ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್ ಟಿ ಸೆಸ್ ಏರಿಕೆ: ಹುಂಡೈ ಕಾರುಗಳ ಬೆಲೆ 84 ಸಾವಿರದಷ್ಟು ಹೆಚ್ಚಳ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 15: ಸರಕು ಮತ್ತು ಸೇವೆ ತೆರಿಗೆಯಡಿ ಕಾರುಗಳ ಮೇಲಿನ ಸೆಸ್ ಹೆಚ್ಚಿಸಿದ ಪರಿಣಾಮವಾಗಿ, ಜನಪ್ರಿಯ ಕಾರು ತಯಾರಿಕಾ ಸಂಸ್ಥೆಯಾದ ಹುಂಡೈ, ತನ್ನ ವಿವಿಧ ಮಾದರಿಯ ಕಾರುಗಳ ಬೆಲೆಯಲ್ಲಿ ಸುಮಾರು 84 ಸಾವಿರದಷ್ಟು ಹೆಚ್ಚಿಸಿದೆ ಎಂದು ಬ್ಯುಸಿನೆಸ್ ಸ್ಟಾಂಡರ್ಡ್ ವರದಿ ಮಾಡಿದೆ.

ಈಗಿರುವ ಕಾರುಗಳ ಒಟ್ಟಾರೆ ಮೌಲ್ಯದ ಮೇಲೆ ಶೇ. 2ರಿಂದ 5ರವರೆಗೆ ಈ ಹೆಚ್ಚಳ ಮಾಡಲಾಗಿದ್ದು, ಹೊಸ ದರಗಳು ಸೆಪ್ಟೆಂಬರ್ 11ರಿಂದ ಅನ್ವಯಿಸುತ್ತವೆ ಎಂದು ಕಂಪನಿ ಹೇಳಿದೆ.

ಈ ಹಿನ್ನೆಲೆಯಲ್ಲಿ 1.4 ಲೀಟರ್ ಇಂಜಿನ್ ಸಾಮರ್ಥ್ಯದ ಎಲೈಟ್ ಐ20 ಕಾರಿನ ಬೆಲೆ 12,550 ರು.ಗಳಷ್ಟು (ದೆಹಲಿ ಎಕ್ಸ್ ಷೋ ರೂಂ ಬೆಲೆ) ಹೆಚ್ಚಳವಾಗಲಿದೆ ಎಂದು ಹೇಳಲಾಗಿದೆ.

ಇದಿಷ್ಟೇ ಅಲ್ಲದೆ, ಕಂಪನಿಯಿಂದ ಹೊಸತಾಗಿ ಮಾರುಕಟ್ಟೆಗೆ ಬಂದಿರುವ ವರ್ನಾ ಸೆಡಾನ್ ಕಾರಿನ ಬೆಲೆ 29 ಸಾವಿರ ಹಾಗೂ ಎಸ್ ಯುವಿ ಕ್ರೆಟಾದ ಬೆಲೆ 20,000ದಿಂದ 50,0000ದವರೆಗೆ ಹೆಚ್ಚಾಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಎಲಾಂಟ್ರಾ ಕಾರುಗಳ ಬೆಲೆಯು 50 ಸಾವಿರ ರು.ಗಳಿಂದ 75 ಸಾವಿರ ರು.ಗಳಿಗೆ ಹೆಚ್ಚಾಗಿದ್ದರೆ, ಎಸ್ ಯುವಿ ಮಾದರಿಯಾದ ಟಸ್ಕಾನ್ ಕಾರಿನ ಬೆಲೆ 64 ಸಾವಿರದಿಂದ 84 ಸಾವಿರ ರು.ಗಳಷ್ಟು ಹೆಚ್ಚಾಗಲಿದೆ ಎಂದು ಸಂಸ್ಥೆ ತಿಳಿಸಿದೆ.

English summary
Hyundai Motor India Ltd (HMIL) today increased prices of its various models by up to Rs 84,867, following a hike in GST cess rates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X