ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ಲೈಟ್ ಟಿಕೆಟ್ ಜತೆ ಆಧಾರ್ ಜೋಡಣೆ ಹೇಗೆ? ಏಕೆ?

By Mahesh
|
Google Oneindia Kannada News

Recommended Video

ಆಧಾರ್ ನಂಬರ್ ನೊಂದಿಗೆ ಫ್ಲೈಟ್ ಟಿಕೆಟ್ ಲಿಂಕ್ | ಹೇಗೆ, ಯಾಕೆ? | Oneindia Kannada

ಬೆಂಗಳೂರು, ನವೆಂಬರ್ 23: ಸಕಲ ನಾಗರಿಕ ಸೇವಾ ಸೌಲಭ್ಯಗಳ ಜತೆ ಆಧಾರ್ ಜೋಡಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಮುಂಬರುವ ವರ್ಷದಿಂದ ದೇಶಿ ವಿಮಾನಯಾನದಲ್ಲಿ ಭಾರಿ ಬದಲಾವಣೆಯಾಗಲಿದ್ದು, ವಿಮಾನ ಟಿಕೆಟ್ ಜತೆ ಆಧಾರ್ ನಂಬರ್ ಲಿಂಕ್ ಮಾಡುವ ಮೂಲಕ ಸುಲಭವಾಗಿ ಚೆಕ್ ಇನ್ ಮಾಡಬಹುದಾಗಿದೆ.

ಕೆಐಎಎಲ್ ನ ಸ್ಮಾರ್ಟ್ ಬೋರ್ಡಿಂಗ್ ವ್ಯವಸ್ಥೆ ಉಪಯೋಗವೇನು?ಕೆಐಎಎಲ್ ನ ಸ್ಮಾರ್ಟ್ ಬೋರ್ಡಿಂಗ್ ವ್ಯವಸ್ಥೆ ಉಪಯೋಗವೇನು?

ವಿಮಾನ ನಿಲ್ದಾಣದಲ್ಲಿ ಚೆಕ್ ಇನ್, ದಾಖಲೆಗಳ ಪರಿಶೀಲನೆ, ಬ್ಯಾಗೇಜ್ ಚೆಕಿಂಗ್ ಹೀಗೆ ಸಮಾರು ಹೊತ್ತು ಕಾಯಬೇಕಾಗುತ್ತದೆ. ಆದರೆ, 2018ರಿಂದ ದೇಶಿ ವಿಮಾನಯಾನದಲ್ಲಿ ಬದಲಾವಣೆ ತರಲಾಗುತ್ತಿದ್ದು, ಆಧಾರ್ ಜೊತೆಗೆ ಫ್ಲೈಟ್ ಟಿಕೆಟ್ ಜೋಡಣೆ ಮಾಡಿಕೊಂಡರೆ, ತಡೆರಹಿತ ವಿಮಾನಯಾನ ಸಾಧ್ಯವಾಗಲಿದೆ.

ಬೆಂಗಳೂರಲ್ಲಿ ವಿಮಾನವೇರಲು ಆಧಾರ್ ಕಡ್ಡಾಯ!ಬೆಂಗಳೂರಲ್ಲಿ ವಿಮಾನವೇರಲು ಆಧಾರ್ ಕಡ್ಡಾಯ!

ಆರಂಭದ ಹಂತದಲ್ಲಿ ಆಧಾರ್ ಆಧಾರಿತ ತಡೆರಹಿತ ವಾಯುಯಾನ- 'ಡಿಜಿ ಯಾತ್ರಾ ಯೋಜನೆ' ಅಡಿಯಲ್ಲಿ ಕೋಲ್ಕತ್ತಾ, ಅಹಮದಾಬಾದ್ ಮತ್ತು ವಿಜಯವಾಡ ವಿಮಾನ ನಿಲ್ದಾಣಗಳಲ್ಲಿ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ.

ಆಧಾರ್ ಜೋಡಣೆ: ಈ ನಾಲ್ಕು ಡೆಡ್ ಲೈನ್ ನೆನಪಿರಲಿಆಧಾರ್ ಜೋಡಣೆ: ಈ ನಾಲ್ಕು ಡೆಡ್ ಲೈನ್ ನೆನಪಿರಲಿ

ನಂತರ ಉಳಿದ ನಿಲ್ದಾಣಗಳಿಗೂ ಇದು ವಿಸ್ತರಿಸಲಿದೆ. ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ? ಏನೆಲ್ಲ ಲಾಭವಿದೆ? ಮುಂದೆ ಓದಿ...

ಈ ರೀತಿ ಸೌಲಭ್ಯ ಎಲ್ಲಿ ಕಾಣಬಹುದು

ಈ ರೀತಿ ಸೌಲಭ್ಯ ಎಲ್ಲಿ ಕಾಣಬಹುದು

ಸುಲಭವಾಗಿ ಚೆಕ್ ಇನ್ ಮಾಡುವ ಸೌಲಭ್ಯವನ್ನು ಶಿಫೊಲ್(ಅರ್ಮಸ್ಟರ್ಡ್ಯಾಂ) ಆಸ್ಟ್ರೇಲಿಯಾದ ಬ್ರಿಸ್ಬೇನ್, ದೋಹಾದ ಹಮದ್ ನಲ್ಲಿ ಕೇವಲ ಐಡಿ ಕಾರ್ಡ್ ತೋರಿಸಿ ಚೆಕ್ ಇನ್ ಮಾಡಬಹುದಾಗಿದೆ. ಫಿಂಗರ್ ಪ್ರಿಂಟ್ ಹಾಗೂ ಐರಿಸ್ ಸ್ಕ್ಯಾನ್ ಮಾಡಬೇಕಾಗುತ್ತದೆ ಎಂದು ಎಎಐ ಚೇರ್ಮನ್ ಗುರುಪ್ರಸಾದ್ ಮೊಹಪಾತ್ರ ಹೇಳಿದ್ದಾರೆ. ಕೋಲ್ಕತ್ತಾ, ಅಹಮದಾಬಾದ್ ಮತ್ತು ವಿಜಯವಾಡದಲ್ಲಿ 2018ರಲ್ಲಿ ಇಂಥ ವ್ಯವಸ್ಥೆ ಜಾರಿಗೆ ಬರಲಿದೆ.

ಆಧಾರ್ ಲಿಂಕ್ ಮಾಡುವ ವಿಧಾನ

ಆಧಾರ್ ಲಿಂಕ್ ಮಾಡುವ ವಿಧಾನ

* ವಿಮಾನದ ಟಿಕೆಟ್ ಬುಕ್ ಮಾಡುವಾಗಲೇ ಆಧಾರ್ ನಂಬರ್ ನಮೂದಿಸಬೇಕು.
* ವಿಮಾನಯಾನ ಟಿಕೆಟ್ ನಲ್ಲಿರುವ ಬಾರ್ ಕೋಡ್ ಗಳನ್ನು ವಿಮಾನ ನಿಲ್ದಾಣದ ಇ-ಗೇಟ್ ಗಳಲ್ಲಿ ಸ್ಕ್ಯಾನ್ ಮಾಡಲಾಗುತ್ತದೆ. ಇದರಿಂದ ಆಧಾರ್ ಹಾಗೂ ಟಿಕೆಟ್ ಮಾಹಿತಿ ಸಿಗಲ್ದೆ.

* ನಂತರ ಬಯೋಮೆಟ್ರಿಕ್ ವಿಧಾನದಿಂದ ಪ್ರಯಾಣಿಕರ ಇನ್ನಷ್ಟು ಮಾಹಿತಿ ಪಡೆದು ದೃಢಪಡಿಸಲಾಗುತ್ತದೆ.
* ಎಲ್ಲಾ ಮಾಹಿತಿಗಳು ಹೊಂದಾಣಿಕೆಯಾದ ಬಳಿಕವಷ್ಟೇ ಇ ಗೇಟ್ ತೆರೆಯುತ್ತದೆ.

ಇ ಗೇಟ್ ಗಳು ಕೆಲವಡೆ ಈಗಲೂ ಲಭ್ಯ

ಇ ಗೇಟ್ ಗಳು ಕೆಲವಡೆ ಈಗಲೂ ಲಭ್ಯ

ಜಿಎಂಆರ್ ಸಂಸ್ಥೆ ಒಡೆತನದ ಹೈದಾರಾಬಾದಿನ ವಿಮಾನನಿಲ್ದಾಣದಲ್ಲಿ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಫೈರ್ ಫಾಕ್ಸ್ ಹಾಗೂ ಜಿವಿಕೆ ಗ್ರೂಪ್ ನವರು ಈ ರೀತಿ ಇ ಗೇಟ್ ಅಳವಡಿಸಿ, ಪ್ರಯೋಗಿಕವಾಗಿ ವ್ಯವಸ್ಥೆ ಕಲ್ಪಿಸಿದ್ದಾರೆ. ಈ ಮೂಲಕ ತ್ವರಿತಗತಿಯಲ್ಲಿ ಚೆಕ್ ಇನ್ ಸಾಧ್ಯವಾಗಿದೆ. ಇದಲ್ಲದೆ ಬ್ಯಾಗೇಜ್ ಟ್ಯಾಗಿಂಗ್ ಗಾಗಿ ಕಾಯುವ ವ್ಯವಸ್ಥೆಯನ್ನು ಬೆಂಗಳೂರಿನಲ್ಲಿ ಬದಲಾಯಿಸಲಾಗಿದೆ.

ಸ್ಮಾರ್ಟ್ ವ್ಯವಸ್ಥೆ ಉದ್ದೇಶವೇನು?

ಸ್ಮಾರ್ಟ್ ವ್ಯವಸ್ಥೆ ಉದ್ದೇಶವೇನು?

ಆಧಾರ್ ಆಧಾರಿತ ಎಂಟ್ರಿ ಹಾಗೂ ಬಯೋಮೆಟ್ರಿಕ್ ಇ ಬೋರ್ಡಿಂಗ್ ವ್ಯವಸ್ಥೆ ಒಳಗೊಂಡಿರುವ ಡಿಜಿಯಾತ್ರಾ ಸೇವೆ ಮೂಲಕ ಪ್ರತಿ ಪ್ರಯಾಣಿಕರ ಗುರುತು ಪತ್ತೆ ಸಾಧ್ಯ. ವಿಮಾನಯಾನ ಪ್ರಯಾಣಿಕರ ಐಡೆಂಟಿಟಿ ಹಾಗೂ ಮಾಹಿತಿ ಲಭ್ಯತೆ ಬಗ್ಗೆ ಹಾಲಿ ವ್ಯವಸ್ಥೆಯಲ್ಲಿರುವ ಎಲ್ಲಾ ಲೋಪಗಳನ್ನು ಹೊಸ ವ್ಯವಸ್ಥೆ ಸರಿ ಪಡಿಸಲಿದ್ದು, ದುಷ್ಕರ್ಮಿಗಳನ್ನು ಸುಲಭವಾಗಿ ತಡೆಹಿಡಿಯಬಹುದು.

English summary
How to link your Aadhaar number with flight ticket for faster airport entry.Under Modi government's 'digi yatra' programme. Airports Authority of India (AAI) has plans to implement the programme in other airports too.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X