New Income Tax: ತೆರಿಗೆದಾರರಿಗೆ ಆಗುವ ಉಳಿತಾಯ ಎಷ್ಟು?

ನಿರೀಕ್ಷೆಯಂತೆ ಕೇಂದ್ರ ಸರ್ಕಾರ ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ತೆರಿಗೆದಾರರಿಗೆ ಸಿಹಿ ಸುದ್ದಿ ಕೊಟ್ಟಿದೆ. ಶನಿವಾರ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆದಾಯ ತೆರಿಗೆದಾರರಿಗೆ ಭರ್ಜರಿ ಕೊಡುಗೆ ಘೋಷಿಸಿದರು. ವಾರ್ಷಿಕ 12 ಲಕ್ಷ ರೂಪಾಯಿವರೆಗೆ ಆದಾಯ ಹೊಂದಿರುವವರಿಗೆ ತೆರಿಗೆ ವಿನಾಯಿತಿ ಘೋಷಣೆ ಮಾಡಲಾಗಿದ್ದು ಮಧ್ಯಮ ವರ್ಗದ ಜನರ ಬಹುದಿನದ ಬೇಡಿಕೆ ಈಡೇರಿಕೆಯಾಗಿದೆ.

ಹೊಸ ಆದಾಯ ತೆರಿಗೆ ಸ್ಲ್ಯಾಬ್‌ ಅಡಿಯಲ್ಲಿ ವಾರ್ಷಿಕ 12.75 ಲಕ್ಷ ರೂಪಾಯಿವರೆಗೆ ಆದಾಯ ಹೊಂದಿರುವವರು ಯಾವುದೇ ತೆರಿಗೆ ಪಾವತಿಸುವಂತಿಲ್ಲ ಎಂದು ಹೇಳಿದೆ. ಈ ಮೊದಲು ಇದು 7 ಲಕ್ಷ ರೂಪಾಯಿವರೆಗೆ ಇತ್ತು, ಈಗ ಅದನ್ನು 12 ಲಕ್ಷಕ್ಕೆ ಹೆಚ್ಚಿಸಲಾಗಿದೆ.

how much taxpayers save money after new income tax slabs

ಹೊಸ ತೆರಿಗೆ ಪದ್ಧತಿ ಸ್ಲ್ಯಾಬ್ ಹೀಗಿದೆ

  • ₹ 4 ಲಕ್ಷದವರೆಗೆ ಆದಾಯ ಇದ್ದರೆ ಯಾವುದೇ ತೆರಿಗೆ ಇಲ್ಲ.
  • ₹4 ರಿಂದ ₹8 ಲಕ್ಷ ಆದಾಯ ಹೊಂದಿದ್ದರೆ 5% ತೆರಿಗೆ
  • ₹8 ರಿಂದ ₹12 ಲಕ್ಷ ಆದಾಯ ಹೊಂದಿದ್ದರೆ 10% ತೆರಿಗೆ
  • ₹12 ರಿಂದ ₹16 ಲಕ್ಷ ಆದಾಯ ಹೊಂದಿದ್ದರೆ 20% ತೆರಿಗೆ
  • ₹20 ರಿಂದ ₹24 ಲಕ್ಷ ಆದಾಯ ಹೊಂದಿದ್ದರೆ 25% ತೆರಿಗೆ
  • ₹24 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿದ್ದ- 30% ತೆರಿಗೆ

ಹೊಸ ಪದ್ಧತಿಯಿಂದ ಎಷ್ಟು ಉಳಿತಾಯ

12 ಲಕ್ಷ ರೂಪಾಯಿವರೆಗೆ ಆದಾಯ ಹೊಂದಿರುವವರಿಗೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ. ಹೊಸ ತೆರಿಗೆ ಪದ್ಧತಿಯಲ್ಲಿ 12 ಲಕ್ಷ ರೂ.ಗಳ ಆದಾಯ ಹೊಂದಿರುವ ತೆರಿಗೆದಾರರು 80,000 ರೂಪಾಯಿಗಳಷ್ಟು ತೆರಿಗೆ ಪ್ರಯೋಜನವನ್ನು ಪಡೆಯುತ್ತಾರೆ. ಅಂದರೆ ಬರೋಬ್ಬರಿ 80,000 ರೂಪಾಯಿ ತೆರಿಗೆ ಹಣ ಉಳಿತಾಯವಾಗಲಿದೆ.

₹18 ಲಕ್ಷ ಆದಾಯ ಹೊಂದಿರುವ ವ್ಯಕ್ತಿಯು ಹೊಸ ತೆರಿಗೆ ಸ್ಲ್ಯಾಬ್‌ನಿಂದಾಗಿ 70,000 ರೂ.ಗಳ ತೆರಿಗೆ ಉಳಿತಾಯ ಮಾಡುತ್ತಾರೆ. ₹25 ಲಕ್ಷ ರೂಪಾಯಿವರೆಗೆ ವಾರ್ಷಿಕ ಆದಾಯ ಹೊಂದಿರುವವರಿಗೆ ಹೊಸ ತೆರಿಗೆ ಸ್ಲ್ಯಾಬ್‌ನಿಂದಾಗಿ 1,10,000 ರೂ.ಗಳ ತೆರಿಗೆ ಉಳಿತಾಯವಾಗಲಿದೆ.

10 ಲಕ್ಷ ರೂಪಾಯಿವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಬಹುದು ಎಂದು ನಿರೀಕ್ಷೆ ಮಾಡಲಾಗಿತ್ತಾದರೂ ಕೇಂದ್ರ ಸರ್ಕಾರ 12 ಲಕ್ಷ ರೂಪಾಯಿವರೆಗೆ ತೆರಿಗೆ ವಿನಾಯಿತಿ ಘೋಷಣೆ ಮಾಡುವ ಮೂಲಕ ಸಂಬಳದಾರರಿಗೆ, ನೌಕರರಿಗೆ, ಮಧ್ಯಮವರ್ಗದವರಿಗೆ ಭರ್ಜರಿ ಕೊಡುಗೆ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+