Beer Sales: ರಾಜ್ಯದಲ್ಲಿ ಹೆಚ್ಚಾದ ಬಿಸಿಲು, ಚಿಲ್ಡ್ ಬಿಯರ್ ಮೊರೆ ಹೋದ ಜನರು! ದಾಖಲೆ ಮಾರಾಟ

ಬೆಂಗಳೂರು, ಏಪ್ರಿಲ್. 13: ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಒಂದೆರಡು ಭಾಗಗಳಲ್ಲಿ ಸಣ್ಣಗೆ ಮಳೆಯಾಗುತ್ತಿದೆ. ಸುಡುವ ಬಿಸಿಲಿನ ಧಗೆಯಿಂದ ಆರೋಗ್ಯ ಪ್ರಿಯರು ತಂಪಗಿನ ಆಹಾರ ಪದಾರ್ಥಗಳತ್ತ ಮುಖ ಮಾಡಿದ್ದಾರೆ. ಅದೇ ಆಲ್ಕೋಹಾಲ್ ಪ್ರಿಯರು ತಮ್ಮ ನೆಚ್ಚಿನ ಬಿಯರ್ ಕಡೆ ತಲೆ ಹಾಕಿ ಮಲಗಿದ್ದಾರೆ.

ಹೌದು.. ಇದು ನಾವು ಹೇಳುತ್ತಿರುವುದಲ್ಲ... ಅಂಕಿ ಅಂಶಗಳು ಹೇಳುತ್ತಿರೋದು. ಬಿಸಿಲಿನ ತಾಪದಿಂದ ಮನೆಯಲ್ಲಿ ಕೂರಲಾಗದೇ, ಹೊರಗೆ ಹೋಗಲಾರದೆ ಜನ ಹಿಂಸೆ ಅನುಭವಿಸುತ್ತಿದ್ದಾರೆ. ಇದೇ ವೇಳೆ ರಾಜ್ಯದಲ್ಲಿ ಬಿಯರ್ ಮಾರಾಟದಲ್ಲಿ ಸಕತ್ ಹೆಚ್ಚಳ ಕಂಡಿದೆ. 11 ದಿನಗಳಲ್ಲಿ ಬರೋಬ್ಬರಿ 17 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ!.

Heat wave Amid of Temperature rise Beer Sales Increased in karnataka

11 ದಿನಗಳಲ್ಲಿ 17 ಲಕ್ಷ ಲೀಟರ್ ಬಿಯರ್ ಮಾರಾಟ!

ರಾಜ್ಯದಲ್ಲಿ ದಿನೇ ದಿನ ಬಿಸಿಲಿನ ಧಗೆ ಹೆಚ್ಚಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಬಿಸಿಲು ಅಧಿಕವಾಗಿದೆ. ಹಾಗೇಯೇ ಕಳೆದ ವರ್ಷಕ್ಕಿಂತ ಈ ವರ್ಷ ಬಿಯರ್ ಮಾರಾಟದಲ್ಲಿಯೂ ಏರಿಕೆಯಾಗಿದ್ದು, ದಾಖಲೆ ಬರೆದಿದೆ. ಏಪ್ರಿಲ್ 1 ರಿಂದ ಏಪ್ರಿಲ್ 11 ರವರೆಗೂ ಅಂದರೆ ಹನ್ನೊಂದು ದಿನಗಳಲ್ಲಿ ರಾಜ್ಯದಲ್ಲಿ ಒಟ್ಟಾರೆ 17.67 ಲಕ್ಷ ಲೀಟರ್‌ ವಿವಿಧ ಬ್ರಾಂಡ್‌ನ ಬಿಯರ್‌ ಮಾರಾಟವಾಗಿವೆ.

ಕಳೆದ ಮೂರು ವರ್ಷಗಳಿಗೆ ಹೋಲಿಸಿಕೊಂಡರೇ ಈ ವರ್ಷವೇ ಇಷ್ಟೊಂದು ಲೀಟರ್ ಬಿಯರ್ ಮಾರಾಟವಾಗಿರುವುದು. 2021ರಲ್ಲಿ ಬೇಸಿಗೆಯ ಅವಧಿಯಲ್ಲಿ 8.83 ಲಕ್ಷ ಲೀಟರ್‌ ಬಿಯರ್ ಮಾರಾಟವಾಗಿತ್ತು. 2022ರಲ್ಲಿ 9.20 ಲಕ್ಷ ಲೀಟರ್‌ ಬಿಯರ್ ಮಾರಾಟವಾಗಿದ್ದರೇ, 2023 ರಲ್ಲಿ 13.16 ಲಕ್ಷ ಲೀಟರ್‌ ಬಿಯರ್‌ ಮಾರಾಟವಾಗಿತ್ತು.

Heat wave Amid of Temperature rise Beer Sales Increased in karnataka

ಭಾರತದ ಹವಾಮಾನ ಇಲಾಖೆಯ ಪ್ರಕಾರ ದೇಶದ ಹೆಚ್ಚಿನ ಭಾಗಗಳಲ್ಲಿ ಏಪ್ರಿಲ್‌ನಿಂದ ಜೂನ್‌ವರೆಗೆ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ಇರಲಿದೆ. ಇದರಲ್ಲಿ ರಾಕ್ಯವೂ ಸೇರಿಕೊಂಡಿದೆ. ಜೂನ್‌ವರೆಗೂ ಬಿಸಿಲು ಇದ್ದೆ ಇರಲಿದೆ. ಮಳೆ ಬಂದರೂ ಕೂಟ ಅದು ಸಾಧಾರಣವಾಗಿರಲಿದೆ ಎಂದು ಐಎಂಡಿ ಅಭಿಪ್ರಾಯ ಪಟ್ಟಿದೆ. ಹೀಗಾಗಿ ಬಿಯರ್ ಮಾರಾಟ ಮತ್ತಷ್ಟು ಹೆಚ್ಚಾಗುವ ಸಂಭವವಿದೆ. ಇನ್ನು, 2023ಕ್ಕೆ ಹೋಲಿಸಿದರೆ ಈ ವರ್ಷ ಬರೋಬ್ಬರಿ 4.51 ಲಕ್ಷ ಲೀಟರ್‌ ಬಿಯರ್‌ ಹೆಚ್ಚು ಮಾರಾಟ ಆಗಿದೆ.

ಲೋಕಸಭಾ ಚುನಾವಣೆ ಮತ್ತು ಬಿಯರ್

ಇನ್ನು, ಬಿಸಿಲಿನ ಬೇಗೆ ಜೊತೆಗೆ ಲೋಕಸಭಾ ಚುನಾವಣೆ ಕೂಡ ಕಾಲಿಡುತ್ತಿದೆ. ಎರಡು ಹಂತಗಳಲ್ಲಿ ಚುನಾವಣೆ ನಡೆಲಿದ್ದು, ವಿಧಾನಸಭಾ ಚುನಾವಣೆಯಲ್ಲಿ ಇರುವ ಮದ್ಯ ಹಂಚಿಕೆ ಈ ಚುನಾವಣೆಯಲ್ಲಿ ಇರುವುದಿಲ್ಲ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಹೀಗಾಗಿ ಬಿಯರ್ ಮಾರಾಟದಲ್ಲಿ ಅಂತಹ ಪರಿಣಾಮ ಬೀರುವುದಿಲ್ಲ ಎನ್ನಲಾಗುತ್ತದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆ, ವಿಧಾನ ಸಭಾ ಚುನಾವಣೆಗಳಲ್ಲಿ ಮದ್ಯ ಮಾರಾಟ ಮತ್ತು ಮದ್ಯದ ಹಂಚಿಕೆ ಅತಿಯಾಗಿರುತ್ತದೆ. ಆದರೆ, ಲೋಕಸಭಾ ಚುನಾವಣೆಯಲ್ಲಿ ಇದು ತುಂಬಾ ಕಡಿಮೆ ಇರುತ್ತದೆ. ಇನ್ನು, ಬಿಯರ್ ಜೊತೆಗೆ ಇತರ ಮದ್ಯ ಮಾರಾಟದಲ್ಲೂ ಏರಿಕೆ ಕಂಡು ಬಂದಿದೆ. ಕಳೆದ ವರ್ಷದ ಈ ಅವಧಿಗೆ ಹೋಲಿಸಿದರೆ ರಾಜ್ಯದಲ್ಲಿ 65 ಸಾವಿರ ಬಾಕ್ಸ್ ಭಾರತೀಯ ಮದ್ಯ ಅಧಿಕವಾಗಿ ಮಾರಾಟವಾಗಿದೆ. ಚುನಾವಣಾ ಪ್ರಚಾರ ಬಿರುಸು್ಒಂಡತೆ ಮದ್ಯದ ಮಾರಾಟದಲ್ಲಿ ಏರಿಕೆ ಕಂಡು ಬರುವ ಸಾಧ್ಯತೆಯಿದೆ.

ಇನ್ನು, ಬಿಯರ್ ಜೊತೆಗೆ ತಣ್ಣನೆ ಕೂಲ್‌ ಡ್ರಿಂಗ್ಸ್‌ಗಳು, ಎಸಿಗಳಿಗೂ ಬೇಡಿಕೆ ಹೆಚ್ಚಿದೆ. ಇನ್ನು, ಬಿಸಿಲಿಗೆ ಹೋಗುವವರು ತಮ್ಮ ತ್ವಚೆಯನ್ನು ಕಾಪಾಡಿಕೊಳ್ಳಲು ಹೆಚ್ಚು ಹೆಚ್ಚು ಸನ್‌ಸ್ಕ್ರೀನ್‌ಗಳನ್ನು ಕೊಂಡುಕೊಳ್ಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+