ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನ ಪ್ರಯಾಣ ದರದಲ್ಲಿ ಭಾರೀ ಬದಲಾವಣೆ?

|
Google Oneindia Kannada News

ನವದೆಹಲಿ, ಆಗಸ್ಟ್‌ 10: ಕೋವಿಡ್‌ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗ ಸರ್ಕಾರವು ವಿಮಾನ ದರಗಳ ಮೇಲೆ ವಿಧಿಸಿದ್ದ ಮಿತಿಗಳನ್ನು ಕೊನೆಗೊಳಿಸಲಿದ್ದು, ಆಗಸ್ಟ್ 31 ರಿಂದ ಪ್ರಯಾಣಿಕರಿಗೆ ಏನು ಶುಲ್ಕ ವಿಧಿಸಬೇಕೆಂದು ನಿರ್ಧರಿಸಲು ವಿಮಾನಯಾನ ಸಂಸ್ಥೆಗಳು ಮುಕ್ತವಾಗಿರುತ್ತವೆ.

ನಿಗದಿತ ದೇಶೀಯ ಹಾರಾಟಗಳ ಪ್ರಸ್ತುತ ಸ್ಥಿತಿಯನ್ನು ಪರಿಶೀಲಿಸಿದ ನಂತರ ವಿಮಾನ ಪ್ರಯಾಣಕ್ಕಾಗಿ ಪ್ರಯಾಣಿಕರ ಬೇಡಿಕೆ ಹೆಚ್ಚಾಗಿರುವುದು ಕಂಡು ಬಂದಿದೆ. ಇದೇ ಆಗಸ್ಟ್ 31ರಿಂದ ಜಾರಿಗೆ ಬರುವಂತೆ ವಿಮಾನ ದರಗಳ ಬಗ್ಗೆ ಕಾಲಕಾಲಕ್ಕೆ ಸೂಚಿಸಲಾದ ದರ ಪಟ್ಟಿಗಳನ್ನು ತೆಗೆದುಹಾಕಲು ನಿರ್ಧರಿಸಲಾಗಿದೆ ಎಂದು ಸಚಿವಾಲಯ ಟ್ವೀಟ್ ಮಾಡಿದೆ.

7th Pay Commission: ಸರ್ಕಾರಿ ನೌಕರರ ಕಾಯುವಿಕೆ ಶೀಘ್ರದಲ್ಲೇ ಅಂತ್ಯ!7th Pay Commission: ಸರ್ಕಾರಿ ನೌಕರರ ಕಾಯುವಿಕೆ ಶೀಘ್ರದಲ್ಲೇ ಅಂತ್ಯ!

ಪ್ರಸ್ತುತ ವಿಮಾನಯಾನ ಸಂಸ್ಥೆಗಳು ದೊಡ್ಡ ನಷ್ಟವನ್ನು ಅನುಭವಿಸುತ್ತಿವೆ. ಈಗ ದರಗಳ ಮೇಲೆ ಯಾವುದೇ ನಿರ್ಬಂಧಗಳಿಲ್ಲದೆ ದರಗಳ ಮೇಲಿನ ಮತ್ತು ಕೆಳಗಿನ ಎರಡೂ ಮಿತಿಗಳನ್ನು ತೆಗೆದುಹಾಕಲಾಗಿದೆ. ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರ ಸಂಖ್ಯೆ ಹೆಚ್ಚು ಮಾಡಲು ಟಿಕೆಟ್‌ಗಳನ್ನು ರಿಯಾಯಿತಿ ಮಾಡಬಹುದು.

Huge change in airline fare

"ಪ್ರಯಾಣಿಕರಿಗೆ ಇದು ಧನಾತ್ಮಕವಾಗಿರುತ್ತದೆ ಎಂದು ನಾನು ನೋಡುತ್ತೇನೆ. ಏಕೆಂದರೆ ದರಗಳು ಕಡಿಮೆಯಾಗಬೇಕು ಎಂದು ಸರಿನ್ ಮತ್ತು ಕೋ ಕಾರ್ಯಾಚರಣೆಯ ಮುಖ್ಯಸ್ಥ ವಿನಮ್ರಾ ಲೊಂಗಾನಿ ತಿಳಿಸಿದ್ದಾರೆ. ಗ್ರಾಹಕರು ಮತ್ತು ವಿಮಾನಯಾನ ಸಂಸ್ಥೆಗಳಿಗೆ ಇದು ಅತ್ಯುತ್ತಮ ಕ್ರಮ ಎಂದು ನಾನು ಭಾವಿಸುತ್ತೇನೆ" ಎಂದು ವಾಯುಯಾನ ತಜ್ಞ ಪರ್ವೇಜ್ ದಮಾನಿಯಾ ಹೇಳಿದ್ದಾರೆ.

ಡಿಎ ಹೆಚ್ಚಳ ನಿರೀಕ್ಷೆ ಸುಳ್ಳಲ್ಲ, ಹೊಸ ವೇತನ ಆಯೋಗ ಸದ್ಯಕ್ಕಿಲ್ಲಡಿಎ ಹೆಚ್ಚಳ ನಿರೀಕ್ಷೆ ಸುಳ್ಳಲ್ಲ, ಹೊಸ ವೇತನ ಆಯೋಗ ಸದ್ಯಕ್ಕಿಲ್ಲ

"ವಿಮಾನ ಇಂಧನದ ದೈನಂದಿನ ಬೇಡಿಕೆ ಮತ್ತು ಬೆಲೆಗಳನ್ನು ಕೂಲಂಕಷವಾಗಿ ವಿಶ್ಲೇಷಿಸಿದ ನಂತರ ವಿಮಾನ ದರದ ಮಿತಿಗಳನ್ನು ತೆಗೆದುಹಾಕುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಬೆಲೆಗಳ ಸ್ಥಿರೀಕರಣವು ಪ್ರಾರಂಭವಾಗಿದ್ದು, ಮುಂದಿನ ದಿನಗಳಲ್ಲಿ ಈ ಕ್ಷೇತ್ರವು ದೇಶೀಯ ಸಂಚಾರದಲ್ಲಿ ಬೆಳವಣಿಗೆಗೆ ಸಿದ್ಧವಾಗಿದೆ ಎಂದು ನಮಗೆ ಖಚಿತವಾಗಿದೆ" ಎಂದು ವಿಮಾನಯಾನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಟ್ವೀಟ್ ಮಾಡಿದ್ದಾರೆ.

Huge change in airline fare

ವಿಮಾನ ಪ್ರಯಾಣದ ಮೇಲಿನ ನಿರ್ಬಂಧಗಳನ್ನು ಸಡಿಲಿಸುವುದರಿಂದ ಉಂಟಾಗುವ ಬೇಡಿಕೆಯಿಂದಾಗಿ ಟಿಕೆಟ್ ದರಗಳು ಏರಿಕೆಯಾಗುವುದನ್ನು ತಡೆಯಲು ವಿಮಾನದ ಅವಧಿಯನ್ನು ಆಧರಿಸಿ ಕನಿಷ್ಠ ಮತ್ತು ಗರಿಷ್ಠ ಬ್ಯಾಂಡ್ ಅನ್ನು ವಿಧಿಸುವ ಮೂಲಕ ಸರ್ಕಾರವು ದರಗಳನ್ನು ನಿಯಂತ್ರಿಸಿದೆ ಎನ್ನಲಾಗಿದೆ. ಸಾಂಕ್ರಾಮಿಕ ಸಮಯದಲ್ಲಿ ವಾಯುಯಾನ ಉದ್ಯಮಕ್ಕೆ ಅತ್ಯಂತ ಕೆಟ್ಟ ಹಾನಿಯಾಗಿತ್ತು.

English summary
Airlines will be free to decide what to charge passengers from August 31, when the government will end the caps it imposed on air fares when the Covid pandemic began.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X