ಎಚ್.ಡಿ.ಎಫ್.ಸಿ ಯಿಂದ ಸೇವಿಂಗ್ಸ್ ಖಾತೆಗಳ ಮೇಲಿನ ಬಡ್ಡಿ ದರ ಕಡಿತ
ಮುಂಬೈ, ಆಗಸ್ಟ್ 17: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಂತರ ಹಲವು ಬ್ಯಾಂಕ್ ಗಳು ಸೇವಿಂಗ್ಸ್ ಖಾತೆಗಳ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿದ್ದವು. ಇದೀಗ ಖಾಸಗೀ ಕ್ಷೇತ್ರದ ಅತೀ ದೊಡ್ಡ ಬ್ಯಾಂಕ್ ಎಚ್.ಡಿ.ಎಫ್.ಸಿ ಕೂಡ ಸೇವಿಂಗ್ಸ್ ಖಾತೆಗಳ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿದೆ.
ಆಗಸ್ಟ್ 2ರಂದು ಆರ್.ಬಿ.ಐ ರೆಪೊ ದರಗಳನ್ನು ಕಡಿತಗೊಳಿಸಿದ ಹಿನ್ನಲೆಯಲ್ಲಿ ಎಚ್.ಡಿ.ಎಫ್.ಸಿ ಕೂಡಾ ತನ್ನ ಸೇವಿಂಗ್ಸ್ ಖಾತೆಗಳ ಬಡ್ಡಿದರವನ್ನು ಕಡಿತಗೊಳಿಸಿದೆ. ಈ ಹಿಂದಿನ ಶೇಕಡಾ 4ರಿಂದ ಇದೀಗ ಶೇ. 3.5ಕ್ಕೆ ಬಡ್ಡಿದರವನ್ನು ಕಡಿತಗೊಳಿಸಿದೆ.

50ಲಕ್ಷ ರೂಪಾಯಿಗಿಂತ ಮೇಲಿನ ಉಳಿತಾಯ ಖಾತೆಗಳ ಮೇಲಿನ ಬಡ್ಡಿದರದಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. 50ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಸೇವಿಂಗ್ಸ್ ಗಳಿಗೆ ಈ ಹಿಂದಿನ ಶೇಕಡಾ 4ರ ಬಡ್ಡಿದರ ಮುಂದುವರಿಯಲಿದೆ.












Click it and Unblock the Notifications