ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಹೋಂಡಾಕ್ಕೆ 5 ವರ್ಷಗಳಲ್ಲಿ 20 ಲಕ್ಷ ಹೊಸ ಗ್ರಾಹಕರ ಸೇರ್ಪಡೆ

|
Google Oneindia Kannada News

ಬೆಂಗಳೂರು, ನವೆಂಬರ್ 17: ಕರ್ನಾಟಕದಲ್ಲಿ ಹೋಂಡಾ ಮೋಟರ್‌ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹೊಸ ಮೈಲಿಗಲ್ಲು ದಾಟಿದೆ. ಕರ್ನಾಟಕದಲ್ಲಿ ಒಟ್ಟಾರೆ 40 ಲಕ್ಷ ಗ್ರಾಹಕರನ್ನು ತಲುಪಿದೆ. ಹಿಂದಿನ 5 ವರ್ಷಗಳಲ್ಲಿ 20 ಲಕ್ಷ ಹೊಸ ಗ್ರಾಹಕರ ಸೇರ್ಪಡೆ ಮಾಡಿಕೊಂಡಿದೆ. ಇದಲ್ಲದೆ,
380 ಟಚ್ ಪಾಯಿಂಟ್‍ಗಳೊಂದಿಗೆ, ಹೋಂಡಾ ಕರ್ನಾಟಕದಲ್ಲಿ ತನ್ನ ಮುನ್ನಡೆ ಮುಂದುವರೆಸಿದೆ. ಕರ್ನಾಟಕದಲ್ಲಿ ಹೋಂಡಾ ಆ್ಯಕ್ಟಿವಾ ಮತ್ತು ಶೈನ್ ಮಾಡೆಲ್‍ಗಳು ಹೆಚ್ಚು ಆದ್ಯತೆಯ ದ್ವಿಚಕ್ರ ವಾಹನಗಳಾಗಿವೆ ಎಂದು ಸಂಸ್ಥೆ ಹೇಳಿದೆ.

ಕರ್ನಾಟಕದಲ್ಲಿ ಮೊದಲ 20 ಲಕ್ಷ ಗ್ರಾಹಕರನ್ನು ಹೊಂದಲು ಹೋಂಡಾ 2 ವೀಲರ್ಸ್ 16 ವರ್ಷಗಳನ್ನು ತೆಗೆದುಕೊಂಡಿತ್ತು. ಆದರೆ, ಕಳೆದ 5 ವರ್ಷಗಳಲ್ಲಿ 20 ಲಕ್ಷ ಗ್ರಾಹಕರನ್ನು ತನ್ನದಾಗಿಸಿಕೊಂಡು ಹೊಸ ದಾಖಲೆ ಬರೆದಿದೆ. ಹೆಚ್ಚಿನ ಸಂಖ್ಯೆಯ ಟಚ್‍ಪಾಯಿಂಟ್‍ಗಳು, ಹೊಸ ಹೊಸ ದ್ವಿಚಕ್ರ ವಾಹನಗಳ ಪರಿಚಯ, ವಿಶ್ವಾಸಾರ್ಹ ಗ್ರಾಹಕ ಸೇವೆ ಮತ್ತು ವರ್ಧಿತ ಗ್ರಾಹಕರ ಸಂಪರ್ಕದ ಹಿನ್ನೆಲೆಯಲ್ಲಿ ಗ್ರಾಹಕರ ಪ್ರೀತಿ ಮತ್ತು ವಿಶ್ವಾಸವು ಸುಮಾರು 5 ಪಟ್ಟು ಹೆಚ್ಚಾಗಿರುವುದು ಇನ್ನೊಂದು ಗಮನಾರ್ಹ ಸಂಗತಿ ಎನ್ನಬಹುದು.

ಹೋಂಡಾ ಬ್ರ್ಯಾಂಡ್‍ನಲ್ಲಿ ಗ್ರಾಹಕರು ಇರಿಸಿರುವ ವಿಶ್ವಾಸಕ್ಕಾಗಿ ಮೋಟರ್‌ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಮಾರಾಟ ಮತ್ತು ಮಾರುಕಟ್ಟೆಯ ನಿರ್ದೇಶಕ ಯದ್ವಿಂದರ್ ಸಿಂಗ್ ಗುಲೇರಿಯಾ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ. ರಾಜ್ಯದಲ್ಲಿನ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಹಂಚಿಕೊಂಡು ಮಾತನಾಡಿ, ''ಈ ಸಾಧನೆಯ ಹೊಸ ಮೈಲುಗಲ್ಲು ಹಬ್ಬಗಳ ಮಂಗಳಕರ ಸಮಯದಲ್ಲಿಯೇ ಬಂದಿದೆ. ಕರ್ನಾಟಕದ ಜನರು ನಮ್ಮ ಬಗ್ಗೆ ತೋರಿಸಿದ ಪ್ರೀತಿ ಮತ್ತು ವಿಶ್ವಾಸದಿಂದ ನಾವು ವಿನಮ್ರರಾಗಿದ್ದೇವೆ. ದ್ವಿಚಕ್ರ ವಾಹನಗಳ ಬಗ್ಗೆ ಅಪಾರ ಅಭಿಮಾನಕ್ಕೆ ಹೆಸರಾಗಿರುವ ಕರ್ನಾಟಕ ರಾಜ್ಯವು ಗುಣಮಟ್ಟದ ಉತ್ಪನ್ನಗಳು ಮತ್ತು ಸರ್ವೀಸ್ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸುವ ಹೋಂಡಾ ಬ್ರ್ಯಾಂಡ್‍ಗೆ ಯಾವಾಗಲೂ ತನ್ನ ಪ್ರೀತಿ ಮತ್ತು ಅಭಿಮಾನ ತೋರಿಸುತ್ತಲೇ ಬಂದಿದೆ. ಗ್ರಾಹಕರ ವೈವಿಧ್ಯಮಯ ಅಗತ್ಯಗಳು ಮತ್ತು ಇಷ್ಟಾನಿಷ್ಟಗಳನ್ನು ಈಡೇರಿಸುತ್ತ ಮುಂದುವರೆದಿರುವ ಹೋಂಡಾ 2ವೀಲರ್ಸ್, ಹೊಸ ಸಹಜ ಬದುಕಿನಲ್ಲಿ ಮೌಲ್ಯವರ್ಧಿತ ಸೇವೆಗಳ ಬೆಂಬಲ ಪಡೆದಿರುವ ಬಿಎಸ್6 ಮಾದರಿಗಳ ನಮ್ಮ ವೈವಿಧ್ಯಮಯ ಶ್ರೇಣಿಯು ರಾಜ್ಯದ ಗ್ರಾಹಕರನ್ನು ಸಂತೋಷಪಡಿಸುವುದನ್ನು ಮುಂದುವರಿಸಲಿದೆ,'' ಎಂದು ಹೇಳಿದ್ದಾರೆ.

Honda two Wheelers Sales In Karnataka Cross 4 Million Vehicles

ಹಬ್ಬದ ಋತುವಿನಲ್ಲಿ ಹೆಚ್ಚಿದ ಹೋಂಡಾ ಸವಾರಿ

ಹೆಚ್ಚು ಹೆಚ್ಚು ಪ್ರಯಾಣಿಕರು ಸಾರ್ವಜನಿಕ ಸಾರಿಗೆ ಬಳಸುವುದಕ್ಕೆ ಬದಲಾಗಿ ಹೊಸ ದ್ವಿಚಕ್ರ ವಾಹನ ಖರೀದಿಸಲು ಬಯಸುತ್ತಾರೆ. ಅವುಗಳ ಪೈಕಿ, ಹೋಂಡಾ ಆ್ಯಕ್ಟಿವಾ ಮತ್ತು ಶೈನ್ ಹೆಚ್ಚು ಆದ್ಯತೆಯ ಮಾದರಿಗಳಾಗಿ ಹೊರಹೊಮ್ಮಿವೆ. ಬಿಎಸ್6 ಕ್ರಾಂತಿಯಿಂದ ಪ್ರೇರಣೆ ಪಡೆದಿರುವ 'ಎಚ್‍ಎಂಎಸ್‍ಐ', ಆಕರ್ಷಕ ಶ್ರೇಣಿಯ Activa125, Dio & Grazia125 ಸ್ಕೂಟರ್‍ಗಳನ್ನು ಪರಿಚಯಿಸಿದೆ. ಇದಕ್ಕೆ ಎಂಟು ಅತ್ಯಾಕರ್ಷಕ ಬಿಎಸ್-6 ಮೋಟರ್ ಸೈಕಲ್‍ಗಳಾದ ಸಿಡಿ 110 ಡ್ರೀಮ್, ಲಿವೊ, ಎಸ್‍ಪಿ125, ಶೈನ್, ಯೂನಿಕಾರ್ನ್, ಎಕ್ಸ್-ಬ್ಲೇಡ್, ಹಾರ್ನೆಟ್ 2.0 ಮತ್ತು ಸಿಬಿ200ಎಕ್ಸ್ - ಸೇರ್ಪಡೆ ಮಾಡಿದೆ.

ಕರ್ನಾಟಕದಲ್ಲಿ ಸ್ಕೂಟರ್ ಮತ್ತು ಮೋಟರ್ ಸೈಕಲ್ ಬೇಡಿಕೆ

ಕರ್ನಾಟಕದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ (ಸ್ಕೂಟರ್ ಮತ್ತು ಮೋಟರ್ ಸೈಕಲ್ ಸೇರಿದಂತೆ) 'ಎಚ್‍ಎಂಎಸ್‍ಐ', ಸ್ಕೂಟರ್ ಜನಪ್ರಿಯಗೊಳಿಸುವಲ್ಲಿ ಮುನ್ನಡೆಯಲ್ಲಿದ್ದು, ಶೇ 49ರಷ್ಟು ಮಾರುಕಟ್ಟೆ ಪಾಲು ಹೊಂದಿದೆ. ಸ್ಕೂಟರ್ ಮತ್ತು ಮೋಟರ್ ಸೈಕಲ್‍ನ ಸಮಗ್ರ ಮಾರುಕಟ್ಟೆಯಲ್ಲಿ ಶೇ 32ರಷ್ಟು ಪಾಲು ಹೊಂದಿದೆ.

ರಾಜ್ಯದಾದ್ಯಂತ ಡೀಲರ್‌ಶಿಪ್‍ಗಳು, ಅಧಿಕೃತ ಸರ್ವೀಸ್ ಕೇಂದ್ರಗಳು ಮತ್ತು ಅತ್ಯುತ್ತಮ ಡೀಲ್ ಔಟ್‍ಲೆಟ್‍ಗಳು ಸೇರಿದಂತೆ ಒಟ್ಟು 380 ಟಚ್ ಪಾಯಿಂಟ್‍ಗಳೊಂದಿಗೆ 'ಎಚ್‍ಎಂಎಸ್‍ಐ' ಪ್ರಬಲ ಉಪಸ್ಥಿತಿ ಹೊಂದಿದೆ. ಹಬ್ಬದ ಋತುವಿನಲ್ಲಿ ಹೆಚ್ಚಿನ ಗ್ರಾಹಕರು ಬುಕ್ಕಿಂಗ್ ಮತ್ತು ಖರೀದಿಗಾಗಿ ಆನ್‍ಲೈನ್‍ನಲ್ಲಿ ಮಾಹಿತಿ ಪಡೆಯುತ್ತಿದ್ದಾರೆ. (ಪಿಟಿಐ)

English summary
Honda Motorcycle and Scooter India on Wednesday said its cumulative sales in Karnataka has crossed the 4-million vehicles mark, mainly driven by increased touchpoints and expansion of product portfolio.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X