4 ಬ್ಯಾಂಕುಗಳಿಗೆ 10 ಸಾವಿರ ಕೋಟಿ ತುಂಬಿದ ಕೇಂದ್ರ ಸರ್ಕಾರ

ನವದೆಹಲಿ, ಜನವರಿ 01 : ಸರ್ಕಾರಿ ಸ್ವಾಮ್ಯದ ನಾಲ್ಕು ಬ್ಯಾಂಕುಗಳಿಗೆ ಕೇಂದ್ರ ಸರ್ಕಾರವು ಹೆಚ್ಚಿನ ಬಲ ತುಂಬಿದೆ. ಸಾರ್ವಜನಿಕ ವಲಯದ ಯುಕೋ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಸೇರಿದಂತೆ ನಾಲ್ಕು ಬ್ಯಾಂಕುಗಳಿಗೆ 10,882 ಕೋಟಿ ರು ನೀಡಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ.

ಸರಿ ಸುಮಾರು ಆರು ಬ್ಯಾಂಕುಗಳಿಗೆ 28,615 ಕೋಟಿ ರು ಹೂಡಿಕೆ ಮಾಡುವ ಹಿನ್ನೆಲೆಯಲ್ಲಿ ಮೊದಲ ಹಂತವಾಗಿ ನಾಲ್ಕು ಬ್ಯಾಂಕುಗಳ ಖಜಾನೆ ತುಂಬಿಸಲಾಗಿದೆ. ಸಮಾರು 3,074 ಕೋಟಿ ರು ಈಕ್ವಟಿ ಮೂಲಕ ಪಡೆದುಕೊಂಡಿರುವುದಾಗಿ ಯುಕೋ ಬ್ಯಾಂಕ್ ಹೇಳಿದೆ.

ಉಳಿದಂತೆ, ಬ್ಯಾಂಕ್ ಆಫ್ ಮಹಾರಾಷ್ಟ್ರಕ್ಕೆ 4,498 ಕೋಟಿ ರು, ಸಿಂಡಿಕೇಟ್ ಬ್ಯಾಂಕಿಗೆ1,632 ಕೋಟಿ ರು, ಸೆಂಟ್ರಲ್ ಬ್ಯಾಂಕಿಗೆ 1, 678 ಕೋಟಿ ರು ಲಭಿಸಿದೆ.

Government infuses Rs 10,882 crore capital in four PSU banks

ಬ್ಯಾಂಕ್ ಆಫ್ ಇಂಡಿಯಾಕ್ಕೆ 10,086 ಕೋಟಿ ರು,ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಗೆ 5,500 ಕೋಟಿ ರು ಲಭಿಸಿದೆ. ಒಟ್ಟಾರೆ ಏಳು ಸಾರ್ವಜನಿಕ ವಲಯದ ಬ್ಯಾಂಕ್ ಗಳೀಗೆ 28,615 ಕೋಟಿ ರುಗಳನ್ನು ಪುನರ್ ಹೂಡಿಕೆ ಬಾಂಡ್ ಗಳ ಮೂಲಕ ಸರ್ಕಾರ ನೀಡುತ್ತಿದೆ.

2018-19ನೇ ಸಾಲಿನಲ್ಲಿ ಪಿಎಸ್ ಬಿ ಗಳಿಗೆ 65000ಕೋಟಿರು ಘೋಷಿಸಲಾಗಿತ್ತು. ಈ ಪೈಕಿ 23000 ಕೋಟಿ ರು ನೀಡಲಾಗಿದೆ. ಬಾಕಿ ಮೊತ್ತವನ್ನು ಈಗ ಹೂಡಲಾಗುತ್ತಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+