ಗ್ರಾಹಕರೇ ಗಮನಿಸಿ! 177 ವಸ್ತುಗಳ ಮೇಲಿನ ಜಿಎಸ್ಟಿ ಇಳಿಕೆ

Posted By:
Subscribe to Oneindia Kannada
ಸುಮಾರು 177 ದಿನಬಳಕೆ ಸಾಮಗ್ರಿಗಳ ಮೇಲೆ ಜಿ ಎಸ್ ಟಿ ತೆರಿಗೆ ದರ 28% ಇಂದ 18% ಗೆ ಇಳಿಕೆ | Oneindia Kannada

ಗುವಾಹತಿ, ನವೆಂಬರ್ 10: ಹಣಕಾಸು ಸಚಿವ ಅರುಣ್‌ ಜೇಟ್ಲಿ ನೇತೃತ್ವದಲ್ಲಿ ಜಿಎಸ್‌ಟಿ ಮಂಡಳಿಯ ಸಭೆ ನಡೆದಿದ್ದು, ಸರಿ ಸುಮಾರು 177ಕ್ಕೂ ಅಧಿಕ ವಸ್ತಗಳ ಮೇಲಿನ ಜಿಎಸ್ಟಿ ತೆರಿಗೆ ಹೊರೆ ಇಳಿಕೆಯಾಗಿದೆ. 50 ಸಾಮಾಗ್ರಿಗಳಿಗೆ ಮಾತ್ರ ಶೇ 28ರಷ್ಟು ತೆರಿಗೆ ನಿಗದಿ ಮಾಡಿದೆ.

ರೆಸ್ಟೋರೆಂಟ್ ಗಳ ಜಿಎಸ್ಟಿ ಇಳಿಕೆ, ತಿಂಡಿ ಪೋತರಿಗೆ ಖುಷಿ!

ಗುವಾಹತಿಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ನೇತೃತ್ವದಲ್ಲಿ 23ನೇ ಜಿಎಸ್‌ಟಿ ಮಂಡಳಿಯ ಸಭೆ ನಡೆಸಲಾಗಿದೆ. ದಿನ ಬಳಕೆಯಲ್ಲಿರುವ ಅಂದಾಜು 177 ವಸ್ತುಗಳ ಮೇಲಿನ ಜಿಎಸ್‌ಟಿ ದರ ಶೇ.28ರಿಂದ 18ಕ್ಕೆ ಇಳಿಸಲಾಗಿದೆ.

 GST Council's meet : Only 50 items to remain in 28 percent slab

ಸಣ್ಣ ತೆರಿಗೆದಾರರನ್ನು ಗಮನದಲ್ಲಿಟ್ಟುಕೊಂಡು 177ಕ್ಕೂ ಹೆಚ್ಚು ವಸ್ತುಗಳ ಮೇಲಿನ ಜಿಎಸ್‌ಟಿ ದರ ಶೇ.28ರಿಂದ 18ಕ್ಕೆ ಕಡಿತಗೊಳಿಸಲಾಗುವುದು ಎಂದು ಬಿಹಾರದ ಡಿಸಿಎಂ ಹಾಗೂ ಜಿಎಸ್‌ಟಿಎನ್‌ (Goods and Services Tax Network ) ಸಮಿತಿಯ ಮುಖ್ಯಸ್ಥ ಸುಶೀಲ್‌ ಕುಮಾರ್‌ ಮೋದಿ ತಿಳಿಸಿದರು.

ಶೇವಿಂಗ್ ಕ್ರೀಮ್, ಟೂತ್ ಪೇಸ್ಟ್ ,ಶಾಂಪೂ, ಚ್ಯೂಯಿಂಗ್ ಗಮ್, ಚಾಕಲೇಟ್, ಡಿಯೋಡ್ರೆಂಟ್, ವಾಷಿಂಗ್ ಪೌಡರ್, ಡಿಟರ್ಜೆಂಟ್, ಮಾರ್ಬಲ್, ಸೂಟ್‌ಕೇಸ್‌, ವಾಲ್‌ಪೇಪರ್‌, ಪ್ಲೈವುಡ್‌, ಸ್ಟೇಶನರಿ ವಸ್ತುಗಳು, ಸಂಗೀತ ವಾದ್ಯಗಳು ಸೇರಿದಂತೆ 177ಕ್ಕೂ ಹೆಚ್ಚು ವಸ್ತುಗಳ ಜಿಎಸ್‌ಟಿ ತೆರಿಗೆ ದರ ಇಳಿಕೆಯಾಗಿದೆ. 200ಕ್ಕೂ ಅಧಿಕ ವಸ್ತುಗಳ ಮೇಲಿನ ತೆರಿಗೆ ಇಳಿಕೆಗೆ ಬೇಡಿಕೆ ಬಂದಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Goods and Services Tax (GST) Council meeting is taking place today in Guwahati, Assam. The GST Council may today consider reducing items in the 28 per cent tax slab and slash rates for daily use items
Please Wait while comments are loading...