• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೀರೋ ಮೊಟೊಕಾರ್ಪ್ ಸಿಒಒ ಆಗಿ ಮೈಕ್ ಕ್ಲಾರ್ಕ್ ನೇಮಕ

|

ನವದೆಹಲಿ, ನವೆಂಬರ್ 27: ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಹೀರೋ ಮೊಟೊಕಾರ್ಪ್ ಲಿಮಿಟೆಡ್ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಮೈಕೆಲ್ ಕ್ಲಾರ್ಕ್ ಅವರನ್ನು ನೇಮಕ ಮಾಡುವುದಾಗಿ ಶುಕ್ರವಾರ ಪ್ರಕಟಿಸಿದೆ.

2021 ರ ಜನವರಿ 1 ರಿಂದ ಅಧಿಕಾರ ವಹಿಸಿಕೊಳ್ಳಲಿರುವ ಕ್ಲಾರ್ಕ್ ಸಿಒಒ ಅಷ್ಟೇ ಅಲ್ಲದೆ, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಲಿದ್ದು, ಹೀರೋ ಸಮೂಹದ ಅಧ್ಯಕ್ಷ ಪವನ್ ಮುಂಜಾಲ್ ಅವರಿಗೆ ನೇರವಾಗಿ ವರದಿ ಸಲ್ಲಿಸಲಿದ್ದಾರೆ.

ಹೀರೋ ಮೊಟೊಕಾರ್ಪ್ ದ್ವಿಚಕ್ರ ವಾಹನಗಳ ದಾಖಲೆಯ ಮಾರಾಟ: ಈ ಬೈಕ್‌ಗೆ ದೇಶದಲ್ಲಿ ಹೆಚ್ಚಿನ ಬೇಡಿಕೆ!

ಇಂಗ್ಲೆಂಡ್‌ನ ಲಿವರ್‌ಪೂಲ್‌ನಲ್ಲಿರುವ ಜಾನ್ ಮೂರ್ಸ್ ವಿಶ್ವವಿದ್ಯಾನಿಲಯದಲ್ಲಿ ಓದಿರುವ ಮೈಕ್ ಕ್ಲಾರ್ಕ್ ಮೆಕ್ಯಾನಿಕಲ್ ಎಂಜಿನಿಯರ್ ಮತ್ತು ಎಂಬಿಎ ಪದವೀಧರರಾಗಿದ್ದಾರೆ. ಕೋಲ್ಲೇಟ್ ಪಾಮೋಲಿವ್ ಕಂಪನಿಯೊಂದಿಗೆ ಕಾರ್ಯನಿರ್ವಹಿಸುವ ಮೊದಲು ಲಿವರ್‌ಪೂಲ್‌ನಲ್ಲಿರುವ ಡೆಲ್ಕೊ ಎಲೆಕ್ಟ್ರಾನಿಕ್ಸ್ ಓವರ್‌ಸೀಸ್ ಕಾರ್ಪೋರೇಷನ್‌ನಲ್ಲಿ ಕೆಲಸ ಮಾಡಿದ್ದರು.

ಜುಲೈನಲ್ಲಿ, ಉನ್ನತ ನಿರ್ವಹಣೆಯಲ್ಲಿನ ಎಲ್ಲಾ ಅಧಿಕಾರಿಗಳು ಬದಲಾಯಿಸಿದ ಹೀರೋ ಈ ಹಿಂದೆ ಜಾಗತಿಕ ಉತ್ಪನ್ನ ಯೋಜನೆಗೆ ಮುಖ್ಯಸ್ಥರಾಗಿದ್ದ ಮಾಲೋ ಲೆ ಮಾಸನ್‌ರನ್ನು ಕಾರ್ಯತಂತ್ರದ ಮುಖ್ಯಸ್ಥರಾಗಿ ಪ್ರಮೋಟ್ ಮಾಡಿತು. ಕಂಪನಿಯ ಗುರುಗ್ರಾಮ್ ಮೂಲದ ಘಟಕದ ಮುಖ್ಯಸ್ಥ ಮಹೇಶ್ ಕೈಕಿನಿ ಅವರನ್ನು ಮುಖ್ಯ ಗುಣಮಟ್ಟದ ಅಧಿಕಾರಿಯಾಗಿ ನೇಮಿಸಲಾಯಿತು. ಪಶ್ಚಿಮ ವಲಯದ ಮಾರಾಟದ ಉಸ್ತುವಾರಿ ಅಶುತೋಷ್ ವರ್ಮಾ ಅವರಿಗೆ ರಾಷ್ಟ್ರೀಯ ಮಾರಾಟದ ಮುಖ್ಯಸ್ಥರಾಗಿ ಬಡ್ತಿ ನೀಡಲಾಯಿತು.

English summary
Hero MotoCorp Ltd – country’s leading two-wheeler manufacturer – on Friday announced the appointment of Michael Clark as the chief operating officer of the company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X