ನವೆಂಬರ್ ತಿಂಗಳಿನಲ್ಲಿ ಜಿಎಸ್ಟಿ ಗಳಿಕೆಯಲ್ಲಿ ಭಾರಿ ಕಡಿತ!

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ನವೆಂಬರ್ 28: ನವೆಂಬರ್ ತಿಂಗಳಿನಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಯಿಂದ ಸರ್ಕಾರ ಗಳಿಸಿದ ಆದಾಯದಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. ಸುಮಾರು 11,000 ಕೋಟಿ ರು ಗೂ ಅಧಿಕ ವ್ಯತ್ಯಾಸ ಕಂಡು ಬಂದಿದೆ.

ವಿತ್ತ ಸಚಿವಾಲಯ ನೀಡಿರುವ ಮಾಹಿತಿಯಂತೆ ನವೆಂಬರ್ 27ರ ತನಕ ಗಳಿಸಿರುವ ಜಿಎಸ್ಟಿ ಮೊತ್ತ 83,346 ಕೋಟಿ ರು ಆಗಿದೆ. ಆದರೆ, ಅಕ್ಟೋಬರ್ ತಿಂಗಳಿನಲ್ಲಿ ಆದಾಯ 94,131 ಕೋಟಿ ರು ಗಳಿಕೆಯಾಗಿತ್ತು.

GST collection drops by Rs 11,000 crore in November

ಒಟ್ಟಾರೆ, 95.9 ಲಕ್ಷ ತೆರಿಗೆದಾರರು ಜಿಎಸ್ಟಿಯಡಿಯಲ್ಲಿ ನೋಂದಾಯಿಸಿಕೊಂಡಿದ್ದು, ಈ ಪೈಕಿ 15.1 ಲಕ್ಷ ಮಂದಿ ತ್ರೈಮಾಸಿಕದಂತೆ ರಿಟರ್ನ್ಸ್ ಸಲ್ಲಿಸಬೇಕಿದೆ. ನವೆಂಬರ್ 26ರ ತನಕ ಸುಮಾರು 50.1 ಲಕ್ಷ ರಿಟರ್ನ್ಸ್ ಸಲ್ಲಿಕೆಯಾಗಿದೆ.

ರಾಜ್ಯಗಳಿಗೆ ಪರಿಹಾರ ರೂಪದಲ್ಲಿ ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ 10,806 ಕೋಟಿ ರು, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ 13,695 ಕೋಟಿ ರು ನೀಡಲಾಗಿದೆ.

ಒಟ್ಟಾರೆ ಜಿಎಸ್ಟಿ ಇಲ್ಲಿ ತನಕದ ಗಳಿಕೆ
ಜುಲೈ : 95,000 ಕೋಟಿ ರು
ಆಗಸ್ಟ್ : 91,000 ಕೋಟಿ ರು
ಸೆಪ್ಟೆಂಬರ್ : 92,150 ಕೋಟಿ ರು
ಅಕ್ಟೋಬರ್ : 95,131 ಕೋಟಿ ರು
ನವೆಂಬರ್ : 83,346 ಕೋಟಿ ರು
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The GST collection has dropped by more than Rs 11,000 crore for the month of November. The drop is mainly due to cut in levies on most of the commodities. According to the Finance Ministry figures, the total GST collection till November 27 was Rs 83,346 crore as against the October revenue of Rs 95,131 crore.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ