Get Updates
Get notified of breaking news, exclusive insights, and must-see stories!

ಅತ್ಯಂತ ಹಗುರವಾದ ಹೆಚ್‌ಪಿ ಪ್ರೋಬುಕ್ ಬಿಡುಗಡೆ: ಫೀಚರ್ಸ್‌ ಏನಿದೆ?

ಬೆಂಗಳೂರು, ಡಿಸೆಂಬರ್ 21: ಸಣ್ಣ ವ್ಯವಹಾರಗಳ ಮಾಲೀಕರು ಮತ್ತು ಮೊಬೈಲ್ ವೃತ್ತಿಪರರ ಉತ್ಪಾದಕತೆಯನ್ನು ಹೆಚ್ಚು ಮಾಡುವ ಉದ್ದೇಶದಿಂದ ಎಚ್‌ಪಿ ಸೋಮವಾರ ಭಾರತದಲ್ಲಿ ಹೊಸ ಶ್ರೇಣಿಯ ಪ್ರೋಬುಕ್ ನೋಟ್ ಬುಕ್ ಗಳನ್ನು ಬಿಡುಗಡೆ ಮಾಡಿದೆ.

ಅತ್ಯಂತ ಹಗುರವಾದ ಈ ಪ್ರೋಬುಕ್‌ನಲ್ಲಿ ಸುಲಭವಾಗಿ ಎಲ್ಲಿ ಬೇಕಾದರೂ ಬಳಕೆ ಮಾಡಲು ಸಾಧ್ಯವಾಗುವಂತಹ ವೈಶಿಷ್ಟ್ಯತೆಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಈ ಮೂಲಕ ಗ್ರಾಹಕರು ಶಕ್ತಿಶಾಲಿಯಾದ ಭದ್ರತೆ ಮತ್ತು ಸಂಪರ್ಕದೊಂದಿಗೆ ತಮ್ಮ ವ್ಯವಹಾರಗಳ ಪ್ರಕ್ರಿಯೆಯನ್ನು ಇದರೊಂದಿಗೆ ಮಾಡಿಕೊಳ್ಳಬಹುದಾಗಿದೆ.

ಎಚ್ ಪಿ ಪ್ರೋಬುಕ್ 635 ಏರೋ ಜಿ7 ನೋಟ್ ಬುಕ್ಸ್ ಎಎಂಡಿ ಆಧಾರಿತ ಅತ್ಯಂತ ಹಗುರವಾದ ಬ್ಯುಸಿನೆಸ್ ನೋಟ್ ಬುಕ್ ಆಗಿದೆ. ಇದರ ತೂಕ 1 kg (2.2. ಪೌಂಡ್ ಗಳು)ಗಿಂತ ಕಡಿಮೆಯಿಂದ ಆರಂಭವಾಗಲಿದೆ. ಭಾರತದಲ್ಲಿ AMD RyzenTM 4000 Series Mobile Processors ಇದನ್ನು ಸಿದ್ಧಪಡಿಸಿದೆ.

 HP Launches New ProBook 635 Aero G7: Features, Price Details Here

ಎಚ್ ಪಿ ಏಷ್ಯಾ ಎಸ್ಎಂಬಿ ಔಟ್ ಲುಕ್ ವರದಿ 2020 ರ ಪ್ರಕಾರ, ಭಾರತದಲ್ಲಿ ಸಣ್ಣ ಮತ್ತು ಮಧ್ಯಮ ವ್ಯವಹಾರಗಳು (ಎಸ್ಎಂಬಿಗಳು) ಕೋವಿಡ್ ಪರಿಣಾಮದಿಂದ ತಮ್ಮ ಬಹುತೇಕ ಎಲ್ಲಾ ಬ್ಯಾಂಕಿಂಗ್ ವ್ಯವಹಾರಗಳನ್ನು ಡಿಜಿಟಲ್ ಗೆ ಪರಿವರ್ತನೆ ಮಾಡಿಕೊಂಡಿವೆ ಮತ್ತು ಕೋವಿಡ್ ನಂತರ ವ್ಯವಹಾರವನ್ನು ಮತ್ತಷ್ಟು ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಏಷ್ಯಾದ ಇತರೆ ದೇಶಗಳಿಗಿಂತ ಹೆಚ್ಚು ವಿಶ್ವಾಸವನ್ನು ಹೊಂದಿವೆ.

ಇದಲ್ಲದೇ, ಭಾರತದಲ್ಲಿನ ಎಸ್ಎಂಬಿಗಳು ತಮ್ಮ ವ್ಯವಹಾರಗಳನ್ನು ಡಿಜಿಟಲ್ ಮಾಡಿಕೊಳ್ಳುವುದು ಪ್ರಮುಖವಾಗಿದೆ ಎಂಬುದನ್ನು ಪರಿಗಣಿಸಿವೆ. ಸಮೀಕ್ಷೆ ನಡೆಸಿದ ನಾಲ್ಕನೇ ಮೂರರಷ್ಟು ಅಂದರೆ ಶೇ.75 ರಷ್ಟು ವ್ಯವಹಾರಸ್ಥರು ತಮ್ಮ ವ್ಯಾಪಾರ ಪ್ರಗತಿಗೆ ಡಿಜಿಟಲೀಕರಣ ಅತ್ಯಂತ ಅಗತ್ಯ ಅಥವಾ ಪ್ರಮುಖವಾಗಿದೆ ಎಂಬುದನ್ನು ನಂಬಿದ್ದಾರೆ. ದೇಶದ ಆರ್ಥಿಕತೆಯ ಪ್ರಗತಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವ ಎಸ್ಎಂಬಿಗಳು, ಉದ್ಯಮಿಗಳು ಮತ್ತು ಮೊಬೈಲ್ ವೃತ್ತಿಪರರನ್ನು ಗಮನದಲ್ಲಿಟ್ಟುಕೊಂಡೇ ಎಚ್ ಪಿ ಪ್ರೋಬುಕ್ 635 ಏರೋ ಜಿ7 ಯನ್ನು ವಿನ್ಯಾಸಗೊಳಿಸಲಾಗಿದೆ.

 HP Launches New ProBook 635 Aero G7: Features, Price Details Here

ಎಚ್ ಪಿ ಪ್ರೋಬುಕ್ 635 ಏರೋ ಜಿ7 ವೈಶಿಷ್ಟ್ಯತೆಗಳು:
ಸಂಪರ್ಕ: ಬಳಕೆದಾರರು ವೈ-ಫೈ 6 ಮತ್ತು ಕ್ಯಾಟ್ 9 4ಜಿ ಎಲ್ ಟಿಇ ವೈರ್ ಲೆಸ್ ವಾತಾವರಣದಲ್ಲಿಯೂ ವೇಗವಾಗಿ ಮತ್ತು ವಿಶ್ವಾಸಾರ್ಹವಾಗಿ ಗಿಗಾಬೈಟ್ ವೇಗದಲ್ಲಿ ಸಂಪರ್ಕವನ್ನು ಸುಲಭವಾಗಿ ಮತ್ತು ಸುರಕ್ಷಿತವಾಗಿ ಪ್ರವೇಶಿಸುವಂತೆ ಮಾಡಲಿದೆ.

ಭದ್ರತೆ:ಎಚ್ ಪಿ ಶ್ಯೂರ್ ವ್ಯೂ ರಿಫ್ಲೆಕ್ಟ್ ಬಳಕೆದಾರರಿಗೆ ವಿವೇಚನೆಯಿಂದ ಕಾರ್ಯ ನಿರ್ವಹಣೆ ಮಾಡಲು ಅನುವು ಮಾಡಿಕೊಡುತ್ತದೆ. ಅದರಲ್ಲಿನ ಕಾಪರ್ ಬಣ್ಣದ ಪ್ರತಿಫಲಿತ ಗೌಪ್ಯತೆಯ ಪರದೆಯು ವಿಶ್ವದ ಅತ್ಯಾಧುನಿಕ ಗೌಪ್ಯತೆಯಾಗಿದೆ. ಇದು ಪ್ರಕಾಶಮಾನವಾದ ಮತ್ತು ಮಂದ ಬೆಳಕಿನ ಪರಿಸರದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ.

ದೀರ್ಘ ಬಾಳಿಕೆಯ ಬ್ಯಾಟರಿ: 42ಡಬ್ಲ್ಯೂಎಚ್ ಬ್ಯಾಟರಿಯೊಂದಿಗೆ ಕಾನ್ಫಿಗರ್ ಮಾಡಿರುವ ಇದರ ಬ್ಯಾಟರಿ 18 ಗಂಟೆಗಳವರೆಗೆ ಬರುತ್ತದೆ ಮತ್ತು 53 ಡಬ್ಲ್ಯೂಎಚ್ ಬ್ಯಾಟರಿಯೊಂದಿಗೆ 23 ಗಂಟೆಗಳ ಬಾಳಿಕೆ ಬರುತ್ತದೆ. ಕೇವಲ 30 ನಿಮಿಷಗಳಲ್ಲಿ ಶೇ.50 ರಷ್ಟು ಬ್ಯಾಟರಿ ಚಾರ್ಜ್ ಆಗುವ ಸಾಮರ್ಥ್ಯವನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಪ್ರೋಬುಕ್ 635 ಏರೋ ಇಂದಿನಿಂದ ಲಭ್ಯವಿದ್ದು, ಆರಂಭಿಕ ಬೆಲೆ 74,999/- ರೂಪಾಯಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+