ಗೂಗಲ್ ಶುರುಮಾಡಿದೆ ಹೊಸ ಕೋರ್ಸ್, ನೀವು ಸೇರ್ತಿರಾ?

Written By:
Subscribe to Oneindia Kannada

ನವದೆಹಲಿ, ಜುಲೈ, 12: ಟೆಕ್ ದೈತ್ಯ ಗೂಗಲ್ ಅಂಡ್ರಾಯ್ಡ್ ಸ್ಕಿಲ್ಲಿಂಗ್ ಅಂಡ್ ಡೆವಲಪ್ ಮೆಂಟ್ ಕೋರ್ಸ್ ಅನ್ನು ಭಾರತದಲ್ಲಿ ಆರಂಭ ಮಾಡಿದೆ.

ಭಾರತಕ್ಕೆ ಸಂಬಂಧಿಸಿ ಕೌಶಲ್ಯ ಅಭಿವೃದ್ಧಿಗೆ ಮುಂದಾಗಿರುವ ಮುಂದಿನ ಗೂಗಲ್ ಮುಂದಿನ ಮೂರು ವರ್ಷದ ಅವಧಿಯಲ್ಲಿ ಎರಡು ಮಿಲಿಯನ್ ಜನರಿಗೆ ತರಬೇತಿ ನೀಡುವ ಗುರಿಯನ್ನು ಹೊಂದಿದೆ. ಭಾರತದಲ್ಲಿ ಬಳಕೆಯಾಗುತ್ತಿರುವ ಪೋನ್ ಗಳಲ್ಲಿ ಶೇ. 90 ರಷ್ಟು ಮೊಬೈಲ್ ಗಳು ಗೂಗಲ್ ಸಿಸ್ಟಮ್ ಅನ್ನೇ ಹೊಂದಿವೆ. ಇದೆಲ್ಲದರ ಲಾಭವನ್ನು ಗೂಗಲ್ ಪಡೆದುಕೊಳ್ಳಲು ಮುಂದಾಗಿದೆ.['ಸ್ಟ್ರೀಟ್‌ ವ್ಯೂ'ಗೆ ಅನುಮತಿ, ಉಗ್ರರಿಗೆ ಮಾಹಿತಿ?]

google

ಖಾಸಗಿ ವಿಶ್ವವಿದ್ಯಾಲಯಗಳು ಮತ್ತು ನ್ಯಾಷನಲ್ ಸ್ಕಿಲ್ ಡೆವಲಪ್ ಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ ಸಹ ಕೋರ್ಸ್ ಆರಂಭ ಮಾಡಲಿದೆ. ಜನಸಂಖ್ಯೆ ಆಧಾರದಲ್ಲಿ ಹೇಳುವುದಾದರೆ ಭಾರತ ಅತಿದೊಡ್ಡ ಮೊಬೈಲ್ ಡೆವಲಪರ್ ಆಗಿ ಹೊರ ಹೊಮ್ಮುತ್ತಿದೆ. ಆಂಡ್ರಾಯ್ಡ್ ಡೆವಲಪರ್ ಕೋರ್ಸ್ ಅನೇಕ ಸಂಗತಿಗಳನ್ನು ಒಳಗೊಳ್ಳಲಿದೆ.[ಚಿತ್ರಗಳು : ಗಲ್ಲಿಯಲ್ಲಿ ಕ್ರಿಕೆಟ್ ಆಡಿದ ಗೂಗಲ್ ಸಿಇಒ ಸುಂದರ್ ಪಿಚೈ]

2018 ರ ಅವಧಿಗೆ ಅಮೆರಿಕವನ್ನು ಭಾರತ ಹಿಂದಕ್ಕೆ ಹಾಕಲಿದೆ. ಆ ವೇಳೆಗೆ ಭಾರತದಲ್ಲಿ ಒಟ್ಟು 4 ಮಿಲಿಯನ್ ಅಂಡ್ರಾಯ್ಡ್ ಡೆವಲಪರ್ ಗಳು ಇರಲಿದ್ದಾರೆ ಎಂದು ಗೂಗಲ್ ಪ್ರಾಡೆಕ್ಟ್ ಮ್ಯಾನೇಜ್ ಮೆಂಟ್ ನ ಸೇನ್ ಗುಪ್ತಾ ತಿಳಿಸಿದ್ದಾರೆ.

ಅಲ್ಲದೇ ಈ ಕೋರ್ಸ್ ಗಳೊಂದಿಗೆ ವಿವಿಧ ವಿಶ್ವವಿದ್ಯಾಲಯಗಳು ಹೊಂದಾಣಿಕೆ ಮಾಡಿಕೊಳ್ಳಲಿವೆ. Edureka, ಕೋಯ್ನಿಗ್, ಮಣಿಪಾಲ ಗ್ಲೋಬಲ್, ಸಿಂಪ್ಲಿ ಲರ್ನ್, Udacity and UpGrad ವಿವಿಗಳಲ್ಲಿಯೂ ಕೋರ್ಸ್ ಲಭ್ಯವಾಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Tech giant Google launched Android Skilling and Certification programme in India, aiming to train two million developers in next three years. Android dominates Indian market, with over 90% phones sold in the country powered by the Google's operating system.
Please Wait while comments are loading...