಿಯೂ ಭಾರತದ ಅಗ್ರ ಏಳು ನಗರಗಳಲ್ಲಿ ಆಸ್ತಿ ಮಾರಾಟ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಇದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ರೆಪೋ ದರದ ಸ್ಥಿರತೆಯು ಭಾಗಶಃ ಕಾರಣವಾಗಿದೆ ಎನ್ನಲಾಗಿದೆ. ಪ್ರಮುಖ ಏಳು ನಗರಗಳಲ್ಲಿನ 1,20,280 ಸಂಖ್ಯೆ ಮನೆ ಮಾರಾಟವಾಗಿದೆ. ಇದೇ 2022ರಲ್ಲಿ ಅದೇ ತಿಂಗಳುಗಳಲ್ಲಿ 88,230 ಮನೆಗಳು ಮಾರಾಟವಾಗಿತ್ತು. ಈಗ ಇದು ಗಮನಾರ್ಹ ಹೆಚ್ಚಳವಾಗಿದೆ. ಒಟ್ಟಾರೆ 36 ಪ್ರತಿಶತ ಬೆಳವಣಿಗೆಯಾಗಿದೆ ಎಂದು ತಿಳಿದು ಬಂದಿದೆ.

Huge increase in housing sales in many cities including Bengaluru, know the rate

ಈ ಸಂಬಂಧ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ ರಿಯಲ್ ಎಸ್ಟೇಟ್ ಸಲಹೆಗಾರ ಅನರಾಕ್, ಈ ವರ್ಷದ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಏಳು ನಗರಗಳ ಸರಾಸರಿ ವಸತಿ ಬೆಲೆಗಳು ವಾರ್ಷಿಕವಾಗಿ 11 ಪ್ರತಿಶತದಷ್ಟು ಬೆಳೆದಿದೆ ಎಂದು ಹೇಳಿದೆ.

ಮುಂಬೈ ಮಹಾನಗರ ಪ್ರದೇಶದಲ್ಲಿ ಸುಮಾರು 38,500 ಮನೆಗಳು ಮಾರಾಟವಾಗಿದ್ದು, ಇದು ಭಾರತದಕ್ಕೆ ಹೆಚ್ಚಿನ ಮನೆ ಮಾರಾಟವಾದ ನಗರ ಎನಿಸಿದೆ. ಇದರ ನಂತರ ಪುಣೆಯಲ್ಲಿ ಸುಮಾರು 22,885 ಮನೆಗಳು ಮಾರಾಟವಾಗಿದ್ದು, ಎರಡನೇ ಸ್ಥಾನದಲ್ಲಿದೆ. ಒಟ್ಟಾಗಿ ಈ ಪಾಶ್ಚಿಮಾತ್ಯ ನಗರಗಳು 2023 ರಲ್ಲಿ ಒಟ್ಟು ಮಾರಾಟದ 51 ಪ್ರತಿಶತಕ್ಕೆ ಕೊಡುಗೆ ನೀಡಿವೆ. ಮುಂಬೈ ಮಹಾನಗರದಲ್ಲಿ ವಸತಿ ಮಾರಾಟದಲ್ಲಿ 46 ಪ್ರತಿಶತ ವಾರ್ಷಿಕ ಏರಿಕೆ ಕಂಡಿದೆ. ಇದೇ ಪುಣೆಯಲ್ಲಿ 63 ಪ್ರತಿಶತ ವಾರ್ಷಿಕ ಹೆಚ್ಚಳವನ್ನು ಕಂಡು ಬಂದಿದೆ.

ಹೊಸ ಆಸ್ತಿ ಪೂರೈಕೆಯ ವಿಷಯದಲ್ಲಿ ಪ್ರಮುಖ ಏಳು ನಗರಗಳಲ್ಲಿ 1.16 ಲಕ್ಷ ಮನೆಗಳು ಮಾರಾಟವಾಗಿ ಹೆಚ್ಚಳ ದಾಖಲಿಸಿವೆ. ಇದು 24 ಪ್ರತಿಶತ ವಾರ್ಷಿಕ ಬೆಳವಣಿಗೆಯಾಗಿದೆ. 2023 ರ ಮೂರನೇ ತ್ರೈಮಾಸಿಕದಲ್ಲಿ ಸುಮಾರು 36,250 ಯೂನಿಟ್‌ಗಳನ್ನು ಪ್ರಾರಂಭಿಸುವುದರೊಂದಿಗೆ MMR ಮತ್ತೆ ಈ ವರ್ಗದಲ್ಲಿ ಮುನ್ನಡೆ ಸಾಧಿಸಿತು, ಆದರೂ ಸಾಧಾರಣ 1 ಪ್ರತಿಶತ ವಾರ್ಷಿಕ ಬೆಳವಣಿಗೆ ದರವನ್ನು ಹೊಂದಿದೆ. ಮತ್ತೊಂದೆಡೆ, ಹೈದರಾಬಾದ್ 60 ಪ್ರತಿಶತ ವಾರ್ಷಿಕ ಏರಿಕೆಯನ್ನು ಅನುಭವಿಸಿತು, ಅದೇ ಅವಧಿಯಲ್ಲಿ ಸರಿಸುಮಾರು 24,900 ಘಟಕಗಳನ್ನು ಸೇರಿಸಿತು.

ವಸತಿ ಮಾರಾಟ ಮಾರುಕಟ್ಟೆಯು 1.5 ಕೋಟಿಗಿಂತ ಹೆಚ್ಚಿನ ಬೆಲೆಯ ಐಷಾರಾಮಿ ಮನೆಗಳ ಮಾರಾಟವಾಗಿದೆ. ಇದು ಒಟ್ಟಾರೆ ಮಾರಾಟದಲ್ಲಿ ಒಟ್ಟು ಷೇರಿನ 27 ಪ್ರತಿಶತವನ್ನು ಹೊಂದಿದೆ. ಇದು ಕಳೆದ ಐದು ವರ್ಷಗಳಲ್ಲಿ ಅತ್ಯಧಿಕ ಎಂದು ತಿಳಿಸಲಾಗಿದೆ. ಹೊಸ ಹೆಚ್ಚಳದ ಹೊರತಾಗಿಯೂ, ಅಗ್ರ ಏಳು ನಗರಗಳಲ್ಲಿ ವಸತಿ ಸಂಗ್ರಹವು ವಾರ್ಷಿಕವಾಗಿ 3 ಪ್ರತಿಶತದಷ್ಟು ಕುಸಿತವನ್ನು ಕಂಡಿದೆ, 2022 ರಲ್ಲಿ ಸರಿಸುಮಾರು 6.30 ಲಕ್ಷ ಮನೆಗಳಿಂದ 2023 ರಲ್ಲಿ ಸುಮಾರು 6.10 ಲಕ್ಷ ಮನೆಗಳಿಗೆ ಇದು ಇಳಿಕೆಯಾಗಿದೆ.

ಹಿಂದಿನ ವರ್ಷದ ಅದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ಅಗ್ರ ಏಳು ನಗರಗಳಲ್ಲಿನ ಸರಾಸರಿ ವಸತಿ ಬೆಲೆಗಳು ಒಟ್ಟಾರೆಯಾಗಿ 2023 ರಲ್ಲಿ 11 ಶೇಕಡಾ ಬೆಳವಣಿಗೆಯನ್ನು ಕಂಡಿವೆ. ಹೈದರಾಬಾದ್ 18 ಪ್ರತಿಶತ ವಾರ್ಷಿಕ ಬೆಳವಣಿಗೆಯೊಂದಿಗೆ ಮಾರಾಟ ಬೆಳವಣಿಗೆಯನ್ನು ಮುನ್ನಡೆಸಿದೆ. 14 ಪ್ರತಿಶತ ಹೆಚ್ಚಳದೊಂದಿಗೆ ಬೆಂಗಳೂರು ನಂತರದ ಸ್ಥಾನದಲ್ಲಿದೆ.

ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ವಸತಿ ಮಾರುಕಟ್ಟೆಯ ಗಮನಾರ್ಹ ಹೆಚ್ಚಳ ಮುಂದುವರಿಯುವ ನಿರೀಕ್ಷೆಯಿದೆ. ಇತ್ತೀಚಿನ ಎರಡು ವಿತ್ತೀಯ ನೀತಿಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ವಹಿಸಿದ ರೆಪೋ ದರದ ಸ್ಥಿರತೆಯಿಂದ ಮುಂದುವರಿದ ಆರೋಗ್ಯಕರ ಮಾರಾಟವು ಕನಿಷ್ಠ ಭಾಗಶಃ ಕಾರಣವಾಗಿದೆ ಎಂದು ಅನರಾಕ್ ಅಧ್ಯಕ್ಷ ಅನುಜ್ ಪುರಿ ಹೇಳಿದ್ದಾರೆ.

ಅನೇಕ ಪ್ರಮುಖ ಮತ್ತು ಹೆಸರಾಂತ ಡೆವಲಪರ್‌ಗಳು ಮುಂಬರುವ ಹಬ್ಬದ ಋತುವಿನಲ್ಲಿ ದೇಶದ ಏಳು ನಗರಗಳಲ್ಲಿ ಹೊಸ ಪ್ರಾಜೆಕ್ಟ್ ಗಳನ್ನು ಕಾರ್ಯಗತಗೊಳಿಸಲು ಮುಂದಾಗಿದ್ದಾರೆ. ಈ ಡೆವಲಪರ್‌ಗಳ ಪ್ರಾಜೆಕ್ಟ್‌ಗಳತ್ತ ಮನೆ ಖರೀದಿದಾರರ ಬೇಡಿಕೆಯು ಹೆಚ್ಚಾಗಿದ್ದು, ದಾಖಲೆಯ ಮಾರಾಟವನ್ನು ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಹೆಚ್ಚುತ್ತಿರುವ ಆದಾಯದ ಮಟ್ಟದಿಂದ ಮನೆಯನ್ನು ಹೊಂದಲು ಜನರ ಹೆಚ್ಚುತ್ತಿರುವ ಆಕಾಂಕ್ಷೆಯು ಕಳೆದ ಎರಡು ವರ್ಷಗಳಿಂದ ಬೇಡಿಕೆಯ ಹೆಚ್ಚಳಕ್ಕೆ ಕಾರಣವಾಗಿದೆ. ಈ ಪ್ರವೃತ್ತಿಯು ನಿರೀಕ್ಷಿತ ಭವಿಷ್ಯದಲ್ಲಿ ಮುಂದುವರಿಯುವ ನಿರೀಕ್ಷೆಯಿದೆ ಎಂದು ಗುರುಗ್ರಾಮ್ ಮೂಲದ ರಿಯಾಲ್ಟಿ ಸಂಸ್ಥೆ ಕ್ರಿಸುಮಿ ಕಾರ್ಪೊರೇಷನ್ ವ್ಯವಸ್ಥಾಪಕ ನಿರ್ದೇಶಕ ಮೋಹಿತ್ ಜೈನ್ ಹೇಳಿದ್ದಾರೆ.

ಉನ್ನತ ಮಟ್ಟದ ಜೀವನ ಅನುಭವಗಳ ಬಯಕೆಯ ನಡುವೆ ಐಷಾರಾಮಿ ವಸತಿಗಳ ಬೇಡಿಕೆಯು ಬಲವಾಗಿ ಉಳಿಯುವ ಸಾಧ್ಯತೆಯಿದೆ. ಐಷಾರಾಮಿ ಮನೆಗಳ ಬೇಡಿಕೆಯೊಂದಿಗೆ ವೇಗವನ್ನು ಇಟ್ಟುಕೊಂಡು, ಪೂರೈಕೆಯು ಬಲವಾಗಿ ಉಳಿಯುವ ನಿರೀಕ್ಷೆಯಿದೆ ಎಂದು ಜೈನ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+