• search

ಸತತವಾಗಿ ರೆಪೋ ದರ ಏರಿಕೆ, ಗೃಹ ಸಾಲ ಆಗಲಿದೆ ದುಬಾರಿ?

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಆಗಸ್ಟ್ 01: ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾ(ಆರ್ ಬಿಐ) ಸತತವಾಗಿ ಎರಡನೇ ಬರಿಗೆ ರೆಪೋ ದರ​​ ಹೆಚ್ಚಳ ಮಾಡಿದೆ. ಈ ಮೂಲಕ ಗೃಹ ಸಾಲ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಹೆಚ್ಚಿದೆ.​​​​ 25 ಮೂಲಾಂಶದಷ್ಟು ರೆಪೋ ರೇಟ್ ಹೆಚ್ಚಳವಾಗಿ 6.50% ಆಗಿದೆ.

  2013ರ ಅಕ್ಟೋಬರ್ ನಂತರ ಇದೇ ಮೊದಲ ಬಾರಿಗೆ ಸತತವಾಗಿ ಎರಡನೇ ಬಾರಿಗೆ ರೆಪೋ ದರ ಈ ರೀತಿ ಏರಿಕೆ ಮಾಡಲಾಗಿದೆ. ಎರಡು ತಿಂಗಳಿಗೊಮ್ಮೆ ನಡೆಯುವ ಸಭೆಯಲ್ಲಿ ಆರು ಮಂದಿ ಸದಸ್ಯರ ಪೈಕಿ ಐದು ಮಂದಿ ದರ ಏರಿಕೆ ಪರ ಮತ ಹಾಕಿದರು.

  ರೆಪೋ ದರದಲ್ಲಿ ಶೇ. 0.25 ಏರಿಕೆ ಮಾಡಿದ ರಿಸರ್ವ್ ಬ್ಯಾಂಕ್

  ಎಸ್ ಬಿಐ ಹಾಗೂ ಎಚ್ ಡಿಎಫ್ ಸಿ ಸೇರಿದಂತೆ ಪ್ರಮುಖ ಬ್ಯಾಂಕ್ ಗಳು ಸಾಲ ಬಡ್ಡಿದರ ಬಗ್ಗೆ ಯಾವುದೇ ಪ್ರತಿಕ್ರಿಯೆ ತಕ್ಷಣಕ್ಕೆ ನೀಡಿಲ್ಲ.

  Home Loans Costlier After RBIs Second Back-To-Back Rate Hike In 5 Years

  ರೆಪೋ (ರೀಪರ್ಚೇಸಿಂಗ್​​ ರೇಟ್): ಕಮರ್ಷಿಯಲ್ ಬ್ಯಾಂಕ್​​ಗಳಿಗೆ ಆರ್ ಬಿಐ ನೀಡುವ ಅಲ್ಪಾವಧಿಯ ಸಾಲದ ಮೇಲಿನ ಬಡ್ಡಿದರ. ಇನ್ನು ಬ್ಯಾಂಕ್​ಗಳಿಂದ ಸಾಲ ತೆಗೆದುಕೊಳ್ಳುವ ರಿವರ್ಸ್​​ ರೆಪೋ ರೇಟ್ ಶೇ.6.25% ರಷ್ಟು ಏರಿಕೆಯಾಗಿದೆ.

  ಜೂನ್ ನಲ್ಲಿ ಆರ್ ಬಿಐ ರಾಜ್ಯಪಾಲ ಊರ್ಜಿತ್ ಪಟೇಲ್ ಅವರು ರೆಪೋ ದರವನ್ನು 25 ಮೂಲಾಂಶ ಏರಿಕೆ ಮಾಡಿ 6.25 %ಕ್ಕೇರಿಸಿದ್ದರು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮೊದಲ ಬಾರಿಗೆ ರೆಪೋ ದರ ಏರಿಕೆಯಾಗಿತ್ತು.

  ಆರ್‌ಬಿಐನಲ್ಲಿ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಹಾಕಿ

  ಗ್ರಾಹಕರ ವಸ್ತುಗಳ ಹಣದುಬ್ಬರ ಇಳಿಕೆಗೆ ಆರ್​ಬಿಐ ಕಸರತ್ತು ನಡೆಸಿದೆ. ಜೂನ್ ತಿಂಗಳಿನಲ್ಲಿ ವಾರ್ಷಿಕ ಗ್ರಾಹಕ ಹಣದುಬ್ಬರ ದರ ಶೇ 5ರಷ್ಟಿತ್ತು. ಅರ್ಥ ವ್ಯವಸ್ಥೆಯ ಉತ್ತೇಜನ, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಸ್ಥಿರತೆ, ಹಣದುಬ್ಬರ ನಿಯಂತ್ರಣ ಹಿನ್ನೆಲೆಯಲ್ಲಿ ರೆಪೋ ದರ ಏರಿಕೆ ಅನಿವಾರ್ಯ ಎಂದು ಆರ್ ಬಿಐ ಹೇಳಿದೆ.

  ನಗದು ಮೀಸಲು ಅನುಪಾತ (ಸಿಆರ್ ಆರ್) ಶೇ.4ರ ಪ್ರಮಾಣದಲ್ಲೇ ಇದೆ ಯಾವುದೇ ಬದಲಾವಣೆ ಮಾಡಿಲ್ಲ. ಅದರೆ, ಈಗ ಸಿಆರ್ ಅರ್ ದರ 50 ಮೂಲಾಂಶ ದರದಂತೆ ಇಳಿಕೆಯಾಗಲಿದೆ ಎಂಬ ನಿರೀಕ್ಷೆ ಇದೆ.

  ಗಮನಿಸಿ:
  ಸಿಆರ್ ಅರ್: ಬ್ಯಾಂಕುಗಳಲ್ಲಿರುವ ಠೇವಣಿಗೆ ಅನುಗುಣವಾಗಿ ಆರ್ ಬಿಐ ನಲ್ಲಿ ಇಡಬೇಕಾದ ಹಣದ ಮೊತ್ತ.
  * ರೆಪೋ ದರ: ಆರ್ ಬಿಐನಿಂದ ಬ್ಯಾಂಕುಗಳ ಹಣ ಪಡೆಯುವ ದರ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  The Reserve Bank of India (RBI) on Wednesday announced a second straight 25 basis points hike in repo rate to 6.5 per cent. This the first time since October 2013 that the central bank has hiked borrowing costs at two consecutive policy meetings.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more