ಕನ್ನಡಿಗರ ರಾಜಧಾನಿ ಬೆಂಗಳೂರಿಗೆ ಬಂಪರ್, ಹೈಸ್ಪೀಡ್ ರೈಲ್ವೆ ಕಾರಿಡಾರ್‌ಗೆ ಅಸ್ತು... High Speed Rail Corridor

ಕನ್ನಡಿರ ರಾಜಧಾನಿ ಬೆಂಗಳೂರಿಗೆ ಕೇಂದ್ರ ಬಜೆಟ್‌ನಲ್ಲಿ ಭರ್ಜರಿ ಉಡುಗೊರೆ ಒಂದು ಸಿಕ್ಕಿದ್ದು, ಈ ಗಿಫ್ಟ್ ಇದೀಗ ರೈಲು ಪ್ರಯಾಣಿಕರಿಗೆ ದೊಡ್ಡ ಸಹಾಯ ಮಾಡಲಿದೆ. ಈ ಬಾರಿ ಬಜೆಟ್‌ನಲ್ಲಿ ದೇಶದ ಸಾರಿಗೆ ಮೂಲಸೌಕರ್ಯ ಅಭಿವೃದ್ಧಿಗೆ ಹಾಗೂ ಉತ್ತೇಜನಕ್ಕೆ ಹಲವು ಯೋಜನೆಗಳನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ಈ ಪೈಕಿ ಬೆಂಗಳೂರು & ಚೆನ್ನೈ ಸೇರಿದಂತೆ ಪ್ರಮುಖ ನಗರಗಳನ್ನ ಸಂಪರ್ಕಿಸುವ 7 ಹೈಸ್ಪೀಡ್ ರೈಲ್ವೆ ಕಾರಿಡಾರ್ ಯೋಜನೆಗೆ ಬಂಪರ್ ಕೊಡುಗೆ ಇದೀಗ ಸಿಕ್ಕಿದೆ. ಹಾಗಾದರೆ ಹೈಸ್ಪೀಡ್ ರೈಲ್ವೆ ಕಾರಿಡಾರ್ ಯೋಜನೆಯಿಂದ ನಮ್ಮ ಬೆಂಗಳೂರು ನಗರಕ್ಕೆ ಏನೆಲ್ಲಾ ಪ್ರಯೋಜನ ಆಗಲಿದೆ? ಬನ್ನಿ ತಿಳಿಯೋಣ.

ಭಾರತದ ಸಾರಿಗೆ ಮೂಲಸೌಕರ್ಯ ಇಡೀ ಜಗತ್ತಿನಲ್ಲೇ ಅತ್ಯಂತ ಪ್ರಬಲವಾಗಿ ಬೆಳೆಯುತ್ತಿದ್ದು, ಈ ಅಭಿವೃದ್ಧಿ ದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆ ಕೂಡ ನೀಡುತ್ತಿದೆ. ಅದರಲ್ಲೂ ಭಾರತೀಯ ರೈಲ್ವೆ ಇಡೀ ಜಗತ್ತಿನಲ್ಲೇ ಹೆಸರು ಮಾಡಿದ್ದು, ಹಲವು ವಿಚಾರಗಳಲ್ಲಿ ಭಾರತೀಯ ರೈಲ್ವೆ ಮಾಡಿದ ಸಾಧನೆಯನ್ನು ಯಾವುದೇ ದೇಶದ ರೈಲ್ವೆ ಇಲಾಖೆಗಳು ಮುರಿಯಲು ಸಾಧ್ಯ ಇಲ್ಲ. ಹೀಗಿದ್ದಾಗ ರೈಲು ಮಾರ್ಗ ಅಭಿವೃದ್ಧಿಗೆ ಒತ್ತು ನೀಡುತ್ತಿರುವ ಕೇಂದ್ರ ಸರ್ಕಾರ ಹೈಸ್ಪೀಡ್ ರೈಲ್ವೆ ಕಾರಿಡಾರ್ ಯೋಜನೆ ಮೂಲಕ ಪ್ರಯಾಣಿಕರಿಗೆ ಇನ್ನಷ್ಟು ವೇಗದ ಸೇವೆ ಕೊಡಲು ಮುಂದಾಗಿದೆ. ಹೀಗಾಗಿ ಬೆಂಗಳೂರು ನಗರಕ್ಕೂ ಹೈಸ್ಪೀಡ್ ರೈಲ್ವೆ ಕಾರಿಡಾರ್ ಮೂಲಕ ದೊಡ್ಡ ಲಾಭ ಆಗಲಿದೆ.

High Speed Rail Corridor

ಬೆಂಗಳೂರಿಗೆ ಹೈಸ್ಪೀಡ್ ರೈಲು ಬಂಪರ್

ದೇಶದಲ್ಲಿ ರೈಲು ಯೋಜನೆಗಳು ಹೊಸ ರೂಪ ಪಡೆಯುತ್ತಿದ್ದು, ಹೈಸ್ಪೀಡ್ ರೈಲು ಯೋಜನೆಯ ಮೂಲಕ ರೈಲು ಹಳಿಗಳ ಕ್ವಾಲಿಟಿ ಎಂದರೆ ಗುಣಮಟ್ಟ ಸುಧಾರಣೆ ಕಾಣಲಿದೆ. ಈ ಮೂಲಕ ಎಲ್ಲಾ ರೈಲುಗಳು ಇಂತಹ ಮಾರ್ಗದಲ್ಲಿ ಸಂಚಾರ ಮಾಡುವಾಗ ವೇಗವಾಗಿ ಚಲಿಸಲು ಅನುಕೂಲ ಕೂಡ ಆಗಲಿದೆ. ಪ್ರಮುಖವಾಗಿ ಬೆಂಗಳೂರು ಮತ್ತು ಚೆನ್ನೈ ಹಾಗೂ ಹೈದರಾಬಾದ್ ನಡುವೆ ಹೈಸ್ಪೀಡ್ ರೈಲು ಬಳಕೆಗೆ ಅವಕಾಶ ಕಲ್ಪಿಸಲಾಗುತ್ತಿದ್ದು, ಬೆಂಗಳೂರಿಗರಿಗೆ ಇದು ದೊಡ್ಡ ಸಹಾಯ ಕೂಡ ಮಾಡಲಿದೆ.

ಪ್ರಯಾಣದ ಅವಧಿಯಲ್ಲಿ ಭಾರಿ ಇಳಿಕೆ

ಬೆಂಗಳೂರು ಮೂಲಕ ಈಗ ಹೊರಡುವ ರೈಲುಗಳು ತಮ್ಮ ಗುರಿ ತಲುಪಲು ಹೆಚ್ಚು ಸಮಯವನ್ನು ಪಡೆಯುತ್ತವೆ. ಆದರೆ ಹೈಸ್ಪೀಡ್ ರೈಲ್ವೆ ಕಾರಿಡಾರ್ ಯೋಜನೆ ಜಾರಿಗೆ ಬಂದರೆ ಇದರಿಂದ ದೊಡ್ಡ ಅನುಕೂಲ ಆಗಲಿದೆ, ಪ್ರಯಾಣದ ಅವಧಿಯಲ್ಲಿ ಭಾರಿ ಇಳಿಕೆ ನಿರೀಕ್ಷೆ ಮಾಡಲಾಗಿದೆ. ಪ್ರಮುಖ ವಿಚಾರ ಏನೆಂದರೆ ಬೆಂಗಳೂರಿನ ಅಭಿವೃದ್ಧಿಗೆ ಹೈಸ್ಪೀಡ್ ರೈಲ್ವೆ ಕಾರಿಡಾರ್ ಯೋಜನೆ ಇನ್ನಷ್ಟು ಬಲ ತುಂಬಲಿದೆ.

ಕೇಂದ್ರ ಬಜೆಟ್ ಲೈವ್ ಜೊತೆಗೆ ವಿಶ್ಲೇಷಣೆಯೂ ಇಲ್ಲಿದೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ (ಫೆ 1) ಸಂಸತ್ತಿನಲ್ಲಿ ಮಂಡಿಸಿದ ಬಜೆಟ್ ಭಾಷಣದ ಲೈವ್ ವಿಡಿಯೊ ಮತ್ತು ತಜ್ಞರ ವಿಶ್ಲೇಷಣೆಗಾಗಿ 'ಒನ್ ಇಂಡಿಯಾ ಕನ್ನಡ' ಯುಟ್ಯೂಬ್ ಚಾನೆಲ್‌ಗೆ ಭೇಟಿ ನೀಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+