ಗೂಗಲ್ ತೇಝ್ -ಮೊಬೈಲ್ ವ್ಯಾಲೆಟ್ ಏನು? ಎತ್ತ?

Posted By:
Subscribe to Oneindia Kannada

ಬೆಂಗಳೂರು, ಸೆ.18: ಗೂಗಲ್ ಇಂಡಿಯಾ 'ತೇಝ್' ಎಂಬ ಹೆಸರಿನಲ್ಲಿ ತನ್ನದೇ ಆದ ಮೊಬೈಲ್ ಪಾವತಿ ಅಪ್ಲಿಕೇಷನ್ ವೊಂದನ್ನು ಸೋಮವಾರ ಮಾರುಕಟ್ಟೆಗೆ ಪರಿಚಯಿಸಿದೆ. ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಈ ಆಪ್ ಲಭ್ಯವಿದೆ.

ಸರ್ಚ್ ಇಂಜಿನ್ ದಿಗ್ಗಜ ಗೂಗಲ್ ಈ ಮೂಲಕ ಮೊಬೈಲ್ ಪಾವತಿ(ಆನ್ ಲೈನ್ ಹಾಗೂ ಆಫ್ ಲೈನ್) ಕ್ಷೇತ್ರಕ್ಕೆ ಅಧಿಕೃತವಾಗಿ ಕಾಲಿರಿಸಿದೆ.

BHIM ಆಪ್ ಮಾದರಿಯಲ್ಲೇ ಹಣ ರವಾನೆ, ತಮ್ಮ ಬ್ಯಾಂಕ್ ಖಾತೆಗಳಲ್ಲಿ ನೇರವಾಗಿ ಹಣಪಾವತಿ ಸ್ವೀಕಾರ ಮತ್ತು ಬಿಲ್‌ಗಳ ಪಾವತಿ ಮಾಡಬಹುದಾಗಿದೆ. ಈ ಅಪ್ಲಿಕೇಷನ್ ತಮ್ಮ ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡಿಕೊಂಡು ಸುಲಭವಾಗಿ ಡೆಬಿಟ್/ಕ್ರೆಡಿಟ್ ಕಾರ್ಡ್ ಮೂಲಕ ವ್ಯವಹಾರ ಸಾಧಿಸಬಹುದಾಗಿದೆ.

ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ)ದ ಯೂನಿಫೈಡ್ ಪೇಮೆಂಟ್ ಇಂಟರ್‌ಫೇಸ್(ಯುಪಿಐ)ನ್ನು ಬಳಸುವ ತೇಝ್ ಆಪ್ ಮೂಲಕ ಮಾಡುವ ಹಣ ವರ್ಗಾವಣೆಗಳು ಸರಳ ಮತ್ತು ಸುರಕ್ಷಿತವಾಗಿವೆ ಎಂದು ಗೂಗಲ್ ಘೋಷಿಸಿದೆ.

ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ನೇರವಾಗಿ ವರ್ಗಾಯಿಸಬಹುದು. ಯುಪಿಐನಲ್ಲಿ ನಿಮ್ಮ ಖಾತೆಯನ್ನು ತೇಝ್‌ಗೆ ಲಿಂಕ್ ಮಾಡಿಕೊಂಡರೆ ಸಾಕು, ಬ್ಯಾಂಕಿನಿಂದ ಬ್ಯಾಂಕಿಗೆ ಹಣ ವರ್ಗಾವಣೆ ತಕ್ಷಣ ಸಾಧ್ಯವಾಗುತ್ತದೆ. ಇನ್ನಷ್ಟು ಮಾಹಿತಿಗೆ ಮುಂದೆ ಓದಿ..

ಆನ್ ಲೈನ್ ಹಾಗೂ ಆಫ್ ಲೈನ್

ಆನ್ ಲೈನ್ ಹಾಗೂ ಆಫ್ ಲೈನ್

ಸರ್ಚ್ ಇಂಜಿನ್ ದಿಗ್ಗಜ ಗೂಗಲ್ -ತೇಝ್ (tez) ಅಪ್ಲಿಕೇಷನ್ ಮೂಲಕ ಮೊಬೈಲ್ ಪಾವತಿ ಕ್ಷೇತ್ರಕ್ಕೆ ಅಧಿಕೃತವಾಗಿ ಕಾಲಿರಿಸಿದೆ. ಆನ್ ಲೈನ್ ಹಾಗೂ ಆಫ್ ಲೈನ್ ಎರಡಲ್ಲೂ ಈ ಅಪ್ಲಿಕೇಷನ್ ಬಳಕೆ ಸುಲಭ ಸಾಧ್ಯವಾಗಿದೆ. ಯೂನಿಫೈಡ್ ಪೇಮೆಂಟ್ ಇಂಟರ್‌ಫೇಸ್(ಯುಪಿಐ)ನ್ನು ಬಳಸುವ ತೇಝ್ ಆಪ್ ಬಳಕೆ, BHIM ಆಪ್ ಮಾದರಿಯಲ್ಲೇ ಇದೆ.

ಹಲವು ಭಾಷೆಗಳಲ್ಲಿ ತೇಝ್ ಲಭ್ಯ

ಹಲವು ಭಾಷೆಗಳಲ್ಲಿ ತೇಝ್ ಲಭ್ಯ

ಇಂಗ್ಲೀಷ್, ಹಿಂದಿ, ಬಂಗಾಳಿ, ಗುಜರಾತಿ, ಕನ್ನಡ, ತಮಿಳು, ಮರಾಠಿ ಮತ್ತು ತೆಲುಗು ಭಾಷೆಗಳನ್ನು ತೇಝ್ ಬೆಂಬಲಿಸುತ್ತದೆ.ತೇಝ್‌ ನ ಕ್ಯಾಷ್ ಮೋಡ್ ಬಳಸುವ ಮೂಲಕ ಯಾರಿಂದಲೇ ಆದರೂ ಹಣವನ್ನು ತಕ್ಷಣ ಸ್ವೀಕರಿಸಬಹುದು ಅಥವಾ ಅವರಿಗೆ ರವಾನಿಸಬಹುದು. ಇದಕ್ಕಾಗಿ ನಿಮ್ಮ ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ವಿವರಗಳೂ ಬೇಕಿಲ್ಲ.

ತೇಝ್ ಭದ್ರತೆ

ತೇಝ್ ಭದ್ರತೆ

ಗೂಗಲ್‌ನ ಬಹು ಸ್ತರಗಳ ಭದ್ರತೆ ಮತ್ತು ತೇಝ್ ಶೀಲ್ಡ್‌ನ 24x 7 ರಕ್ಷಣೆಯಿರು ವುದರಿಂದ ಅತ್ಯಂತ ಸುರಕ್ಷಿತವಾಗಿದೆ. ಬ್ಯಾಂಕ್ ವಿವರ, ಮೊಬೈಲ್ ಸಂಖ್ಯೆ ಹಂಚಿಕೊಳ್ಳದೆಯೇ ವ್ಯವಹಾರ ಸಾಧ್ಯ. ಯುಪಿಐ ಜತೆ ಲಿಂಕ್ ಮಾಡಿಕೊಳ್ಳುವುದು, ಬ್ಯಾಂಕ್ ಖಾತೆ ಜತೆ ಒಟಿಪಿ ಬಳಸಿ ಲಿಂಕ್ ಆಗಿರುವುದರಿಂದ ವ್ಯವಹಾರ ಭದ್ರವಾಗಿರುತ್ತದೆ ಎಂದು ಗೂಗಲ್ ಹೇಳಿಕೊಂಡಿದೆ.

ಆಕರ್ಷಕ ಬಹುಮಾನ ಗೆಲ್ಲಿ

ಆಕರ್ಷಕ ಬಹುಮಾನ ಗೆಲ್ಲಿ

ಆ್ಯಪ್‌ ನಲ್ಲಿ ತೇಝ್ ಸ್ಕ್ರಾಚ್ ಕಾರ್ಡ್‌ಗಳ ಮೂಲಕ ಬಳಕೆದಾರ ಪ್ರತಿ ವಹಿವಾಟಿನ ಮೇಲೆ ಆಕರ್ಷಕ ಬಹುಮಾನಗಳನ್ನು ಗೆಲ್ಲಬಹುದು. ತೇಝ್‌ ನ 'ಲಕ್ಕಿ ಸಂಡೇ' ಸ್ಪರ್ಧೆಯಲ್ಲಿ ಆ ವಾರದ ಎಲ್ಲ ವಹಿವಾಟುಗಳು ಸೇರುತ್ತವೆ ಮತ್ತು ಅದೃಷ್ಟಶಾಲಿ ಗ್ರಾಹಕರು ಪ್ರತಿ ವಾರ ಒಂದು ಲಕ್ಷ ರೂ.ಬಹುಮಾನ ಗೆಲ್ಲುವ ಅವಕಾಶ ಇರುತ್ತದೆ.

ಇದು ಬರೀ ಮೊಬೈಲ್ ವ್ಯಾಲೆಟ್ ಅಲ್ಲ

ಇದು ಬರೀ ಮೊಬೈಲ್ ವ್ಯಾಲೆಟ್ ಅಲ್ಲ

ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ನೇರವಾಗಿ ವರ್ಗಾಯಿಸಬಹುದು. ಯುಪಿಐನಲ್ಲಿ ನಿಮ್ಮ ಖಾತೆಯನ್ನು ತೇಝ್‌ಗೆ ಲಿಂಕ್ ಮಾಡಿಕೊಂಡರೆ ಸಾಕು, ಬ್ಯಾಂಕಿನಿಂದ ಬ್ಯಾಂಕಿಗೆ ಹಣ ವರ್ಗಾವಣೆ ತಕ್ಷಣ ಸಾಧ್ಯವಾಗುತ್ತದೆ. ಆಕ್ಸಿಸ್, ಎಚ್ ಡಿ ಎಫ್ ಸಿ, ಐಸಿಐಸಿಐ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಲ್ಲದೆ ಯುಪಿಐ ಬೆಂಬಲಿತ ಎಲ್ಲಾ ಮೊಬಿ ಬ್ಯಾಂಕಿಂಗ್ ಸೇವೆ ಲಭ್ಯ

ಎಲ್ಲೆಲ್ಲಿ ಬಳಕೆ ಸಾಧ್ಯ

ಎಲ್ಲೆಲ್ಲಿ ಬಳಕೆ ಸಾಧ್ಯ

ನಿಮ್ಮ ಡೆಬಿಟ್/ ಕ್ರೆಡಿಟ್ ಕಾರ್ಡ್ ಎಲ್ಲೆಲ್ಲಿ ಬಳಸಬಹುದೋ ಅಲ್ಲೆಲ್ಲ ತೇಝ್ ಬಳಕೆಯೂ ಸಾಧ್ಯ.ರೆಡ್ ಬಸ್, ಡೋಮಿನೋಸ್, ಜೆಟ್ ಏರ್ ವೇಸ್ ಹೀಗೆ ಎಲ್ಲೆಡೆ ಡಿಜಿಟಲ್ ಪಾವತಿ ಸಾಧ್ಯವಿದೆ. ತರಕಾರಿ ಮಾರುಕಟ್ಟೆ, ದಿನಸಿ, ಹಾಲಿನ ಡೇರಿ ಸೇರಿದಂತೆ ದೈನಂದಿನ ವ್ಯವಹಾರಗಳಲ್ಲಿ ಕ್ಯಾಶ್ ಲೆಸ್ ವಹಿವಾಟು ನಡೆಸಲು ತೇಝ್ ಬಳಸಬಹುದು.

ಕನಿಷ್ಠ ವ್ಯವಹಾರ ಮೊತ್ತ ಎಷ್ಟು?

ಕನಿಷ್ಠ ವ್ಯವಹಾರ ಮೊತ್ತ ಎಷ್ಟು?

ತೇಝ್ ಆಪ್ ಬಳಸಿ ಕನಿಷ್ಟ 50 ರು ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ವ್ಯವಹಾರ ಪ್ರತಿ ಬಳಕೆದಾರನಿಗೆ ಸಾಧ್ಯವಿದೆ. ವ್ಯಾಪಾರಿಗಳಿಗೆ(ಬ್ಯಾಂಕಿನಲ್ಲಿ ಚಾಲ್ತಿ ಖಾತೆ ಹೊಂದಿರುವವರು) ಪ್ರತಿ ತಿಂಗಳಿಗೆ 50,000 ರು ಮಿತಿಯನ್ನು ವಿಧಿಸಲಾಗಿದೆ ಅದರೆ, ಯಾವುದೇ ಹೆಚ್ಚಿನ ಶುಲ್ಕ ಇರುವುದಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Google India on Monday launched its UPI-backed payments application, Tez (means fast in Hindi), which will allow you to securely pay for goods and services both online and offline, and also make person-to-person transactions.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ