• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2021ರ ಆಗಸ್ಟ್‌ನಲ್ಲಿ ಜಿ.ಎಸ್.ಟಿ ಆದಾಯ ಸಂಗ್ರಹ 1,12,020 ಕೋಟಿ ರೂ

|
Google Oneindia Kannada News

2021ರ ಆಗಸ್ಟ್‌ನಲ್ಲಿ 1,12,020 ಕೋಟಿ ರೂ ಜಿ.ಎಸ್.ಟಿ. ಆದಾಯ ಸಂಗ್ರಹವಾಗಿದ್ದು, ಸಿ.ಜಿ.ಎಸ್.ಟಿ 20,522 ಕೋಟಿ ರೂ, ಎಸ್.ಜಿ.ಎಸ್.ಟಿ 20,605 ಕೋಟಿ ರೂ, 56,246 ಕೋಟಿ ರೂ ಐ.ಜಿ.ಎಸ್.ಟಿ [ಸರಕುಗಳ ಆಮದು ವಲಯದಲ್ಲಿ ಸಂಗ್ರಹವಾಗಿರುವ 26,884 ಕೋಟಿ ರೂ ಒಳಗೊಂಡಂತೆ] ಮತ್ತು ಸೆಸ್ ರೂಪದಲ್ಲಿ 8,646 ಕೋಟಿ ರೂ [ಸರಕುಗಳ ಆಮದು ವಲಯದಲ್ಲಿ ಸಂಗ್ರಹವಾಗಿರುವ 646 ಕೋಟಿ ರೂ ಸೇರಿ] ಕ್ರೋಡೀಕರಣವಾಗಿದೆ.

ಸರ್ಕಾರ ಸಿ.ಜಿ.ಎಸ್.ಟಿಗೆ 23,043 ಕೋಟಿ ರೂ ಮತ್ತು ಐ.ಜಿ.ಎಸ್.ಟಿಯಿಂದ ಎಸ್.ಜಿ.ಎಸ್.ಟಿ.ಗೆ 19,139 ಕೋಟಿ ರೂ ಮೊತ್ತವನ್ನು ನಿಯಮಿತವಾಗಿ ಪರಿಹಾರದ ರೂಪದಲ್ಲಿ ಇತ್ಯರ್ಥಪಡಿಸಿದೆ. ಕೇಂದ್ರ ಮತ್ತು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ನಡುವೆ 50:50 ರ ಅನುಪಾತದಲ್ಲಿ ಐ.ಜಿ.ಎಸ್.ಟಿ ಯಲ್ಲಿ ತಾತ್ಕಾಲಿಕ ಪರಿಹಾರದ ರೂಪವಾಗಿ ಕೇಂದ್ರ 24,000 ಕೋಟಿ ರೂ ಇತ್ಯರ್ಥಪಡಿಸಿದೆ. 2021 ರ ಆಗಸ್ಟ್‌ನಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ನಿಯಮಿತ ಮತ್ತು ತಾತ್ಕಾಲಿಕ ಆದಾಯ ಹಂಚಿಕೆಯಲ್ಲಿ ಸಿ.ಜಿ.ಎಸ್.ಟಿಗೆ 55,565 ಕೋಟಿ ರೂ ಮತ್ತು ಎಸ್.ಜಿ.ಎಸ್.ಟಿಗೆ 57,744 ಕೋಟಿ ರೂ ನೀಡುವುದನ್ನು ಇತ್ಯರ್ಥಪಡಿಸಿದೆ.

2021 ರ ಆಗಸ್ಟ್‌ನಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ30 ರಷ್ಟು ಹೆಚ್ಚು ಆದಾಯ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಆಗಸ್ಟ್‌ನಲ್ಲಿ ದೇಶೀಯ ವಹಿವಾಟಿನ ಎಲ್ಲಾ ಮೂಲಗಳಿಂದ ಶೇ 27 ರಷ್ಟು ಹೆಚ್ಚು ಆದಾಯ ಬಂದಿದೆ. 2019-20 ರ ಸಾಲಿನ ಆಗಸ್ಟ್‌ನಲ್ಲಿ 98,202 ಕೋಟಿ ರೂ ಕ್ರೋಡೀಕರಣವಾಗಿದ್ದು, ಈ ಬಾರಿ 14% ರಷ್ಟು ಪ್ರಗತಿ ದಾಖಲಿಸಿದೆ.

ಕಳೆದ 9 ತಿಂಗಳಿಂದ ಜಿ.ಎಸ್.ಟಿ ಸಂಗ್ರಹ ಒಂದು ಲಕ್ಷ ಕೋಟಿ ರೂ ದಾಟುತ್ತಿದ್ದು, 2021 ರ ಜೂನ್ ನಲ್ಲಿ ಕೋವಿಡ್ ಎರಡನೇ ಅಲೆ ಕಾರಣ ಒಂದು ಲಕ್ಷ ಕೋಟಿ ರೂಗಿಂತ ಕಡಿಮೆ ಸಂಗ್ರಹವಾಗಿತ್ತು. ಕೋವಿಡ್ ನಿಯಂತ್ರಣಗಳನ್ನು ಸುಗಮಗೊಳಿಸಿದ ಕಾರಣ ಜುಲೈ ಮತ್ತು ಆಗಸ್ಟ್‌ನಲ್ಲಿ ಒಂದು ಲಕ್ಷ ಕೋಟಿ ರೂ ಗಿಂತ ಹೆಚ್ಚು ಆದಾಯ ಸಂಗ್ರಹವಾಗಿದೆ. ಇದು ಆರ್ಥಿಕತೆ ವೇಗವಾಗಿ ಚೇತರಿಸಿಕೊಳ್ಳುತ್ತಿರುವ ಸ್ಪಷ್ಟ ಸಂಕೇವಾಗಿದೆ. ವಂಚನೆ ವಿರುದ್ಧದ ಕಾರ್ಯಾಚರಣೆ, ಅದರಲ್ಲೂ ವಿಶೇಷವಾಗಿ ನಕಲಿ ಬಿಲ್ ಗಳ ವಿರುದ್ಧ ಹೆಚ್ಚಿನ ಕ್ರಮಗಳನ್ನು ಕೈಗೊಂಡ ಪರಿಣಾಮ ಆರ್ಥಿಕ ಬೆಳವಣಿಗೆಯಾಗುತ್ತಿರುವ ಜತೆಗೆ ಜಿ.ಎಸ್.ಟಿ. ಸಂಗ್ರಹಕ್ಕೂ ಹೆಚ್ಚಿನ ರೀತಿಯಲ್ಲಿ ನೆರವಾಗುತ್ತಿದೆ. ಮುಂಬರುವ ತಿಂಗಳುಗಳಲ್ಲಿಯೂ ಜಿ.ಎಸ್.ಟಿ.ಯ ದೃಢವಾದ ಆದಾಯ ಮುಂದುವರಿಯುವ ಸಾಧ್ಯತೆಯಿದೆ.

ವರ್ಷದಿಂದ ವರ್ಷಕ್ಕೆ ಜಿಎಸ್‌ಟಿ ಆದಾಯ ಹೆಚ್ಚಳ: ಜಿಎಸ್ ಸಂಗ್ರಹ ಸತತ 8 ತಿಂಗಳು 1 ಲಕ್ಷ ಕೋಟಿಗೂ ಅಧಿಕ ಮುಂದುವರಿದಿದೆ, ಆದರೆ ಜೂನ್ 2021ರಲ್ಲಿ 1 ಲಕ್ಷಕ್ಕಿಂತ ಕೆಳಗೆ ಕುಸಿದಿತ್ತು, ಜೂನ್ ತಿಂಗಳಲ್ಲಿ ಸಂಗ್ರಹವಾಗಿದ್ದ ಮೊತ್ತ ಬಹುತೇಕ 2021ರ ಮೇ ತಿಂಗಳಿಗೆ ಸೇರಿದ್ದು, ಏಕೆಂದರೆ ಕೋವಿಡ್ ಕಾರಣದಿಂದಾಗಿ ಬಹುತೇಕ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶದಲ್ಲಿ ಸಂಪೂರ್ಣ ಅಥವಾ ಭಾಗಶಃ ಲಾಕ್ ಡೌನ್ ವಿಧಿಸಿರುವುದು ಕಾರಣವಾಗಿತ್ತು.

ಕೋವಿಡ್ ನಿರ್ಬಂಧಗಳ ಸಡಿಲಿಕೆ ಪರಿಣಾಮ, ಜಿಎಸ್‌ಟಿ ಆದಾಯ ಸಂಗ್ರಹ 2021ರ ಜುಲೈನಲ್ಲಿ ಮತ್ತೆ 1 ಲಕ್ಷ ಕೋಟಿ ರೂ.ಗೂ ಮೇಲೇರಿದೆ, ಇದು ಆರ್ಥಿಕತೆ ವೇಗವಾಗಿ ಚೇತರಿಸಿಕೊಳ್ಳುತ್ತಿರುವ ಸಂಕೇತವಾಗಿದೆ. ಮುಂದಿನ ತಿಂಗಳುಗಳಲ್ಲಿಯೂ ಸಹ ಜಿಎಸ್‌ಟಿ ಸಂಗ್ರಹ ಉತ್ತಮ ರೀತಿಯಲ್ಲಿ ಮುಂದುವರಿಯುವ ಸಾಧ್ಯತೆಗಳಿವೆ. (ಅಂಕಿ ಅಂಶ ಕೃಪೆ: ವಿತ್ತ ಸಚಿವಾಲಯ)

2021ರ ಆಗಸ್ಟ್‌ನಲ್ಲಿ ರಾಜ್ಯವಾರು ಜಿಎಸ್‌ಟಿ ಆದಾಯ ಸಂಗ್ರಹ ವಿವರ
ಕ್ರಮ ಸಂಖ್ಯೆ ರಾಜ್ಯ ಆಗಸ್ಟ್‌ 2020 ಆಗಸ್ಟ್‌2021 ಪ್ರಗತಿ
01 ಜಮ್ಮು ಮತ್ತು ಕಾಶ್ಮೀರ 326 392 20%
02 ಹಿಮಾಚಲ ಪ್ರದೇಶ 597 704 18%
03 ಪಂಜಾಬ್ 1,139 1,414 24%
04 ಚಂಡಿಗಢ 139 144 4%
05 ಉತ್ತರಾಖಂಡ 1,006 1,089 8%
06 ಹರಿಯಾಣ 4,373 5,618 28%
07 ದೆಹಲಿ 2,880 3,605 25%
08 ರಾಜಸ್ಥಾನ 2,582 3,049 18%
09 ಉತ್ತರ ಪ್ರದೇಶ 5,098 5,946 17%
10 ಬಿಹಾರ 967 1,037 7%
11 ಸಿಕ್ಕಿಂ 147 219 49%
12 ಅರುಣಾಚಲ ಪ್ರದೇಶ 35 53 52%
13 ನಾಗಾಲ್ಯಾಂಡ್ 31 32 2%
14 ಮಣಿಪುರ 26 45 71%
15 ಮಿಜೋರಾಂ 12 16 31%
16 ತ್ರಿಪುರ 43 56 30%
17 ಮೇಘಾಲಯ 108 119 10%
18 ಅಸ್ಸಾಂ 709 959 35%
19 ಪಶ್ಚಿಮ ಬಂಗಾಳ 3,053 3,678 20%
20 ಜಾರ್ಖಂಡ್ 1,498 2,166 45%
21 ಒಡಿಶಾ 2,348 3,317 41%
22 ಚತ್ತಿಸ್ ಗಢ 1,994 2,391 20%
23 ಮಧ್ಯಪ್ರದೇಶ 2,209 2,438 10%
24 ಗುಜರಾತ್ 6,030 7,556 25%
25 ದಾಮನ್ ಮತ್ತು ದಿಯು 70 01 -99%
26 ದಾದ್ರ ಮತ್ತು ನಾಗರ್ ಹವೇಲಿ 145 254 74%
27 ಮಹಾರಾಷ್ಟ್ರ 11,602 15,175 31%
28 ಕರ್ನಾಟಕ 5,502 7,429 35%
29 ಗೋವಾ 213 285 34%
30 ಲಕ್ಷದ್ವೀಪ 0 1 220%
31 ಕೇರಳ 1,229 1,612 31%
32 ತಮಿಳುನಾಡು 5,243 7,060 35%
33 ಪುದುಚೆರಿ 137 156 14%
34 ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು 13 20 58%
35 ತೆಲಂಗಾಣ 2,793 3,526 26%
36 ಆಂಧ್ರ ಪ್ರದೇಶ 1,955 2,591 33%
37 ಲಡಾಖ್ 5 14 213%
38 ಇತರೆ ಭೂಭಾಗ 180 109 -40%
39 ಕೇಂದ್ರೀಯ ವ್ಯಾಪ್ತಿ 161 214 33%
-- ಒಟ್ಟು 66,598 ಕೋಟಿ ರು 84,490 ಕೋಟಿ ರು 27%

English summary
The gross GST revenue collected in the month of August 2021 is ₹ 1,12,020 crore of which CGST is ₹ 20,522 crore, SGST is ₹ 26,605 crore, IGST is ₹ 56,247 crore (including ₹ 26,884 crore collected on import of goods) and Cess is ₹ 8,646 crore (including ₹ 646 crore collected on import of goods).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X