ಬೆಂಗಳೂರು ಸೇರಿ 8 ನಗರಗಳಲ್ಲಿ ವಸತಿ ಮಾರಾಟ 79% ಇಳಿಕೆ

ಬೆಂಗಳೂರು, ಜುಲೈ 28: ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಬೆಂಗಳೂರಿನ ವಸತಿ ಆಸ್ತಿಗಳ ಬೆಲೆ 2020ರ ತ್ರೈಮಾಸಿಕದಲ್ಲಿ ಇಳಿಕೆಯಾಗಿದೆ ಎಂದು ರಿಯಲ್ ಎಸ್ಟೇಟ್ ಬ್ರೊಕರೇಜ್ ಸಂಸ್ಥೆ ಪ್ರಾಪ್ ಟೈಗರ್ ಹೇಳಿದೆ.

Recommended Video

      Corona ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚು | Oneindia Kannada

      ಬೆಂಗಳೂರಿನ ವಸತಿ ಆಸ್ತಿ ಮಾರುಕಟ್ಟೆ ಕಳೆದ ಐದು ವರ್ಷಗಳಿಂದ ಸ್ಥಿರ ಏರಿಕೆಯನ್ನು ಕಾಣುತ್ತಾ ಬಂದಿದ್ದು, ವಾಸಕ್ಕೆ ಸಜ್ಜಾದ ಮತ್ತು ನಿರ್ಮಾಣ ಹಂತದಲ್ಲಿರುವ ವಸತಿ ಆಸ್ತಿಗಳಿಗೆ ಐದು ವರ್ಷಗಳಲ್ಲಿ ಕ್ರಮವಾಗಿ 17.7% ಮತ್ತು 33.3% ವರೆಗೆ ಪ್ರಗತಿ ಕಂಡುಬಂದಿದೆ. ಆದರೆ, ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ 8 ನಗರಗಳಲ್ಲಿ ಏಪ್ರಿಲ್-ಜೂನ್ ಅವಧಿಯಲ್ಲಿ ಶೇ 79ರಷ್ಟು ವಸತಿ ಮಾರಾಟ ಕುಸಿದಿದೆ ಎಂದು ಪ್ರಾಪ್ ಟೈಗರ್ ಸಂಸ್ಥೆ ಹೇಳಿದೆ.

      ಬೆಂಗಳೂರು, ಅಹಮದಾಬಾದ್, ಚೆನ್ನೈ, ಹೈದರಾಬಾದ್, ದೆಹಲಿ- ಎನ್ ಸಿಆರ್(ನೋಯ್ಡಾ, ಗ್ರೇಟರ್ ನೋಯ್ಡಾ, ಗುರುಗ್ರಾಮ, ಗಾಜಿಯಾಬಾದ್ ಹಾಗೂ ಫರಿದಾಬಾದ್), ಮುಂಬೈ ಎಂಎಂಆರ್(ಮುಂಬೈ, ನವಿ ಮುಂಬೈ, ಥಾಣೆ) ಹಾಗೂ ಪುಣೆಗಳಲ್ಲಿ ಮಾಹಿತಿ ಸಂಗ್ರಹಿಸಿ ಈ ವರದಿ ನೀಡಲಾಗಿದೆ.

      Housing Sales Dip 79% Across Top 8 Cities In Apr-jun Over Covid-19 Lockdown

      ಜನವರಿ-ಜೂನ್ 2020ರ ಅವಧಿಯಲ್ಲಿ ಬೆಂಗಳೂರಿನಲ್ಲಿ ವಸತಿ ಮಾರಾಟ ಶೇ 57ರಷ್ಟು ಕುಸಿತ ಕಂಡಿತ್ತು, ಕಳೆದ ವರ್ಷ ಏಪ್ರಿಲ್ ಜೂನ್ ಅವಧಿಯಲ್ಲಿ 10, 251 ಯೂನಿಟ್(ಫ್ಲಾಟ್, ಪ್ಲಾಟ್, ನಿವೇಶನ, ಅಪಾರ್ಟ್ಮೆಂಟ್..ಇತ್ಯಾದಿ) ಮಾರಾಟವಾಗಿತ್ತು. ಈ ಬಾರಿ ಈ ಅವಧಿಯಲ್ಲಿ 2,776 ಮಾತ್ರ ಮಾರಾಟವಾಗಿದ್ದು, ಶೇ 73ರಷ್ಟು ಕುಸಿತ ಕಂಡಿದೆ. ಹೈದರಾಬಾದಿನಲ್ಲಿ ಶೇ 86ರಷ್ಟು, ಮುಂಬೈನಲ್ಲಿ ಶೇ 85ರಷ್ಟು, ಅಹಮದಾಬಾದಿನಲ್ಲಿ ಶೇ 83ರಷ್ಟು, ದೆಹಲಿ ಎನ್ ಸಿಆರ್ ನಲ್ಲಿ ಶೇ 81ರಷ್ಟು, ಕೋಲ್ಕತ್ತಾದಲ್ಲಿ ಶೇ 75ರಷ್ಟು ಹಾಗೂ ಪುಣೆಯಲ್ಲಿ ಶೇ 74ರಷ್ಟು ವಸತಿ ಮಾರಾಟ ಕುಸಿತವಾಗಿದೆ.

      ಕೊವಿಡ್ 19 ಲಾಕ್ಡೌನ್ ನಿಂದ ಏಪ್ರಿಲ್ -ಜೂನ್ ತ್ರೈಮಾಸಿಕದಲ್ಲಿ ಆರ್ಥಿಕ ಸಂಕಷ್ಟ ಹೆಚ್ಚಾಗಿದೆ ಎಂದು ಪ್ರಾಪ್ ಟೈಗರ್, ಮಕಾನ್ ಹಾಗೂ ಹೌಸಿಂಗ್.ಕಾಂ ಸಂಶೋಧನಾ ವಿಭಾಗದ ಮುಖ್ಯಸ್ಥ ಅಂಕಿತಾ ಸೂದ್ ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+