ಚುನಾವಣೆ ಫಲಿತಾಂಶ 
ಮಧ್ಯ ಪ್ರದೇಶ - 230
PartyLW
CONG03111
BJP06103
IND14
OTH20
ರಾಜಸ್ಥಾನ - 199
Party20182013
CONG9921
BJP73163
IND137
OTH149
ಛತ್ತೀಸ್ ಗಢ - 90
PartyLW
CONG0662
BJP114
BSP+25
OTH00
ತೆಲಂಗಾಣ - 119
Party20182014
TRS8863
TDP, CONG+2137
AIMIM77
OTH39
ಮಿಜೋರಾಂ - 40
Party20182013
MNF265
IND80
CONG534
OTH10
 • search

ಬಿಡದಿ: ಕುರ್ಚಿ ಕಾರ್ಖಾನೆ ಆರಂಭಿಸಿದ ಹೆರ್ಮಾನ್ ಮಿಲ್ಲರ್

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬಿಡದಿ, ಅ.15: ವಿಶ್ವಮಾನ್ಯ ಪೀಠೋಪಕರಣ ನಿರ್ಮಾಣ ಸಂಸ್ಥೆ ಹೆರ್ಮಾನ್ ಮಿಲ್ಲರ್, ಬಿಡದಿಯಲ್ಲಿ ತನ್ನ ಹೊಚ್ಚ ಹೊಸ ಉತ್ಪಾದನಾ ಘಟಕವನ್ನು ಆರಂಭಿಸಿದೆ. ಏಷ್ಯಾದಲ್ಲಿ ಕಂಪನಿಯ ಕಾರ್ಯಾಚರಣಾ ಸಾಮರ್ಥ್ಯದ ವಿಸ್ತರಣೆಯನ್ನು ಘೋಷಿಸಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ 60 ಮಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿದೆ.

  ಭಾರತವು ಏಷ್ಯಾದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಮ್ಮ ಒಂದು ಮಾರುಕಟ್ಟೆಯಾಗಿದೆ. ಹೆರ್ಮಾನ್ ಮಿಲ್ಲರ್ ಪೋರ್ಟ್ ಫೋಲಿಯೋ ಈಗ ಸ್ಥಳೀಯ ಮಾರುಕಟ್ಟೆಯಲ್ಲಿ ಹೆಚ್ಚು ಲಭ್ಯವಾಗುವಂತೆ ಮಾಡಲು ಹಾಗೂ ಭಾರತದಲ್ಲಿನ ನಮ್ಮ ಗ್ರಾಹಕರ ಅತ್ಯುತ್ತಮ ಸಹಭಾಗಿಗಳಾಗಿ ಮುಂದುವರಿಯಲು ನಾವು ಸಂತಸಪಡುತ್ತೇವೆ'' ಎಂದು ಜೆರೆಮಿ ಹಾಕಿಂಗ್, ಉಪಾಧ್ಯಕ್ಷರು, ಹೆರ್ಮಾನ್ ಮಿಲ್ಲರ್ ಏಷ್ಯಾ ಪೆಸಿಫಿಕ್ ಹೇಳಿದರು.

  ಈ ಬಿಡದಿ ಘಟಕವು ಏಷ್ಯಾ ಪೆಸಿಫಿಕ್ ನಲ್ಲಿ ನಮ್ಮ ಪ್ರಗತಿಯ ಬದ್ಧತೆಯನ್ನು ಸೂಚಿಸುವ ಮಹತ್ವಪೂರ್ಣ ಹೂಡಿಕೆಯಾಗಿದೆ'. ಕ್ಷಿಪ್ರವಾಗಿ ಬೆಳೆಯುತ್ತಿರುವ ಭಾರತೀಯ ಮಾರುಕಟ್ಟೆಯ ಅಗತ್ಯ ಪೂರೈಸಲು ಆಧುನಿಕ ವಿನ್ಯಾಸದ ಜಾಗತಿಕ ಅಗ್ರಗಣ್ಯ ಬಿಡುಗಡೆಗೊಳಿಸಿದೆ ಎಂದು ಅವರು ಹೇಳಿದರು.

  ಬೆಂಗಳೂರು ನಗರಕ್ಕೆ ಸಮೀಪದಲ್ಲಿರುವ ಈ ಘಟಕವು 5,600 ಚದರ ಮೀಟರ್ ನಷ್ಟು ವಿಶಾಲವಾಗಿದ್ದು, ಚೆನ್ನೈ, ಹೈದರಾಬಾದ್, ಪುಣೆ ಮತ್ತು ಮುಂಬೈನಂಥ ಮೊದಲ ಮತ್ತು ಎರಡನೇ ಹಂತದ ನಗರಗಳಿಗೆ ಸುಲಭವಾಗಿ ತಲುಪಬಹುದಾಗಿದೆ. ಜತೆಗೆ, ಶ್ರೀಲಂಕಾದಂತಹ ನೆರೆಯ ರಾಷ್ಟ್ರಗಳಿಗೂ ಸುಲಭ ದೂರದಲ್ಲಿದೆ. ಹತ್ತಿರದಲ್ಲಿರುವುದರಿಂದ ಉತ್ಪನ್ನದ ಸಮಯ ಮಹತ್ವಪೂರ್ಣವಾಗಿ ತಗ್ಗುತ್ತದೆ ಮತ್ತು ಗ್ರಾಹಕರು ಹೆಚ್ಚು ಅನುಕೂಲದಿಂದ ಯೋಜಿಸಬಹುದಾಗಿದೆ.

  ಬೆಂಗಳೂರಿನಲ್ಲಿ ಮೂಲವಾಗಿದ್ದುಕೊಂಡು, ಹೆರ್ಮಾನ್ ಮಿಲ್ಲರ್ ಇಂಡಿಯಾ ನಮ್ಮ ಗ್ರಾಹಕರಿಗೆ ಅನುಸ್ಥಾಪನಾ ಬೆಂಬಲ ಮತ್ತು ನೆಲೆ ನಂತರದ ನೆರವಿನ ಸಹಿತ ಸಂಪೂರ್ಣ ಕಾರ್ಪೊರೇಟ್ ಸೇವೆಗಳನ್ನು ಒದಗಿಸಲಿದೆ.

  ಐಎಸ್‍ಒ 14001- ಮತ್ತು ಐಎಸ್‍ಒ 9000-ಪ್ರಮಾಣಿತ

  ಐಎಸ್‍ಒ 14001- ಮತ್ತು ಐಎಸ್‍ಒ 9000-ಪ್ರಮಾಣಿತ

  ಹೆರ್ಮಾನ್ ಮಿಲ್ಲರ್ ಬಿಡದಿಯು ಏಷ್ಯಾ ಪೆಸಿಫಿಕ್ ನಲ್ಲಿ ವಿಸ್ತರಣಾ ಕಾರ್ಯಾಚರಣೆಯ ಹೊಸ ಸೇರ್ಪಡೆಯಾಗಿದೆ. ಹೆರ್ಮಾನ್ ಮಿಲ್ಲರ್ ಪ್ರಸ್ತುತ ಚೀನಾದ ನಿಂಗ್ಬೋ ಮತ್ತು ಡಾಂಗ್-ಗೌನ್ ಗಳಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿದೆ.

  ಐಎಸ್‍ಒ 14001- ಮತ್ತು ಐಎಸ್‍ಒ 9000-ಪ್ರಮಾಣಿತ ಘಟಕವು 2015ರ ಆಗಸ್ಟ್ ನಿಂದ ಉತ್ಪಾದನೆ ಆರಂಭಿಸಿದೆ. ಈ ಘಟಕವು ಹೆರ್ಮಾನ್ ಮಿಲ್ಲರ್ ಪರ್ಫಾಮೆನ್ಸ್ ಸಿಸ್ಟಮ್ (ಎಚ್‍ಎಂಪಿಎಸ್) ಅನ್ನು ಅನುಸರಿಸಲಿದ್ದು, ಸಮಯ ತಗ್ಗಿಸುವ ಮತ್ತು ವಿಶ್ವಾಸಾರ್ಹತೆ ಸುಧಾರಿಸಲು ಸಾಧ್ಯವಾಗುವ ಒಂದು ನೇರ ಉತ್ಪಾದನಾ ಚೌಕಟ್ಟು ಹಾಕಿಕೊಂಡಿದೆ.

   ರಿಚರ್ಡ್ ಸ್ಕಾಟ್, ಉಪಾಧ್ಯಕ್ಷರು

  ರಿಚರ್ಡ್ ಸ್ಕಾಟ್, ಉಪಾಧ್ಯಕ್ಷರು

  ಏಷ್ಯಾ ಪೆಸಿಫಿಕ್ ಬಿಡದಿ ಘಟಕ ಮೂರನೆಯದಾಗಿದೆ. ನಮ್ಮ ವಿಶ್ವಾಸಾರ್ಹ ವಿತರಣೆ ಸರಣಿ ಜಾಲ ಮತ್ತು ಉತ್ಪಾದನಾ ಮಾನದಂಡಗಳು ವಿಶ್ವದ ಎಲ್ಲೇ ಉತ್ಪಾದಿಸಿದರೂ ಒಂದೇ ಗುಣಮಟ್ಟವಿರುವುದನ್ನು ಖಾತ್ರಿಗೊಳಿಸುತ್ತದೆ'' ಎಂದು ರಿಚರ್ಡ್ ಸ್ಕಾಟ್, ಉಪಾಧ್ಯಕ್ಷರು, ಹೆರ್ಮಾನ್ ಮಿಲ್ಲರ್ ಅಂತಾರಾಷ್ಟ್ರೀಯ ಕಾರ್ಯಾಚರಣೆ ಹೇಳಿದರು.

  ಬಿಡದಿ ಘಟಕವು ನಮ್ಮ ಜಾಗತಿಕ ಸ್ಟ್ರಾಟಜಿಕ್ ಯೋಜನೆಯ ಪ್ರಮುಖ ಭಾಗವಾಗಿದ್ದು, ಇದು ಅಂತಾರಾಷ್ಟ್ರೀಯ ಉದ್ಯಮದಲ್ಲಿನ ದೀರ್ಘಕಾಲಿಕ ಪ್ರಗತಿ ಸಂಪೂರ್ಣ ಆತ್ಮವಿಶ್ವಾಸದ ಪ್ರತೀಕವಾಗಿದೆ'' ಎಂದು ಹೇಳಿದರು.

  ಭಾರತದಲ್ಲಿನ ದೀರ್ಘಕಾಲದ ಅಸ್ತಿತ್ವ

  ಭಾರತದಲ್ಲಿನ ದೀರ್ಘಕಾಲದ ಅಸ್ತಿತ್ವ

  ಭಾರತದೊಂದಿಗಿನ ನಮ್ಮ ಸಂಬಂಧದ ಪಯಣವು ಚಾರ್ಲ್ಸ್ ಮತ್ತು ರೇ ಈಮ್ಸ್ ರಿಂದ ಆರಂಭಗೊಂಡಿತು. ಐತಿಹ್ಯದ ವಿನ್ಯಾಸ ಜೋಡಿಯನ್ನು ಜವಾಹರ್ ಲಾಲ್ ನೆಹರೂ 1958ರಲ್ಲಿ ಭೇಟಿ ನೀಡುವಂತೆ ಆಹ್ವಾನಿಸಿದರು. ಅದರ ಫಲವೇ 'ಇಂಡಿಯಾ ರಿಪೋರ್ಟ್', ಇದು ಭಾರತದ ತಮ್ಮ ಅನುಭವದ ನೂರಾರು ಛಾಯಾಚಿತ್ರಗಳನ್ನು ಒಳಗೊಂಡಿದೆ.

  ಈ ವರದಿಯು 1961ರಲ್ಲಿ ಅಹಮದಾಬಾದ್ ನಲ್ಲಿ ರಾಷ್ಟ್ರೀಯ ವಿನ್ಯಾಸ ಸಂಸ್ಥೆಯನ್ನು ಸ್ಥಾಪಿಸುವಂತೆ ಪ್ರೇರೇಪಿಸಿತು. ಅದು ಇಂದೂ ಕಾರ್ಯಾಚರಿಸುತ್ತಿದೆ. ಇಂದು, ಹೆರ್ಮಾನ್ ಮಿಲ್ಲರ್, ಎಲ್ಲಾ ಪ್ರಮುಖ ಮಾರುಕಟ್ಟೆಗಳಲ್ಲಿ ವಿತರಣೆಯೊಂದಿಗೆ ಪ್ರಗತಿಯನ್ನು ಮುಂದುವರಿಸಲಿದೆ.

  ವ್ಯಾಪಕ ಡೀಲರ್ ಜಾಲ : ಕಾರ್ತಿಕ್ ಶೇಥಿಯಾ

  ವ್ಯಾಪಕ ಡೀಲರ್ ಜಾಲ : ಕಾರ್ತಿಕ್ ಶೇಥಿಯಾ

  ಭಾರತದಲ್ಲಿ ಮಾರಾಟ ಚಟುವಟಿಕೆಯನ್ನು 90ರ ದಶಕದಿಂದಲೂ ನಡೆಸುತ್ತಿದ್ದೇವೆ ಮತ್ತು ಇಂದು ಭಾರತದಲ್ಲಿ 20ಕ್ಕೂ ಹೆಚ್ಚು ಸ್ಥಳಗಳ ಮೂಲಕ ವ್ಯಾಪಕ ಡೀಲರ್ ಜಾಲವನ್ನು ಹೊಂದಿದ್ದೇವೆ. ಭಾರತದಲ್ಲಿರುವ ಫಾರ್ಚೂನ್ 500 ಕಂಪನಿಗಳು ಮತ್ತು ಭಾರತದ ಬ್ರಾಂಡ್ ಗಳ ಸಹಿತ ನಮ್ಮ ಗ್ರಾಹಕ ನೆಲೆಗೆ ಸೇವೆ ಒದಗಿಸಲು ನಾವು ಉತ್ಸುಕರಾಗಿದ್ದೇವೆ. ನಮ್ಮ ಗ್ರಾಹಕರು, ಉದ್ಯೋಗಿಗಳ ಕ್ಷೇಮ ಮತ್ತು ಕಾರ್ಯಕ್ಷೇತ್ರದಲ್ಲಿ ಅವರ ಕಾರ್ಯನಿರ್ವಹಣೆಯನ್ನು ಉತ್ತಮಗೊಳಿಸಲು ನೆರವಾಗುವ ಖಚಿತ ಪರಿಹಾರಗಳನ್ನು ಎದುರು ನೋಡುತ್ತಾರೆ

  ವಿಶ್ವದಲ್ಲೇ ಅತ್ಯಂತ ದಕ್ಷ ಕುರ್ಚಿ

  ವಿಶ್ವದಲ್ಲೇ ಅತ್ಯಂತ ದಕ್ಷ ಕುರ್ಚಿ

  ಎರಾನ್ ಟಿಎಂ ಮತ್ತು ಮಿರ್ರಾ 2 ಟಿಎಂನಂತಹ ನಮ್ಮ ವಿನ್ಯಾಸಗಳು ವಿಶ್ವದಲ್ಲೇ ಅತ್ಯಂತ ದಕ್ಷ ಕುರ್ಚಿಗಳಾಗಿವೆ ಮತ್ತು ಅವು ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವಂಥವುಗಳಾಗಿವೆ.

  ಲಿವಿಂಗ್ ಆಫೀಸ್ ಎಂಬ ಕಾರ್ಯಕ್ಷೇತ್ರದ ವಿನ್ಯಾಸದ ಕ್ರಾಂತಿಕಾರಿ ಫ್ರೇಮ್ ವರ್ಕ್ ಕಾರ್ಯಕ್ಷೇತ್ರದ ವಿನ್ಯಾಸವನ್ನೇ ಮರುವ್ಯಾಖ್ಯಾನಿಸಿದೆ ಮತ್ತು ವಿನ್ಯಾಸಗಾರರು ಮತ್ತು ಗ್ರಾಹಕರು ಮೆಚ್ಚಿ ಅಳವಡಿಸಲ್ಪಟ್ಟಿದೆ.

  ಹೊಸ ಘಟಕವು ಫಾಸ್ಟ್‍ಟ್ರಾಕ್ ಡೆಲಿವರಿ ಸೇವೆಯನ್ನು ಒದಗಿಸುತ್ತದೆ. ಫಾಸ್ಟ್ರಾಕ್ ಭಾರತದಲ್ಲಿ ನಿರ್ಮಾಣಗೊಂಡ ಬ್ರಾಂಡ್ ಆಗಿದ್ದು, ಇದು ಹೆಚ್ಚುತ್ತಿರುವ ಬೇಡಿಕೆಗನುಗುಣವಾಗಿ ಉನ್ನತ ಕಾರ್ಯನಿರ್ವಹಣೆಯ ದಕ್ಷ ಪರಿಹಾರಗಳನ್ನು ಒದಗಿಸುತ್ತದೆ

  ಖರೀದಿಸುವುದು ಹೇಗೆ

  ಖರೀದಿಸುವುದು ಹೇಗೆ

  ಗ್ರಾಹಕರು ಫಾಸ್ಟ್ರಾಕ್ ಕಾರ್ಯಕ್ರಮದ ಮೂಲಕ ಖರೀದಿಸಲು 10-20 ದಿನಗಳ ಸಮಯ ತಗುಲುತ್ತದೆ. ಹೆರ್ಮಾನ್ ಮಿಲ್ಲರ್ ಇಂಡಿಯಾ ಕೂಡಾ ಹೆಚ್ಚುವರಿ ವಿನ್ಯಾಸ ಸೇವೆಗಳಾದ ಸ್ಪೇಸ್ ಪ್ಲಾನಿಂಗ್ ಮತ್ತು ಲಿವಿಂಗ್ ಆಫೀಸ್ ಸಲ್ಯೂಷನ್ ಅನ್ನೂ ಒದಗಿಸುತ್ತದೆ. ಗ್ರಾಹಕರು ಹೆರ್ಮಾನ್ ಮಿಲ್ಲರ್ ನ ಉತ್ಪನ್ನಗಳ ಬಗ್ಗೆ ಯಾವುದೇ ಪ್ರಾದೇಶಿಕ ಡೀಲರ್ ಶೋರೂಮ್ ಗಳಲ್ಲಿ ಅನ್ವೇಷಿಸಬಹುದು. ಹೆಚ್ಚಿನ ವಿವರಗಳಿಗೆ : www.hermanmillerbidadi.com ಗೆ ಭೇಟಿ ಕೊಡಿ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  US-based furniture firm Herman Miller inaugurated its production facility at Bidadi ...Herman Miller designs can be found in the permanent collections of museums worldwide. Herman Miller plans to double sales in India to around $60 million in the next four years Vice President Jeremy Hocking.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more