ಜೂನ್ ತಿಂಗಳ ಸರಕು ಸೇವಾ ತೆರಿಗೆ (ಜಿಎಸ್ಟಿ) ಗಳಿಕೆ ಕುಸಿತ
ನವದೆಹಲಿ, ಜುಲೈ 02: ಮೋದಿ ಸರ್ಕಾರ್ 2.0ನ ಚೊಚ್ಚಲ ಬಜೆಟ್ ಮಂಡನೆಗೂ ಮುನ್ನ ತೆರಿಗೆ ಸಂಗ್ರಹ ವಿಷಯದಲ್ಲಿ ಕೇಂದ್ರ ಸರ್ಕಾರ ಹಿಂದೆ ಉಳಿದಿರುವ ಸುದ್ದಿ ಬಂದಿದೆ.
ಜೂನ್ ತಿಂಗಳ ಅಂತ್ಯಕ್ಕೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಗಳಿಕೆ 99,939 ಕೋಟಿ ರು ಗೆ ಕುಸಿದಿದೆ. ಅದಕ್ಕೂ ಹಿಂದಿನ ತಿಂಗಳು 1 ಟ್ರಿಲಿಯನ್ ಗಳಿಕೆಯಾಗಿತ್ತು ಎಂದು ವಿತ್ತ ಸಚಿವಾಲಯ ಹೇಳಿದೆ.
ಮೇ ತಿಂಗಳಿನಲ್ಲಿ 1,00,289 ಕೋಟಿ ರು ಗಳಿಸಲಾಗಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 95,610 ಕೋಟಿ ರು ಗಳಿಯಾಗಿತ್ತು. 17ಕ್ಕೂ ಅಧಿಕ ವಿವಿಧ ಪರೋಕ್ಷ ತೆರಿಗೆಗಳ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೆರಿಗೆ ಸಂಗ್ರಹಿಸುತ್ತಿವೆ.

ಒಟ್ಟಾರೆ,2019ರ ಜೂನ್ ತಿಂಗಳಿನಲ್ಲಿ ಜಿಎಸ್ಟಿ ನಿವ್ವಳ ಗಳಿಕೆ 99,939 ಕೋಟಿ ರು ಇದರಲಿ ಕೇಂದ್ರ ಜಿಎಸ್ಟಿ 18,366 ಕೋಟಿ ರು, ರಾಜ್ಯ ಜಿಎಸ್ಟಿ 25,343 ಕೋಟಿ ರು, ಮಿಳಿತ ಜಿಎಸ್ಟಿ 47,772 ಕೋಟಿ (ಆಮದು 21,980 ಕೋಟಿ ರು ಸೇರಿ), ಸೆಸ್ 8,457 ಕೋಟಿ ರು(876 ಕೋಟಿ ಆಮದಿನಿಂದ ಸೇರಿ)
ರಾಜ್ಯದ ಕೊಡುಗೆ : 2018-19ರ ಆರ್ಥಿಕ ವರ್ಷದ ಡೇಟಾ ಗಮನಿಸಿದರೆ ಕರ್ನಾಟಕದಲ್ಲಿ 38,374 ರೂ. ಕೋಟಿಗಳಷ್ಟು ತೆರಿಗೆ ಪಾವತಿಯಾಗಿತ್ತು. ಜುಲೈ 18 ರಿಂದ ಮಾರ್ಚ್ 19ರವರೆಗೂ ಶೇ. 23ರಷ್ಟು ತೆರಿಗೆ ಪಾವತಿಯಲ್ಲಿ ಏರಿಕೆ ಕಂಡಿತ್ತು. ಕೇಂದ್ರ ಸರ್ಕಾರದ ಪ್ರಕಾರ 28,6949 ಜನರು ಜಿಎಸ್ಟಿ ಪಾವತಿಗೆ ಸೇರಿಕೊಂಡಿದ್ದಾರೆ. ಇದು ಹಿಂದೆ ಇದ್ದಂತಹ ಪರೋಕ್ಷ ತೆರಿಗೆಗೆ ಮೂರು ಪಟ್ಟು ಹೆಚ್ಚಾಗಿದೆ ಜಿಎಸ್ಟಿ ಮುಖ್ಯ ಆಯುಕ್ತ ಡಿ.ಪಿ.ನಾಗೇಂದ್ರಕುಮಾರ್ ತಿಳಿಸಿದ್ದಾರೆ.
2018ರ ಜಿಎಸ್ಟಿ ಗಳಿಕೆ ವಿವರ ದೇಶದೆಲ್ಲೆಡೆ ಸಂಗ್ರಹವಾದ ಮೊತ್ತ:
* ಏಪ್ರಿಲ್ ತಿಂಗಳಿನಲ್ಲಿ 1.03 ಟ್ರಿಲಿಯನ್ ರು.
* ಮೇ ತಿಂಗಳಿನಲ್ಲಿ 94,016 ಕೋಟಿ ರು
* ಜೂನ್ ತಿಂಗಳಿನಲ್ಲಿ 95,610 ಕೋಟಿ ರು
* ಜುಲೈ ತಿಂಗಳಿನಲ್ಲಿ 96, 483 ಕೋಟಿ ರು
* ಆಗಸ್ಟ್ ತಿಂಗಳಿನಲ್ಲಿ 93,960 ಕೋಟಿ ರು
* ಸೆಪ್ಟೆಂಬರ್ : 94,442 ಕೋಟಿ ರು
* ಅಕ್ಟೋಬರ್ : 100,710 ಕೋಟಿ ರು
* ನವೆಂಬರ್ : 97,637 ಕೋಟಿ ರು
* ಡಿಸೆಂಬರ್ : 94, 743=6 ಕೋಟಿ ರು












Click it and Unblock the Notifications