ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಟ್ಸಾಪ್ ನಲ್ಲಿ ಗ್ರೂಪ್ ವಿಡಿಯೋ ಕಾಲಿಂಗ್ ಮಾಡುವುದು ಹೇಗೆ?

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 03: ಅತ್ಯಂತ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಷನ್ ವಾಟ್ಸಾಪ್ ತನ್ನ ಬಳಕೆದಾರರಿಗೆ ಇತ್ತೀಚೆಗೆ ಹಲವು ಹೊಸ ಸೌಲಭ್ಯಗಳು, ಕಠಿಣ ಭದ್ರತಾ ನಿಯಮಗಳನ್ನು ಹೊರ ತಂದಿದೆ.

ಕಳೆದ ಮೇ ತಿಂಗಳಿನಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಘೋಷಿಸಿದಂತೆ ವಾಯ್ಸ್ ಹಾಗೂ ವಿಡಿಯೋ ಕಾಲಿಂಗ್ ಸೌಲಭ್ಯವನ್ನು ಬಳಕೆದಾರರಿಗೆ ಒದಗಿಸಲಾಗಿದೆ. ಇದು ಎಲ್ಲಾ ಬಳಕೆದಾರರಿಗೂ ಮುಕ್ತವಾಗಿದ್ದು, ಮಾರುಕಟ್ಟೆಯಲ್ಲಿ ಬಳಕೆಯಲ್ಲಿರುವ ಗ್ರೂಪ್ ವಾಯ್ಸ್ /ವಿಡಿಯೋ ಕಾಲಿಂಗ್ ಸೌಲಭ್ಯಗಳಿಗಿಂತ ಹೆಚ್ಚು ಸುರಕ್ಷಿತವಾಗಿದೆ ಎಂದು ವಾಟ್ಸಾಪ್ ಹೇಳಿದೆ.

ವಾಟ್ಸಪ್ ಮೆಸೇಜ್ ಹ್ಯಾಕ್ ಹೇಗೆ? ಸೇಫ್ ಮಾಡೋದು ಹೇಗೆ?ವಾಟ್ಸಪ್ ಮೆಸೇಜ್ ಹ್ಯಾಕ್ ಹೇಗೆ? ಸೇಫ್ ಮಾಡೋದು ಹೇಗೆ?

ವಿಡಿಯೋ ಕಾಲಿಂಗ್ ಸೌಲಭ್ಯವು ಐಒಎಸ್ ಹಾಗೂ ಆಂಡ್ರಾಯ್ಡ್ ಎರಡರಲ್ಲೂ ಸುಲಭವಾಗಿ ಕಾರ್ಯ ನಿರ್ವಹಿಸುತ್ತದೆ. ಆದರೆ, ಒಮ್ಮೆಗೆ ನಾಲ್ವರು ಮಾತ್ರ ಗ್ರೂಪ್ ಕಾಲಿಂಗ್ ನಲ್ಲಿ ತೊಡಗಿಕೊಳ್ಳಬಹುದು.

How to make group video/ Voice call on Whatsapp

2016ರಲ್ಲೇ ಒಬ್ಬರಿಂದ ಒಬ್ಬರಿಗೆ ವಿಡಿಯೋ ಕಾಲ್ ಮಾಡುವ ಸೌಲಭ್ಯ ನೀಡಲಾಗಿತ್ತು. ಆದರೆ, ಗ್ರೂಪ್ ವಿಡಿಯೋ ಕಾಲಿಂಗ್ ಸೌಲಭ್ಯ ನೀಡಲು ತಡವಾಗಿದೆ.

ವಾಟ್ಸಪ್ ಹಳೆ ಸ್ಟೇಟಸ್ ಸಿಗುತ್ತಿದೆ? ಹೇಗೆ ಸೆಟ್ ಮಾಡಿಕೊಳ್ಳೋದು ವಾಟ್ಸಪ್ ಹಳೆ ಸ್ಟೇಟಸ್ ಸಿಗುತ್ತಿದೆ? ಹೇಗೆ ಸೆಟ್ ಮಾಡಿಕೊಳ್ಳೋದು

ವಾಟ್ಸಾಪ್ ವಿಡಿಯೋ ಕಾಲಿಂಗ್ ಹೇಗೆ?

ನೀವು ಈಗಾಗಲೇ ವಾಟ್ಸಾಪ್ ನಲ್ಲಿ ವಿಡಿಯೋ/ವಾಯ್ಸ್ ಕಾಲ್ ಮಾಡುವ ವಿಧಾನದಲ್ಲೇ ಗ್ರೂಪ್ ಕಾಲಿಂಗ್ ಸಾಧ್ಯ. ಇದಕ್ಕಾಗಿ ಪ್ರತ್ಯೇಕ ಬಟನ್/ಚಿಹ್ನೆ ನೀಡಲಾಗಿಲ್ಲ.

* ಮೊದಲಿಗೆ ಒಬ್ಬರಿಗೆ ವಾಯ್ಸ್/ವಿಡಿಯೋ ಕಾಲ್ ಮಾಡಿ
* ಅವರು ಕಾಲ್ ಸ್ವೀಕರಿಸಿದ ಬಳಿಕ ನಿಮ್ಮ ಮೊಬೈಲ್ ಸ್ಕ್ರೀನ್ ನ ಬಲತುದಿ ಮೇಲ್ಭಾಗದಲ್ಲಿ ಕಾಣುವ ಚಿಹ್ನೆಯನ್ನು ಒತ್ತಿ
* ನಿಮ್ಮ ಕಾಂಟ್ಯಾಕ್ಟ್ ಪಟ್ಟಿ ತೋರಿಸಲಾಗುತ್ತದೆ. ಇದರಿಂದ ಮತ್ತೊಬ್ಬರನ್ನು ಆಯ್ಕೆ ಮಾಡಿಕೊಳ್ಳಿ.
* ಇದೇ ವಿಧಾನದಲ್ಲಿ ಮೂವರನ್ನು ಗ್ರೂಪ್ ವಿಡಿಯೋ/ವಾಯ್ಸ್ ಕಾಲ್ ಗೆ ಸೇರಿಸಬಹುದು.
* ಒಂದು ಬಾರಿಗೆ ನಾಲ್ವರು ವಿಡಿಯೋ ಕಾಲಿಂಗ್ ನಲ್ಲಿ ತೊಡಗಿಕೊಳ್ಳಬಹುದು.

ಕಡಿಮೆ ಸಾಮರ್ಥ್ಯದ ನೆಟ್ವರ್ಕ್ ಇರುವ ಕಡೆಗಳಲ್ಲೂ ಈ ಸೌಲಭ್ಯ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಫೇಸ್ಬುಕ್ ಒಡೆತನ ವಾಟ್ಸಾಪ್ ಸಂಸ್ಥೆ ಹೇಳಿದೆ.

English summary
Most popular messaging Application has recently rolled out group calling feature with both voice and video support. Here is steps how to make group video/ Voice call on Whatsapp.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X