ಏರ್ ಡೆಕ್ಕನ್ ಗೆ 'ಉಡಾನ್' ಅನುಮತಿ, ಶನಿವಾರದಿಂದ ಹಾರಾಟ ಶುರು

Posted By:
Subscribe to Oneindia Kannada

ವಿಮಾನ ಯಾನ ಪ್ರಾಧಿಕಾರದಿಂದ ಏರ್ ಡೆಕ್ಕನ್ ಗೆ ಶುಭ ಸುದ್ದಿ ಸಿಕ್ಕಿದೆ. ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ 'ಉಡಾನ್' ಅಡಿಯಲ್ಲಿ ಪ್ರಾದೇಶಿಕ ಸಂಪರ್ಕ ಸೇವೆ ಒದಗಿಸಲು ಏರ್ ಡೆಕ್ಕನ್ ಗೆ ಅನುಮತಿ ಸಿಕ್ಕಿದೆ.

ಮತ್ತೆ ಆರಂಭವಾಗಲಿದೆ '1 ರುಪಾಯಿ' ಏರ್ ಡೆಕ್ಕನ್ ವಿಮಾನ ಯಾನ

ಈ ಅನುಮತಿ ಪತ್ರವನ್ನು ಏರ್ ಡೆಕ್ಕನ್ ನ ಕ್ಯಾಪಟನ್ ಜಿ.ಆರ್. ಗೋಪಿನಾಥ್ ಅವರಿಗೆ ನಾಗರಿಕ ವಿಮಾನ ಯಾನ ನಿರ್ದೇಶನಾಲಯದ ಅಧಿಕಾರಿಗಳು ಹಸ್ತಾಂತರಿಸಿದ್ದಾರೆ. ಉಡಾನ್ ಯೋಜನೆ ಅಡಿ ಒಂದು ಗಂಟೆ ಅವಧಿಯ ಪ್ರಯಾಣಕ್ಕೆ 2500 ರುಪಾಯಿ ದರಕ್ಕಿಂತ ಹೆಚ್ಚು ವಿಧಿಸುವಂತಿಲ್ಲ.

Gr Gopinath

ಮೊದಲ ಸುತ್ತಿನ ಬಿಡ್ಡಿಂಗ್ ನಲ್ಲಿ ಉಡಾನ್ ಯೋಜನೆ ಅಡಿ ಏರ್ ಡೆಕ್ಕನ್ 34 ಮಾರ್ಗಗಳಲ್ಲಿ ಸಂಚರಿಸುವ ಅವಕಾಶ ಪಡೆದಿದೆ. ಶನಿವಾರ (ಡಿಸೆಂಬರ್ ಇಪ್ಪತ್ಮೂರು) ಏರ್ ಡೆಕ್ಕನ್ ನ ಮೊದಲ ವಿಮಾನ ಯಾನ ಜಲಗಾಂವ್ ಮತ್ತು ಮುಂಬೈ ಮಧ್ಯ ಶುರುವಾಗಿದೆ. ಇದನ್ನು ಹೊರತುಪಡಿಸಿ ನಾಸಿಕ್- ಕೊಲ್ಹಾಪುರ್ ಮಧ್ಯೆ ಕೂಡ ಸೇವೆ ಆರಂಭಿಸುವ ಯೋಜನೆ ಹಾಕಿಕೊಂಡಿದೆ.

ಹತ್ತೊಂಬತ್ತು ಸೀಟಿನ ವಿಮಾನವನ್ನು ಈ ಮಾರ್ಗದ ಹಾರಾಟಕ್ಕೆ ನಿಯೋಜಿಸಲಾಗಿದೆ. ಇಂಥ ಮೂರು ವಿಮಾನಗಳನ್ನು ಸದ್ಯಕ್ಕೆ ಕಂಪೆನಿ ಹೊಂದಿದೆ. ಅಗ್ಗದ ದರದ ವಿಮಾನ ಯಾನ ಸೇವೆ ಒದಗಿಸುವ ಉದ್ದೇಶದಿಂದ ಗೋಪಿನಾಥ್ ಏರ್ ಡೆಕ್ಕನ್ ಸೇವೆ ಆರಂಭಿಸಿದ್ದರು. ಆ ನಂತರ ಅದನ್ನು ವಿಜಯ್ ಮಲ್ಯ ಖರೀದಿಸಿದ್ದರು. ಹಣಕಾಸಿನ ಮುಗ್ಗಟ್ಟಿನ ಕಾರಣಕ್ಕೆ ಈ ಸಂಸ್ಥೆಯ ಸೇವೆ ನಿಂತಿತ್ತು. ಇದೀಗ ಗೋಪಿನಾಥ್ ಮತ್ತೆ ಆರಂಭಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The aviation regulator DGCA has granted flying permit to Captain Gopinath promoted Air Deccan, a move that will enable the airline to operate flights under the regional connectivity scheme 'Udan'.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ