ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ರೀಡಂ 251 ಮಾರಾಟದಿಂದ ರಿಂಗಿಂಗ್ ಬೆಲ್ ಗೆ ಲಾಭ ಎಷ್ಟು?

By Mahesh
|
Google Oneindia Kannada News

ನೋಯ್ಡಾ, ಫೆ.22: ರಿಂಗಿಂಗ್ ಬೆಲ್ ಪ್ರೈ ಲಿಮಿಟೆಡ್ ಸಂಸ್ಥೆ ಹೊರ ತಂದಿರುವ ಅತ್ಯಂತ ಕಡಿಮೆ ಬೆಲೆಯ ಸ್ಮಾಟ್ ಫೋನ್ 'ಫ್ರೀಡಂ 251' ಮಾರಾಟ, ವಿತರಣೆ ಗೊಂದಲದ ಬಗ್ಗೆ ಸಂಸ್ಥೆಯ ಅಧಿಕಾರಿಗಳು ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.

ಇದುವರೆವಿಗೂ ಬುಕ್ಕಿಂಗ್ ಆಗಿರುವ ಎಲ್ಲಾ ಫೋನ್ ಗಳನ್ನು ವಿತರಣೆ ಮಾಡಲಾಗುವುದು. 251 ರು ಬೆಲೆಯಲ್ಲೇ ಸ್ಮಾರ್ಟ್ ಫೋನ್ ಮಾರಾಟ ಮಾಡಿ ಪ್ರತಿ ಹ್ಯಾಂಡ್ ಸೆಟ್ ಮೇಲೆ 31 ರು ಲಾಭ ಪಡೆಯಲಾಗುವುದು ಎಂದು ರಿಂಗಿಂಗ್ ಬೆಲ್ ಸಂಸ್ಥೆಯ ನಿರ್ದೇಶಕರಲ್ಲಿ ಒಬ್ಬರಾದ ಮೋಹಿತ್ ಗೋಯಲ್ ಅವರು ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡುತ್ತಾ ವಿವರಿಸಿದ್ದಾರೆ.[ಅಗ್ಗದ ಫ್ರೀಡಂ 251 ಮೊಬೈಲ್ ಬುಕಿಂಗ್ ಮುಕ್ತಾಯ]

ಆಡ್ ಕಾಮ್ ಕಂಪನಿ ಮೊಬೈಲ್ ಹ್ಯಾಡ್ ಸೆಟ್ ಸ್ಕ್ರೀನ್ ವಿನ್ಯಾಸವನ್ನು ನೀಡಿದ್ದರಿಂದ ಹ್ಯಾಂಡ್ ಸೆಟ್ ಮೇಲೆ Adcom ಹೆಸರಿದೆ ಈ ಬಗ್ಗೆ ಗೊಂದಲ ಬೇಡ ಎಂದು ಮತ್ತೊಬ್ಬ ನಿರ್ದೇಶಕ ಅಶೋಕ್ ಛಡ್ಡಾ ಹೇಳಿದ್ದಾರೆ.

ಸ್ಮಾರ್ಟ್ ಫೋನ್ ನ ಉಪಕರಣಗಳು ತೈವಾನಿನಿಂದ ತರೆಸಿಕೊಂಡು ನೋಯ್ಡಾದ ಘಟಕದಲ್ಲಿ ಅಸೆಂಬಲ್ ಮಾಡಲಾಗುತ್ತದೆ. ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡುವ ಸಾಮರ್ಥ್ಯ ಕಂಪನಿಗಿದೆ ಎಂದಿದ್ದಾರೆ.[ಫ್ರೀಡಂ 251 : ಸರ್ಕಾರದ ಸಬ್ಸಿಡಿ ಪಡೆದಿಲ್ಲ]

ಮೊದಲ ಬ್ಯಾಚಿನಲ್ಲಿ 25 ಲಕ್ಷ ಮೊಬೈಲ್

ಮೊದಲ ಬ್ಯಾಚಿನಲ್ಲಿ 25 ಲಕ್ಷ ಮೊಬೈಲ್

ಇಲ್ಲಿ ತನಕ ಫ್ರೀಡಂ 251 ಗಾಗಿ ಸುಮಾರು 7 ಕೋಟಿ ಆನ್ ಲೈನ್ ನೋಂದಣಿಯಾಗಿದೆ. ಮೊದಲ ಬ್ಯಾಚಿನಲ್ಲಿ 25 ಲಕ್ಷ ಮೊಬೈಲ್ ಗಳನ್ನು ವಿತರಣೆ ಮಾಡಲಾಗುವುದು. ಜೂನ್ 30ರೊಳಗೆ ಸ್ಮಾರ್ಟ್ ಫೋನ್ ಗ್ರಾಹಕರ ಕೈ ಸೇರಲಿದೆ.

 ಲಾಭ ಮಾಡುವುದೇ ನಮ್ಮ ಉದ್ದೇಶವಲ್ಲ

ಲಾಭ ಮಾಡುವುದೇ ನಮ್ಮ ಉದ್ದೇಶವಲ್ಲ

ಸ್ಮಾರ್ಟ್ ಫೋನ್ ಗ್ರಾಹಕರ ಕೈ ಸೇರಿದ ಮೇಲೆ ನಮಗೆ ಅವರು ಕಟ್ಟಿರುವ ಹಣ ಸಂದಾಯವಾಗಲಿದೆ. ಈ ರೀತಿ ವ್ಯವಸ್ಥೆ ಬೇರೆ ಆನ್ ಲೈನ್ ಪೇಮೆಂಟ್ ಗಳಲ್ಲಿ ಇಲ್ಲ ಎಂದು ಸಂಸ್ಥೆ ಹೇಳಿದೆ.
ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಹಾಗೂ ಡಿಜಿಟಲ್ ಇಂಡಿಯಾ ಯೋಜನೆಗೆ ಅನುಗುಣವಾಗಿ ಮೊಬೈಲ್ ಫೋನ್ ರೂಪಿಸಲಾಗಿದೆ. ಲಾಭ ಮಾಡುವುದೇ ನಮ್ಮ ಉದ್ದೇಶವಲ್ಲ ರಿಂಗಿಂಗ್ ಬೆಲ್ ಪ್ರೈ ಲಿಮಿಟೆಡ್ ಹೇಳಿದೆ.

ಗುಣಮಟ್ಟದಲ್ಲಿ ರಾಜಿ ಇಲ್ಲ, ಪ್ರತ್ಯೇಕ ಚಾರ್ಜರ್ ಬೇಕಿಲ್ಲ

ಗುಣಮಟ್ಟದಲ್ಲಿ ರಾಜಿ ಇಲ್ಲ, ಪ್ರತ್ಯೇಕ ಚಾರ್ಜರ್ ಬೇಕಿಲ್ಲ

ಪ್ರತ್ಯೇಕ ಚಾರ್ಜರ್ ಕೊಳ್ಳಬೇಕು ಅದರ ಬೆಲೆ 2,500 ರು ಗೂ ಅಧಿಕ ಎಂಬುದು ಸುಳ್ಳು ಸುದ್ದಿ ಎಂದು ಸಂಸ್ಥೆ ಹೇಳಿದೆ.
*4 ಇಂಚಿನ qHD IPS ಡಿಸ್​ಪ್ಲೇ
* 5.1 ಆಂಡ್ರಾಯ್ಡ್ OS
* ಫ್ರಂಟ್ ಕ್ಯಾಮರಾ 0.3 ಮೆಗಾ ಪಿಕ್ಸಲ್
* 3.2 MP ರೇರ್ ಕ್ಯಾಮರಾ
* 3ಜಿ
* 1 ಜಿಬಿ ರಾಮ್ 8 ಜಿಬಿ ಸಂಗ್ರಹ ಸಾಮರ್ಥ್ಯ 32 ಜಿಬಿವರೆಗೆ ವಿಸ್ತರಿಸಬಹುದಾಗಿದೆ.
* 1450 ಎಮ್​ಎಚ್ ಬ್ಯಾಟರಿ ಹೊಂದಿದೆ.

ದೇಶದೆಲ್ಲೆದೆ ಸರ್ವೀಸ್ ಸೆಂಟರ್ ಆರಂಭ

ದೇಶದೆಲ್ಲೆದೆ ಸರ್ವೀಸ್ ಸೆಂಟರ್ ಆರಂಭ

ದೇಶದ 650 ಸರ್ವೀಸ್ ಸೆಂಟರ್ ಗಳನ್ನು ಆರಂಭಿಸಲಾಗಿದೆ. ನೋಯ್ಡಾ ಹಾಗೂ ಉತ್ತರಾಂಚಲ್ ನಲ್ಲಿ ಎರಡು ಘಟಕಗಳನ್ನು ಸ್ಥಾಪಿಸಲಾಗಿದ್ದು, 250 ಕೋಟಿ ರು ಹೂಡಿಕೆ ಮಾಡಲಾಗಿದೆ. ತೈವಾನಿನಿಂದ ಉಪಕರಣಗಳನ್ನು ತರೆಸಿಕೊಂಡು ಇಲ್ಲಿ ಅಸೆಂಬಲ್ ಮಾಡಲಾಗುತ್ತದೆ ಎಂದಿದ್ದಾರೆ.

ಅಪ್ಲಿಕೇಷನ್ ನೀಡುವ ಸಂಸ್ಥೆಯಿಂದ ಹೂಡಿಕೆ?

ಅಪ್ಲಿಕೇಷನ್ ನೀಡುವ ಸಂಸ್ಥೆಯಿಂದ ಹೂಡಿಕೆ?

ಸ್ವಚ್ಛ ಭಾರತ್, ಮಹಿಳಾ ಸುರಕ್ಷತೆ, ವಾಟ್ಸಪ್, ಫೇಸ್ ಬುಕ್, ಟ್ವಿಟ್ಟರ್ ಮುಂತಾದ ಅಪ್ಲಿಕೇಷನ್ ತಕ್ಷಣಕ್ಕೆ ಗ್ರಾಹಕರಿಗೆ ಈ ಸ್ಮಾರ್ಟ್ ಫೋನಿನಲ್ಲಿ ಲಭ್ಯವಿರುತ್ತದೆ. ಅಪ್ಲಿಕೇಷನ್ ನೀಡುವ ಸಂಸ್ಥೆಯಿಂದ ಹೂಡಿಕೆ ಮಾಡಲು ತೊಡಗಿದರೆ ಸ್ಮಾರ್ಟ್ ಫೋನ್ ಬೆಲೆ ಇನ್ನಷ್ಟು ತಕ್ಕಿಸಬಹುದು. ತೆರಿಗೆ ಉಳಿತಾಯ, ವಿಶಿಷ್ಟ ಮಾರ್ಕೆಟಿಂಗ್ ಮೂಲಕ ಜನರಿಗೆ ಉತ್ತಮ ಸಾಧಕಗಳನ್ನು ನೀಡಬಹುದು ಎಂದು ಸಂಸ್ಥೆ ಹೇಳಿದೆ.

English summary
Speaking to The Times of India, Mohit Goel, Director of Ringing Bells said that the company will not only deliver the phones at the low price quoted, but also make a profit of Rs 31 on each handset sold.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X