• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

New Trend: ಚಿನ್ನದ ಆಭರಣ ಬೇಕೇ?, ಆನ್‌ಲೈನ್ ಅಂಗಳಕ್ಕೆ ಬನ್ನಿ!

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 29: ಚಿನ್ನ ಅಂದ್ರೆ ಯಾರಿಗೆ ಬೇಡ ಹೇಳಿ. ಭಾರತದಲ್ಲಿ ಎಲ್ಲದಕ್ಕೂ ಆನ್‌ಲೈನ್ ಶಾಪಿಂಗ್ ಎನ್ನುವ ಮಂದಿ ಇದೀಗ ಚಿನ್ನ ಖರೀದಿಗೂ ಆನ್‌ಲೈನ್ ಅಂಗಳವನ್ನು ನೆಚ್ಚಿಕೊಂಡಿದ್ದಾರೆ. ಆನ್‌ಲೈನ್ ಮೂಲಕವೇ ಆಭರಣ ಖರೀದಿ ಭರಾಟೆ ಜೋರಾಗಿದೆ.

ಭಾರತದಲ್ಲಿ ಕಳೆದ ಕೆಲವು ವರ್ಷಗಳಿಂದ ಆನ್‌ಲೈನ್ ಮೂಲಕ ಚಿನ್ನದ ಆಭರಣ ಖರೀದಿಯಲ್ಲಿ ಕ್ಷಿಪ್ರ ಬೆಳವಣಿಗೆ ಕಂಡು ಬಂದಿದೆ. ಕೋಟ್ಯಧಿಪತಿಗಳ ಆನ್‌ಲೈನ್ ಬೇಡಿಕೆ ಹೆಚ್ಚಾಗಿರುವುದೇ ಈ ಬದಲಾವಣೆಗೆ ಕಾರಣ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ಹೇಳಿದೆ.

Infographics: ಸೆ.28ರಂದು ಬದಲಾಗಿಲ್ಲ ಬಂಗಾರ-ಬೆಳ್ಳಿ ಬೆಲೆ!Infographics: ಸೆ.28ರಂದು ಬದಲಾಗಿಲ್ಲ ಬಂಗಾರ-ಬೆಳ್ಳಿ ಬೆಲೆ!

18 ರಿಂದ 45ರ ನಡುವಿನ ವಯಸ್ಸಿನ ಗ್ರಾಹಕರು ಅತಿಹೆಚ್ಚಾಗಿ ಆನ್‌ಲೈನ್ ಮೂಲಕ ಆಭರಣವನ್ನು ಖರೀದಿ ಮಾಡುತ್ತಿದ್ದಾರೆ. ಈ ರೀತಿ ಆನ್‌ಲೈನ್ ಆಭರಣ ಖರೀದಿಯಲ್ಲಿ ಏರಿಕೆಯಾಗಿದ್ದರೂ, ಸರಾಸರಿ ಖರೀದಿಯ ಗಾತ್ರವು 5 ರಿಂದ 10 ಗ್ರಾಂ ಮಟ್ಟಿಗೆ ಸೀಮಿತವಾಗಿ ಉಳಿದು ಬಿಟ್ಟಿದೆ.

ಭಾರತೀಯ ಚಿನ್ನದ ಮಾರುಕಟ್ಟೆ ಬಗ್ಗೆ ವಿಶ್ಲೇಷಣಾ ವರದಿ

ಭಾರತೀಯ ಚಿನ್ನದ ಮಾರುಕಟ್ಟೆ ಬಗ್ಗೆ ವಿಶ್ಲೇಷಣಾ ವರದಿ

ದೇಶದಲ್ಲಿ ಚಿನ್ನದ ಮಾರುಕಟ್ಟೆ ಯಾವ ರೀತಿ ಕಾರ್ಯ ನಿರ್ವಹಿಸುತ್ತಿದೆ ಎಂಬುದರ ಕುರಿತು ಅಧ್ಯಯನ ನಡೆಸಲಾಗಿರುವ ವಿಶ್ಲೇಷಣಾ ವರದಿಯನ್ನು ಬಿಡುಗಡೆ ಮಾಡಲಾಗಿದೆ. 'ಆಭರಣ ಮಾರುಕಟ್ಟೆ ವಿನ್ಯಾಸ' ಎಂಬ ವರದಿಯನ್ನು ವರ್ಲ್ಡ್ ಗೋಲ್ಡ್ ಕೌನ್ಸಿಲ್ ಪ್ರಕಟಿಸಿದೆ. ಕಳೆದ ಕೆಲವು ವರ್ಷಗಳಿಂದ ಭಾರತದ ಚಿನ್ನಾಭರಣ ಮಾರುಕಟ್ಟೆಯಲ್ಲಿ ಗಮನಾರ್ಹ ಬದಲಾವಣೆ ಆಗಿರುವುದನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸರ್ಕಾರದ ನಿಯಮ ಮತ್ತು ಗ್ರಾಹಕರ ನಡುವಳಿಕೆಯಲ್ಲಿನ ಬದಲಾವಣೆಯು ಸಣ್ಣ ಮತ್ತು ಸ್ವಾತಂತ್ರ್ಯ ಅಂಗಡಿಗಳ ಮೇಲೆ ಆಕ್ರಮಣಕಾರಿ ಪರಿಣಾಮವನ್ನು ಬೀರಿದೆ. ಇದೇ ಸಮಯಕ್ಕೆ ಮಾರುಕಟ್ಟೆಯ ಮೌಲ್ಯವು ಸ್ಥಿರವಾಗಿ ಏರಿಕೆ ಕಂಡು ಬಂದಿರುವುದನ್ನು ಗಮನಿಸಬೇಕಾಗಿದೆ.

ಯಾವ ರೀತಿ ಚಿನ್ನಕ್ಕೆ ಆನ್‌ಲೈನ್ ಅಂಗಳದಲ್ಲಿ ಬೇಡಿಕೆ?

ಯಾವ ರೀತಿ ಚಿನ್ನಕ್ಕೆ ಆನ್‌ಲೈನ್ ಅಂಗಳದಲ್ಲಿ ಬೇಡಿಕೆ?

ಎಲ್ಲಾ ರೀತಿ ಚಿನ್ನದ ಆಭರಣಗಳು ಆನ್‌ಲೈನ್ ಅಂಗಳದಲ್ಲಿ ಸಿಗುತ್ತವೆ. ಆದರೆ ಗ್ರಾಹಕರು ಯಾವ ರೀತಿಯ ಚಿನ್ನದ ಆಭರಣಗಳ ಖರೀದಿಗೆ ಆನ್‌ಲೈನ್ ಅನ್ನು ನೆಚ್ಚಿಕೊಂಡಿದ್ದಾರೆ ಎಂಬುದನ್ನು ಇಲ್ಲಿ ಅರಿತುಕೊಳ್ಳಬೇಕಾಗಿದೆ. ಆನ್‌ಲೈನ್ ಮೂಲಕ ಖರೀದಿದಾರರು 18 ಕ್ಯಾರೆಟ್ ರೀತಿ ಹಗುರವಾದ ಚಿನ್ನದಲ್ಲಿ ತಯಾರಿಸಿದ ದೈನಂದಿನ ಉಡುಗೆ, ಫ್ಯಾಷನ್ ಆಭರಣಗಳನ್ನು ಖರೀದಿಸಲು ಹೆಚ್ಚು ಆಸಕ್ತಿ ಹೊಂದಿರುವುದಾಗಿ ಜಾಗತಿಕ ಬುಲಿಯನ್ ಸಂಸ್ಥೆ ಹೇಳಿದೆ. ಮುಂದಿನ ಐದು ವರ್ಷಗಳಲ್ಲಿ ಆನ್‌ಲೈನ್ ಆಭರಣಗಳ ಮಾರುಕಟ್ಟೆ ಪಾಲು ಶೇಕಡಾ 7-10ಕ್ಕೆ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.

ಚಿನ್ನದ ವ್ಯಾಪಾರಿಗಳು ಬದಲಾವಣೆಗೆ ಒಗ್ಗಿಕೊಳ್ಳುವುದು ಅನಿವಾರ್ಯ

ಚಿನ್ನದ ವ್ಯಾಪಾರಿಗಳು ಬದಲಾವಣೆಗೆ ಒಗ್ಗಿಕೊಳ್ಳುವುದು ಅನಿವಾರ್ಯ

"ಈಗಾಗಲೇ ಸ್ಥಾಪಿಸಲಾಗಿರುವ ಆಭರಣ ಪಾರ್ಕ್‌ಗಳಲ್ಲಿ ಕಾರ್ಯವೈಖರಿಯ ಸ್ಥಿತಿ ಮತ್ತು ನೈತಿಕ ಮಾನದಂಡಗಳ ಮೇಲೆ ಕಾಳಜಿಯನ್ನು ಹೊಂದಲು ಸಹಕಾರಿ ಆಗಿದೆ. ಇದು ಉತ್ಪಾದನಾ ಉದ್ಯಮದ ಬೆಳವಣಿಗೆಗೆ ಅಡ್ಡಿಯಾಗುವ ಅಡೆತಡೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದರ ಜೊತೆಗೆ ಬೇಡಿಕೆಯನ್ನು ಧನಾತ್ಮಕವಾಗಿ ಬೆಂಬಲಿಸುತ್ತದೆ," ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್‌ನ ಭಾರತದ ಪ್ರಾದೇಶಿಕ ಸಿಇಒ ಸೋಮಸುಂದರಂ ಪಿಆರ್ ಹೇಳಿದ್ದಾರೆ.

"ಇಡೀ ಕ್ಷೇತ್ರವೇ ಅಭಿವೃದ್ಧಿಯಾಗಿದೆ, ಆದರೆ ಬದಲಾವಣೆ ಹೊಸ ಅಲೆಯಲ್ಲಿ ಆರ್ಥಿಕತೆ ಮತ್ತು ತಂತ್ರಜ್ಞಾನ ಅಳವಡಿಕೆಯನ್ನು ಅನುಸರಿಸುವಲ್ಲಿ ಉದ್ಯಮವು ಹಲವು ರೀತಿ ಸಮಸ್ಯೆಗಳನ್ನು ಎದುರಿಸುತ್ತಿದೆ. ಬದಲಾವಣೆಗೆ ಒಗ್ಗಿಕೊಳ್ಳದೇ ಹಿಂದುಳಿದ ಪರಂಪರೆಯನ್ನು ಪಾಲನೆ ಮಾಡುತ್ತಿರುವವರು ಇದರಿಂದ ಭವಿಷ್ಯದಲ್ಲಿ ಅಪಾಯವನ್ನು ಎದುರಿಸಬಹುದು," ಎಂದು ಸೋಮಸುಂದರಂ ತಿಳಿಸಿದ್ದಾರೆ.

ಜಿಎಸ್‌ಟಿ ಮತ್ತು ನೋಟ್ ಬ್ಯಾನ್ ಪ್ರಭಾವ

ಜಿಎಸ್‌ಟಿ ಮತ್ತು ನೋಟ್ ಬ್ಯಾನ್ ಪ್ರಭಾವ

ಭಾರತದಲ್ಲಿ ಜಾರಿಗೊಳಿಸಲಾದ ನೋಟ್ ಬ್ಯಾನ್ ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪದ್ಧತಿ ಜಾರಿಯು ಈ ವಲಯವನ್ನು ಹೆಚ್ಚು ಸಂಘಟಿತ ಹಾಗೂ ಪಾರದರ್ಶಕಗೊಳಿಸಲು ಸಹಕಾರಿ ಆಯಿತು. ಅದಾಗ್ಯೂ, ಚಿಲ್ಲರೇ ಆಭರಣ ಮಾರಾಟ ವಲಯವು ಇನ್ನೂ ಹಲವು ರೀತಿ ಸವಾಲುಗಳನ್ನು ಎದುರಿಸುತ್ತಿದೆ. "ಭಾರತದ ವಜ್ರ ಮತ್ತು ಆಭರಣ ಉದ್ಯಮವು ಇನ್ನೂ ಬ್ಯಾಂಕ್ ಸಾಲವನ್ನು ಪಡೆದುಕೊಳ್ಳುವಲ್ಲಿ ಹೆಣಗಾಡುವ ಪರಿಸ್ಥಿತಿ ಇದೆ. ಈ ವಲಯಕ್ಕೆ ನೀಡಲಾದ ಶೇ.20ಕ್ಕಿಂತ ಹೆಚ್ಚು ಸಾಲಗಳು ಅನುತ್ಪಾದಕ ಆಸ್ತಿಗಳಾಗಿ (NPA ಗಳು) ಮಾರ್ಪಟ್ಟಿವೆ. ಇದರ ಪರಿಣಾಮವಾಗಿ ವಜ್ರ ಮತ್ತು ಆಭರಣ ಉದ್ಯಮವು ಭಾರತದ ಒಟ್ಟು ಸಾಲ ವಿತರಣೆಯಲ್ಲಿ ಕೇವಲ ಶೇ.2.7ರಷ್ಟಿದೆ," ಎಂದು ಕೌನ್ಸಿಲ್ ಹೇಳಿದೆ.

ಚಿನ್ನದ ಆಭರಣ ತಯಾರಿಕೆಯ ಹಿಂದು-ಮುಂದು

ಚಿನ್ನದ ಆಭರಣ ತಯಾರಿಕೆಯ ಹಿಂದು-ಮುಂದು

ಮಾಸಿಕ ಚಿನ್ನದ ಯೋಜನೆಯನ್ನು ಅವಲಂಬಿಸಿರುವ ಅಥವಾ ಹಣದ ಸಾಲದಾತರಾಗಿ ಕಾರ್ಯನಿರ್ವಹಿಸುವ ಸಣ್ಣ ಸ್ವತಂತ್ರ ಆಭರಣ ವ್ಯಾಪಾರಿಗಳಿಗೆ ಇನ್ನಷ್ಟು ತೊಂದರೆ ಆಗಬಹುದು. ಜಾಗತಿಕ ಮಟ್ಟದಲ್ಲಿ ಚಿನ್ನದ ಆಭರಣಗಳ ತಯಾರಿಕೆಯು ಅತಿದೊಡ್ಡ ಮಾರುಕಟ್ಟೆ ಆಗಿದ್ದು, ಭಾರತದಲ್ಲಿ ಅದರ ಉತ್ಪಾದನಾ ಉದ್ಯಮವು ಇನ್ನೂ ವಿಭಜಿತ ಹಾಗೂ ಅಸಂಘಟಿತ ರೂಪದಲ್ಲಿದೆ.

ಭಾರತದಲ್ಲಿ ಶೇ.15 ರಿಂದ 20ರಷ್ಟು ಚಿನ್ನದ ಆಭರಣ ಉತ್ಪಾದನಾ ಘಟಕಗಳು ಸಂಘಟಿತ ಹಾಗೂ ಅತ್ಯುನ್ನತ ಸೌಲಭ್ಯವನ್ನು ಹೊಂದುವ ಮೂಲಕ ಕಾರ್ಯ ನಿರ್ವಹಿಸುತ್ತಿವೆ. ಈ ಶೇಕಡಾವಾರು ಪ್ರಮಾಣವು ಕಳೆದ ಐದು ವರ್ಷಗಳ ಹಿಂದೆ ಶೇ.10ರಷ್ಟಿತ್ತು ಎಂದು ವರದಿಯು ಉಲ್ಲೇಖಿಸಿದೆ.

English summary
How Online jewellery sales in India rapid growth over the past few years. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X