ಅಗ್ಗವಾಗಲಿದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹೌಸಿಂಗ್ ಲೋನ್

Posted By:
Subscribe to Oneindia Kannada

ಮುಂಬೈ, ಜನವರಿ 2 : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಗೃಹ ಸಾಲ ತೆಗೆದುಕೊಂಡಿದ್ದೀರಾ ಅಥವಾ ತೆಗೆದುಕೊಳ್ಳುವ ಉದ್ದೇಶ ಇದೆಯಾ? ಹಾಗಿದ್ದರೆ ನಿಮಗೆ ಇದು ಖಂಡಿತಾ ಶುಭ ಸುದ್ದಿ. ಏಕೆಂದರೆ, ಗೃಹ ಸಾಲದ ಮೂಲಾಂಕವು 30 ರಷ್ಟು ಕಡಿಮೆ ಮಾಡಿದ್ದು, ಸೋಮವಾರದಿಂದ ಅನ್ವಯ ಆಗಲಿದೆ. ಆ ನಂತರ ಇತರ ಬ್ಯಾಂಕ್ ಗಳು ಸಹ ಅನುಸರಿಸುವ ಸಾಧ್ಯತೆ ಇದೆ.

ಇನ್ನು ಮುಂದೆ ಇಪ್ಪತ್ತು ವರ್ಷಗಳ ಅವಧಿಗೆ ಸಾಲ ತೆಗೆದುಕೊಳ್ಳುವವರಿಗೆ ಪ್ರತಿ ಲಕ್ಷ ರುಪಾಯಿಗೆ 877 ಇಎಂಐ ಆಗಲಿದೆ. ಈ ಹಿಂದೆ ಇದು 897 ಇತ್ತು. ಅಂದರೆ ಪ್ರತಿ ಲಕ್ಷಕ್ಕೆ ಇಪ್ಪತ್ತು ರುಪಾಯಿ ಕಡಿಮೆ ಆದಂತಾಗುತ್ತದೆ. ಇನ್ನು ಇಪ್ಪತ್ತೈದು ಅಥವಾ ಮೂವತ್ತು ವರ್ಷದ ಅವಧಿಗೆ ಗೃಹ ಸಾಲ ತೆಗೆದುಕೊಳ್ಳುವವರಿಗೆ ತಕ್ಕ ಮಟ್ಟಿಗೆ ಅನುಕೂಲ ಆಗಲಿದೆ.

Housing loan from SBI will be cheaper

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಸಾಲದ ಮೇಲಿನ ಬಡ್ಡಿ ದರ ಇಳಿಸಿದರೆ ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಗಳು ಸಹ ಬಡ್ಡಿ ದರ ಕಡಿಮೆ ಮಾಡುತ್ತವೆ. ಹೀಗೆ ಆಗುವುದರಿಂದ ಅಂತಿಮವಾಗಿ ಲಾಭ ಆಗುವುದು ಸಾಲ ಪಡೆಯುವವರಿಗೆ. ಕೇಂದ್ರ ಸರಕಾರವು ಗೃಹ ನಿರ್ಮಾಣದ ಉದ್ದೇಶಕ್ಕೆ ನೀಡುವ ಸಾಲವನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಿದ್ದು, ಒಂದು ವರ್ಷದಿಂದ ಈಚೆಗೆ ಬಡ್ಡಿ ದರ ಕಡಿಮೆಯಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Housing loan rate of interest reduced by State Bank Of India. So, housing loan EMI will be cheaper. This is good news for customers.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ