ರೆಸ್ಟೋರೆಂಟ್ ಗಳ ಜಿಎಸ್ಟಿ ಇಳಿಕೆ, ತಿಂಡಿ ಪೋತರಿಗೆ ಖುಷಿ!

Posted By:
Subscribe to Oneindia Kannada
ಎಲ್ಲಾ ರೆಸ್ಟೋರೆಂಟ್ ಗಳ ಮೇಲಿನ ಜಿ ಎಸ್ ಟಿ 5% ಇಳಿಕೆ

ಗುವಾಹತಿ, ನವೆಂಬರ್ 10: ಹಣಕಾಸು ಸಚಿವ ಅರುಣ್‌ ಜೈಟ್ಲಿ ನೇತೃತ್ವದಲ್ಲಿ ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ, ಸರಿ ಸುಮಾರು 177ಕ್ಕೂ ಅಧಿಕ ವಸ್ತಗಳ ಮೇಲಿನ ಜಿಎಸ್ಟಿ ತೆರಿಗೆ ಹೊರೆ ಇಳಿಕೆ ಮಾಡಲಾಗಿದೆ. ಇದರಲ್ಲಿ ಪ್ರಮುಖವಾಗಿ ಎಲ್ಲಾ ರೆಸ್ಟೋರೆಂಟ್ ಮೇಲಿನ ಜಿಎಸ್ ಟಿಯನ್ನು ಶೇ5ಕ್ಕೆ ಮಿತಿಗೊಳಿಸಲಾಗಿದೆ.

ಜಿಎಸ್ಟಿ ಇಳಿಕೆ ಯಾವ ವಸ್ತುಗಳ ಬೆಲೆ ಆಯ್ತು ಕಡಿಮೆ

ಗುವಾಹತಿಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ನೇತೃತ್ವದಲ್ಲಿ 23ನೇ ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಪ್ರಮುಖವಾಗಿಸಣ್ಣ ತೆರಿಗೆದಾರರನ್ನು ಗಮನದಲ್ಲಿಟ್ಟುಕೊಂಡು 177ಕ್ಕೂ ಹೆಚ್ಚು ವಸ್ತುಗಳ ಮೇಲಿನ ಜಿಎಸ್‌ಟಿ ದರ ಶೇ.28ರಿಂದ 18ಕ್ಕೆ ಕಡಿತಗೊಳಿಸಲಾಗಿದೆ.

ಗ್ರಾಹಕರೇ ಗಮನಿಸಿ! 177 ವಸ್ತುಗಳ ಮೇಲಿನ ಜಿಎಸ್ಟಿ ಇಳಿಕೆ

ಶೇವಿಂಗ್ ಕ್ರೀಮ್, ಟೂತ್ ಪೇಸ್ಟ್ ,ಶಾಂಪೂ, ಚ್ಯೂಯಿಂಗ್ ಗಮ್, ಚಾಕಲೇಟ್, ಡಿಯೋಡ್ರೆಂಟ್, ವಾಷಿಂಗ್ ಪೌಡರ್, ಡಿಟರ್ಜೆಂಟ್, ಮಾರ್ಬಲ್, ಸೂಟ್‌ಕೇಸ್‌, ವಾಲ್‌ಪೇಪರ್‌, ಪ್ಲೈವುಡ್‌, ಸ್ಟೇಶನರಿ ವಸ್ತುಗಳು, ಸಂಗೀತ ವಾದ್ಯಗಳು ಸೇರಿದಂತೆ 177ಕ್ಕೂ ಹೆಚ್ಚು ವಸ್ತುಗಳ ಜಿಎಸ್‌ಟಿ ತೆರಿಗೆ ದರ ಇಳಿಕೆಯಾಗಿದೆ.

ರೆಸ್ಟೋರೆಂಟ್ ಮೇಲಿನ ತೆರಿಗೆಗೆ ಮಿತಿ

ರೆಸ್ಟೋರೆಂಟ್ ಮೇಲಿನ ತೆರಿಗೆಗೆ ಮಿತಿ

23ನೇ ಜಿಎಸ್ಟಿ ಸಭೆಯ ಪ್ರಮುಖ ನಿರ್ಣಯಗಳಲ್ಲಿ ರೆಸ್ಟೋರೆಂಟ್ ಮೇಲಿನ ತೆರಿಗೆಗೆ ಮಿತಿ ಇಳಿಕೆ ಮಾಡಲಾಗಿದೆ. ಎಲ್ಲಾ ರೆಸ್ಟೋರೆಂಟ್ ಗಳಿನ ಜಿಎಸ್ಟಿಯನ್ನು ಶೇ5ಕ್ಕೆ ಸೀಮಿತ ಮಾಡಲಾಗಿದೆ.ಇದು ಹವಾ ನಿಯಂತ್ರಿತ (ಎಸಿ) ಹಾಗೂ ನಾನ್ ಎಸಿ ರೆಸ್ಟೋರೆಂಟ್ ಗಳೆರಡಕ್ಕೂ ಅನ್ವಯವಾಗುತ್ತದೆ. ಆದರೆ, ಪಂಚತಾರಾ ಹೋಟೆಲ್ ಗಳಿಗೆ ಅನ್ವಯವಾಗುವುದಿಲ್ಲ.

ಶೇ 5 ರಷ್ಟು ತೆರಿಗೆ ಮಿತಿ

ಶೇ 5 ರಷ್ಟು ತೆರಿಗೆ ಮಿತಿ

ಶೇ 5 ರಷ್ಟು ತೆರಿಗೆ ಮಿತಿ ಸ್ಲ್ಯಾಬ್ ನಲ್ಲಿ ಪ್ರತಿ ದಿನಕ್ಕೆ 7,500 ರು ಗೂ ಅಧಿಕ ಶುಲ್ಕ ವಿಧಿಸುವ ಹೋಟೆಲ್ ರೂಮ್ ಗಳಿಗೆ ಶೇ 18ರಷ್ಟು ತೆರಿಗೆ ಮುಂದುವರೆಯಲಿದೆ. ಜತೆಗೆ ಹೊರಾಂಗಣ ಕೆಟರಿಂಗ್ ಸರ್ವೀಸ್ ಮೇಲೂ ಶೇ 18ರಷ್ಟು ತೆರಿಗೆ ವಿಧಿಸಲಾಗಿದೆ. ಆದರೆ, ರೆಸ್ಟೋರೆಂಟ್ ಗಳಿಗೆ Input Tax Credit ಲಾಭವನ್ನು ಸರ್ಕಾರ ನೀಡುತ್ತಿಲ್ಲ. ರೆಸ್ಟೋರೆಂಟ್ ಗಳಿಂದ ಗ್ರಾಹಕರಿಗೆ ಹೊರೆಯಾಗುವುದನ್ನು ಮಾತ್ರ ತಪ್ಪಿಸುತ್ತಿದೆ.

ಶೇ28ರಷ್ಟು ತೆರಿಗೆ

ಶೇ28ರಷ್ಟು ತೆರಿಗೆ ಸ್ಲ್ಯಾಬಿಗೆ 50 ಸಾಮಾಗ್ರಿಗಳನ್ನು ಮಾತ್ರ ಮಿತಿಗೊಳಿಸಲಾಗಿದೆ.

ಶೇ28ರಷ್ಟು ತೆರಿಗೆ 50 ಸಾಮಾಗ್ರಿ

ಶೇ28ರಷ್ಟು ತೆರಿಗೆ 50 ಸಾಮಾಗ್ರಿ

ಕಳೆದ ಬಾರಿ ಸಭೆಯ ನಂತರ 30 ರಿಂದ 40 ಸಾಮಾಗ್ರಿಗಳನ್ನು ಶೇ28ರಿಂದ ತೆಗೆದು ಹಾಕಲಾಗಿತ್ತು. ಇಂದು 177 ಸಾಮಾಗ್ರಿಗಳು ಶೇ28ರಿಂದ ಹೊರ ಬಂದು ಶೇ18ರ ಸ್ಲ್ಯಾಬಿನಲ್ಲಿವೆ. ಈಗ ಶೇ28ರಷ್ಟು ತೆರಿಗೆ 50 ಸಾಮಾಗ್ರಿಗಳಿಗೆ ಮಿತಿಗೊಳಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Big announcements after GST council meet : The GST Council has decided to cut tax rate for restaurants to a flat 5 percent.This was decided at the 23 rd GST Council meeting held in Guwahati today (November 10).

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ