ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

UAN -ಹಳೆ ಭವಿಷ್ಯನಿಧಿ ಖಾತೆಗಳ ವಿಲೀನ ಈಗ ಸಾಧ್ಯ, ಹೇಗೆ?

By Mahesh
|
Google Oneindia Kannada News

ಬೆಂಗಳೂರು, ಡಿಸೆಂಬರ್ 10: ನಿವೃತ್ತಿ ಭವಿಷ್ಯನಿಧಿ ಸಂಸ್ಥೆ (EPFO) ತನ್ನ ಸದಸ್ಯರಿಗೆ ಹೊಸ ಸೌಲಭ್ಯವನ್ನು ನೀಡುತ್ತಿದ್ದು, ಹಳೆ ಇಪಿಎಫ್ ಖಾತೆಗಳನ್ನು UAN ಜತೆ ವಿಲೀನ ಮಾಡಬಹುದಾಗಿದೆ.

ಸುಮಾರು 4.5 ಕೋಟಿ ಸದಸ್ಯರಿಗಾಗಿ ಹೊಸ ಸೌಲಭ್ಯದ ಲಾಭ ಸಿಗಲಿದೆ. UAN ಸಂಖ್ಯೆ ಜತೆ EPFO ಚಂದಾದಾರರು ಒಟ್ಟು 10 ಖಾತೆಗಳನ್ನು ವಿಲೀನ ಮಾಡಲು ಅವಕಾಶ ನೀಡಲಾಗಿದೆ. 120ಕ್ಕೂ ಹೆಚ್ಚು EPFO ಕಚೇರಿಗಳಿಗೆ ಅತಿ ಶೀಘ್ರದಲ್ಲಿ ಈ ಸೌಲಭ್ಯ ಅಳವಡಿಸುವಂತೆ ನಿರ್ದೇಶನವನ್ನೂ ನೀಡಲಾಗಿದೆ.

How to link your previous EPF accounts with your UAN

ಹಾಲಿ ನಿಯಮದ ಪ್ರಕಾರ, EPFO ಚಂದಾದಾರರು UAN ಬಳಸಿಕೊಂಡು ಆನ್ ಲೈನ್ ನಲ್ಲಿ ಪ್ರತ್ಯೇಕವಾಗಿ ಟ್ರಾನ್ಸಫರ್ ಕ್ಲೇಮ್ ಮಾಡಬೇಕಾಗಿತ್ತು. ಆದರೆ, ಹೊಸ ಸೌಲಭ್ಯದಿಂದಾಗಿ, ಕ್ಲೇಮು ಮಾಡುವುದು ಸುಲಭವಾಗಲಿದೆ. UAN ಸಕ್ರಿಯವಾಗಿದ್ದಲ್ಲಿ ಹಾಗೂ ಬ್ಯಾಂಕ್ ಖಾತೆಗಳೊಂದಿಗೆ ಲಿಂಕ್ ಆಗಿದ್ದಲ್ಲಿ ಸುಲಭವಾಗಿ ಟ್ರಾನ್ಸ್ ಫರ್ ಕ್ಲೇಮು ಕೂಡಾ ಸಾಧ್ಯ.

UAN ಜತೆ ಹಳೆ ಇಪಿಎಫ್ ಖಾತೆ ಲಿಂಕ್ ಮಾಡುವುದು ಹೇಗೆ?1)

1) ಇಪಿಎಫ್ಒದ ಅಧಿಕೃತ ವೆಬ್ ತಾಣ(http://www.epfindia.gov.in)ಕ್ಕೆ ಭೇಟಿ ಕೊಡಿ.

2) ಮುಖ್ಯಪುಟದ ಡ್ರಾಪ್ ಡೌನ್ ಮೆನುವಿನಲ್ಲಿರುವ Our Services ಮೇಲೆ ಕ್ಲಿಕ್ ಮಾಡಿ ನಂತರ For Employees ಆಯ್ಕೆ ಮಾಡಿಕೊಳ್ಳಿ

3) "One employee-One EPF account' ಲಿಂಕ್ ಕ್ಲಿಕ್ ಮಾಡಿ, ಪುಟದ ಕೆಳಗಡೆ ಎಡತುದಿಯಲ್ಲಿ ಈ ಲಿಂಕ್ ಸಿಗುತ್ತದೆ.

4) ಪುಟ ತೆರೆದ ಮೇಲೆ ವಿವರಗಳನ್ನು ಸಲ್ಲಿಸಿ, ನೋಂದಾಯಿಸಿದ ಮೊಬೈಲ್ ಸಂಖ್ಯೆ, ಯುಎಎನ್, ಇಪಿಎಫ್ ಖಾತೆಯ ಹಾಲಿ ಸದಸ್ಯತ್ವ ಐಡಿ..ಇತ್ಯಾದಿ

ವಿವರಗಳನ್ನು ಸಲ್ಲಿಸಿದ ಬಳಿಕ ಒಟಿಪಿ ಸಿಗಲಿದ್ದು, ನಿಮ್ಮ ಮೊಬೈಲ್ ಗೆ ಕಳಿಸಲಾಗುತ್ತದೆ. ಒಟಿಪಿ ಸಲ್ಲಿಸಿದ ಬಳಿಕ ನಿಮ್ಮ 10 ಹಳೆ ಖಾತೆಗಳನ್ನು ಯುಎಎನ್ ಜತೆ ಜೋಡಣೆ ಮಾಡಬಹುದಾಗಿದೆ.

English summary
The retirement fund body Employees' Provident Fund Organisation (EPFO) has introduced a new facility, using which a member can merge up to 10 EPF accounts into his universal account number (UAN).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X