ಎಚ್ಚರ! ಬಂದಿದ್ದಾರೆ ನೂತನ ಮಾದರಿಯ ಆನ್ ಲೈನ್ ವಂಚಕರು!!
ಕೇಂದ್ರ ಸರ್ಕಾರದ ನಗದು ರಹಿತ ಸಮಾಜದ ಪರಿಕಲ್ಪನೆಯಡಿಯಲ್ಲಿ ಅಂತರ್ಜಾಲ ಆಧಾರಿತ ಸೇವೆಗಳು ಹೆಚ್ಚಾಗುತ್ತಿರುವ ಈ ಸಮಯದ ದುರ್ಲಾಭ ಪಡೆಯಲು ಕೆಲ ಆನ್ ಲೈನ್ ವಂಚಕರು ಲೆಕ್ಕ ಹಾಕಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಭಾರತೀಯ ಸಮಾಜವನ್ನು ಕ್ಯಾಶ್ ಲೆಸ್ ವ್ಯವಹಾರವುಳ್ಳ ಸಮಾಜವನ್ನಾಗಿ ಪರಿವರ್ತಿಸಲು ಯೋಜನೆ ರೂಪಿಸಿದೆ. ಅದಕ್ಕೆ ಪೂರಕವಾಗಿ ಬೇಕಾದ ಎಲ್ಲಾ ಸವಲತ್ತುಗಳನ್ನೂ ಅದು ನೀಡಲು ಮುಂದಾಗಿದೆ.
ಎಲ್ಲರಿಗೂ ಅಂತರ್ಜಾಲ, ಎಲ್ಲೆಡೆ ಆಧಾರ್ ಆಧಾರಿತ ಪೇಮೆಂಟ್, ಭೀಮ್ ಆ್ಯಪ್ ಮುಂತಾದ ಸೌಲಭ್ಯಗಳನ್ನು ನೀಡುವ ಮೂಲಕ ಜನರು ಸಂಪೂರ್ಣವಾಗಿ ಬ್ಯಾಂಕ್ ಮೂಲಕವೇ ವ್ಯವಹರಿಸುವಂತೆ ಮಾಡಿ ಕಪ್ಪುಹಣವನ್ನು ನಿಗ್ರಹಿಸಲು ಲೆಕ್ಕಾಚಾರ ಹಾಕಿದೆ.[ಬೇನಾಮಿ ಆಸ್ತಿ ಹೊಂದಿದವರಿಗೂ, ಪಡೆದವರಿಗೂ ತಕ್ಕ ಶಾಸ್ತಿ!]
ಆದರೆ, ಕೇಂದ್ರ ಸರ್ಕಾರದ ಈ ಯೋಜನೆಗಳಲ್ಲೇ ದುರ್ಲಾಭ ಪಡೆಯಲು ಕೆಲವಾರು ಕಾಣದ ಕೈಗಳು ಯತ್ನಿಸುತ್ತಿದ್ದು ಅಂತರ್ಜಾಲದಲ್ಲಿ ಗುಪ್ತವಾಗಿದ್ದುಕೊಂಡು ಅಥವಾ ಆನ್ ಲೈನ್ ಮೂಲಕ ನಿಗದಿತ ಸೇವೆ ನೀಡುವ ನೆಪದಲ್ಲಿ ಲಕ್ಷಾಂತರ ಮಂದಿಯ ಮಾಹಿತಿಯನ್ನು ಕದಿಯುವ ಚೋರರು ಹುಟ್ಟಿಕೊಂಡಿದ್ದಾರೆಂದು ಮೂಲಗಳು ಹೇಳಿವೆ.
ಹಾಗಾದರೆ, ಇಂಥ ಕಂಪನಿಗಳು ಯಾವ್ಯಾವ ರೀತಿಯಲ್ಲಿ ನೆಟ್ ಬಳಕೆದಾರರನ್ನು ವಂಚಿಸುತ್ತಿದ್ದಾರೆ, ಎಲ್ಲಿಲ್ಲಿ ಯಾವ ರೀತಿ ನಮ್ಮ ಮಾಹಿತಿ ಸೋರಿ ಹೋಗಬಹುದು, ಇದಕ್ಕೆ ಪರಿಹಾರವೇನು ಎಂಬ ಬಗ್ಗೆ ಕೆಲವಾರು ಕುತೂಹಲ ವಿಚಾರಗಳು ಇಲ್ಲಿವೆ.[ಭಾರತಕ್ಕೆ 5ಜಿ, ರಿಲಯನ್ಸ್ ಜಿಯೋ- ಸ್ಯಾಮ್ ಸಂಗ್ ಗೆ ಪ್ರಶಸ್ತಿ]

ಡೇಟಾ ಆನ್ ಸೇಲ್
ಇತ್ತೀಚೆಗೆ, ಡೇಟಾ ಬ್ರೋಕರ್ ಗಳೆಂಬ ಹೆಸರಿನಲ್ಲಿ ಹೊಸ ತಂಡಗಳು ರಚನೆಯಾಗಿವೆ. ಇವರು, ಆನ್ ಲೈನ್ ಮೂಲಕ ಕೆಲವಾರು ಅಂತರ್ಜಾಲ ಆಫರ್ ಗಳನ್ನು ಗ್ರಾಹಕರಿಗೆ ನೀಡುತ್ತವೆ. ಇವರು ನೆಟ್ ಸೌಲಭ್ಯಗಳನ್ನು ನೀಡುವಂತೆ ನಟಿಸಿ ಗ್ರಾಹಕರ ಅಮೂಲ್ಯ ಮಾಹಿತಿಗಳನ್ನು ಕೆಲವರಿಗೆ ಮಾರಾಟ ಮಾಡಿಕೊಳ್ಳುತ್ತಾರೆ.

ಮಾಹಿತಿ ಕದಿಯುವ ಚೋರರು
ಕೆಲವಾರು ವೆಬ್ ಸೈಟ್ ಗಳನ್ನು ಸೈನ್ ಅಪ್ ಮಾಡುವಾಗ ನಾವು ನಮ್ಮ ಕೆಲವು ಮಾಹಿತಿಗಳನ್ನು ನೀಡುತ್ತೇವೆಲ್ಲವೇ? ಇಂಥ ಮಾಹಿತಿಗಳನ್ನು ಕದಿಯಲಿಕ್ಕೆಂದೇ ಕೆಲವಾರು ಹ್ಯಾಕರ್ ಗಳು ಹುಟ್ಟಿಕೊಂಡಿದ್ದಾರೆ. ಇಂಥವರು, ನಿಮ್ಮ ಯೂಸರ್ ನೇಮ್, ಪಾಸ್ ವರ್ಡ್ ಇತ್ಯಾದಿ ಮಾಹಿತಿಗಳನ್ನು ಕಾಣದ ಕೈಗಳಿಗೆ ನೀಡಬಲ್ಲರು.

ನಕಲಿ ಆಧಾರ್ ಸಂಖ್ಯೆ ಸೃಷ್ಟಿ ಮಾಡ್ತಾರೆ
ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನೇ ಆನ್ ಲೈನ್ ಮೂಲಕ ಕದ್ದು, ನಿಮ್ಮ ಸಂಖ್ಯೆಯ ಮೂಲ ಅಡಕದಲ್ಲಿರುವ ನಿಮ್ಮ ಹಸ್ತಾಕ್ಷರ, ಫೋಟೋ, ಬೆರಳಿನ ಗುರುತು ಎಲ್ಲವನ್ನೂ ಬೇರೆಡೆ ನಕಲು ಮಾಡಿ, ಆನಂತರ ನಿಮ್ಮೆಲ್ಲಾ ಬಯೋಮೆಟ್ರಿಕ್ ಮಾಹಿತಿಗಳನ್ನು ಬದಲಾಯಿಸುತ್ತಾರೆ. ಆದರೆ, ಆಧಾರ್ ಕಾರ್ಡ್ ಅನ್ನು ಸಾಮಾನ್ಯವಾಗಿ ನೀಡುವ ವಿಶೇಷ ಗುರುತಿನ ಚೀಟಿ ಪ್ರಾಧಿಕಾರದಲ್ಲಿ (ಯುಐಎಐ) ನಿಮ್ಮ ಮೂಲ ಮಾಹಿತಿ ಹಾಗೇ ಇರುತ್ತದೆ.
ಆದರೆ, ಇಲ್ಲಿ ತಮಗೆ ಬೇಕಾದಂತೆ ಮಾಹಿತಿಯನ್ನು ತಿದ್ದುಪಡಿ ಮಾಡುವ ಚೋರರು, ನಿಮ್ಮ ಆಧಾರ್ ಸಂಖ್ಯೆಯ ಮೂಲಕವೇ ಕೆಲವಾರು ವ್ಯವಹಾರಗಳನ್ನು ಮಾಡುತ್ತಾರೆ. ಆದರೆ, ಅಂಥ ವ್ಯವಹಾರಗಳು ತನಿಖೆಗೆ ಒಳಗಾದಾಗ ತನಿಖಾಧಿಕಾರಿಗಳು ನಿಮ್ಮ ಬಾಗಿಲನ್ನೇ ತಟ್ಟುವಂತೆ ತಂತ್ರಜ್ಞಾನ ಸಿದ್ಧಪಡಿಸಿರುತ್ತಾರೆ.

ಆಧಾರ್ ಲಿಂಕ್ ಮಾಡೋರ ಮೇಲೆ ದೃಷ್ಟಿ
ಈಗ, ಗ್ಯಾಸ್ ಸಿಲಿಂಡರ್ ಸೌಲಭ್ಯದಿಂದ ಹಿಡಿದು ಶಿಕ್ಷಣದವರೆಗೆ ಸಿಗುವ ಸರ್ಕಾರದ ಬಹುತೇಕ ಸೌಲಭ್ಯಗಳಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ. ಇದರ ಜತೆಯಲ್ಲೇ, ಖಾಸಗಿ ಕಂಪನಿಗಳೂ ಆಧಾರ್ ಕಾರ್ಡ್ ತಮ್ಮ ಸೇವೆಗಳಿಗೆ ಆಧಾರ್ ಕಾರ್ಡ್ ಕೇಳುತ್ತಿವೆ. ಇಲ್ಲಿಯೂ ತಮ್ಮ ಕೈಚಳಕ ತೋರುತ್ತಿರುವ ಚೋರರು, ನಾವು ಯಾವುದೇ ಖಾಸಗಿ ಕಂಪನಿಗಳಿಗೆ ನೀಡುವ ಆಧಾರ್ ಕಾರ್ಡ್ ಸಂಖ್ಯೆಯನ್ನು ಎತ್ತಲು ಹೊಂಚು ಹಾಕುತ್ತವೆ ಎನ್ನಲಾಗಿದೆ. ಅಲ್ಲದೆ, ಬ್ಯಾಂಕ್ ಅಕೌಂಟ್ ಗಳಿಗೆ ಆಧಾರ್ ಲಿಂಗ್ ಮಾಡಿಸುವ ನಕಲಿ ಸೇವಾ ಕಂಪನಿಗಳ ಮೂಲಕವೂ ಬ್ಯಾಂಕ್ ಖಾತೆಯ ವಿವರಗಳನ್ನು ಪಡೆಯಲು ಅವು ಮುಂದಾಗಿವೆ ಎಂದು ಹೇಳಲಾಗಿದೆ.

ಶ್ರೀಸಾಮಾನ್ಯನಿಗೂ ಸಿಗಲಿ ಪ್ರಬಲ ಅಸ್ತ್ರ
ನಗದು ರಹಿತ ಸಮಾಜ ಮಾಡಬೇಕೆಂದರೆ, ಮೊದಲು ಅದಕ್ಕೆ ಬೇಕಾದ ತಂತ್ರಜ್ಞಾನ, ಆ ತಂತ್ರಜ್ಞಾನ ದುರುಪಯೋಗಗೊಳ್ಳದಂತೆ ಬಿಗಿ ಭದ್ರತೆ, ದಿನದ 24 ಗಂಟೆಗಳೂ ಜನರಿಗೆ ನೆರವಾಗುವ ಸಿಬ್ಬಂದಿಯ ಅನುಕೂಲತೆ ಹಾಗೂ ಕೆಲವಾರು ಕಾನೂನುಗಳಲ್ಲಿ ಬದಲಾವಣೆಯ ಅಗತ್ಯವಿದೆ.
ಸದ್ಯಕ್ಕೆ ಚಾಲ್ತಿಯಲ್ಲಿರುವ ಕಾನೂನಿನ ಪ್ರಕಾರ, ಯಾವುದೇ ವ್ಯಕ್ತಿಯ ಆಧಾರ್ ಕಾರ್ಡ್ ದುರುಪಯೋಗಗೊಂಡಲ್ಲಿ ಅದರ ವಿರುದ್ಧ ಕೇವಲ ಆಧಾರ್ ಕಾರ್ಡ್ ನೀಡುವ ಸಂಸ್ಥೆ ಮಾತ್ರ ಪ್ರಕರಣ ದಾಖಲಿಸುವ ವ್ಯವಸ್ಥೆಯಿದೆ. ಕಾರ್ಡುದಾರನಿಗೆ ತನ್ನ ವಿರುದ್ಧ ಆದ ಅನ್ಯಾಯಕ್ಕೆ ಪ್ರಕರಣ ದಾಖಲಿಸುವ ಸ್ವಾತಂತ್ರ್ಯವಿಲ್ಲ. ಇಂಥ ವಿಚಾರಗಳಲ್ಲಿ ಮತ್ತಷ್ಟು ಸರಳೀಕರಣವಾದರೆ ಹಾಗೂ ಬಿಗಿ ಭದ್ರತೆ ಹೆಚ್ಚಾದರೆ ವಂಚನೆಯಾಗುವುದನ್ನು ತಪ್ಪಿಸಬಹುದಾಗಿದೆ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications