ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏ. 19ರಂದು ದೇಶದ ವಿವಿಧ ನಗರಗಳಲ್ಲಿ ಚಿನ್ನದ ದರ ಏರಿಕೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 19: ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಸೋಮವಾರ ಮತ್ತೆ ತುಟ್ಟಿಯಾಗಿದೆ. ಶುಭ ಸಮಾರಂಭಗಳು ಸಾಲು ಸಾಲಾಗಿ ನಡೆಯಲಿರುವ ಈ ತಿಂಗಳಲ್ಲಿ ಬಂಗಾರದ ದರ ಏರಿಕೆ ಗ್ರಾಹಕರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಎಂಸಿಎಕ್ಸ್ ಗೋಲ್ಡ್ ಜೂನ್ ಶೇ 0.07ರ ಏರಿಕೆಯೊಂದಿಗೆ 10 ಗ್ರಾಂಗೆ 47,385 ರೂಪಾಯಿಗೆ ತಲುಪಿದೆ. ಮೇ ಬೆಳ್ಳಿ ಫ್ಯೂಚರ್ ಶೇ 0.63ರ ಕುಸಿತದೊಂದಿಗೆ ಒಂದು ಕೆಜಿಗೆ 68,250ಕ್ಕೆ ಇಳಿಕೆಯಾಗಿದೆ.

ದೇಶದಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರ ಸರಾಸರಿ 4,502 ರೂಪಾಯಿಗೆ ಏರಿಕೆಯಾಗಿದೆ. 24 ಕ್ಯಾರಟ್‌ನ ಪ್ರತಿ ಒಂದು ಗ್ರಾಂ ಚಿನ್ನದ ದರ 4,602 ರೂಪಾಯಿ ಇದೆ. ದೇಶದಲ್ಲಿ ಚಿನ್ನದ ಸರಾಸರಿ ದರ ಪ್ರತಿ 10 ಗ್ರಾಂಗೆ 10 ರೂಪಾಯಿ ಏರಿಕೆಯೊಂದಿಗೆ 45,020 ರೂಪಾಯಿಗೆ ಹೆಚ್ಚಳ ಕಂಡಿದೆ. 24 ಕ್ಯಾರಟ್‌ನ ಚಿನ್ನದ ದರ ಕೂಡ 10 ರೂ. ತುಟ್ಟಿಯಾಗಿದ್ದು, ಪ್ರತಿ 10 ಗ್ರಾಂಗೆ 46,020 ರೂಪಾಯಿ ಇದೆ.

ಚಿನ್ನದ ಪ್ರಿಯರಿಗೆ ಈ ತಿಂಗಳಲ್ಲಿ ಸಿಗಲಿದೆ ಸುವರ್ಣ ಹೂಡಿಕೆ ಅವಕಾಶ !ಚಿನ್ನದ ಪ್ರಿಯರಿಗೆ ಈ ತಿಂಗಳಲ್ಲಿ ಸಿಗಲಿದೆ ಸುವರ್ಣ ಹೂಡಿಕೆ ಅವಕಾಶ !

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ವಹಿವಾಟು ಬದಲಾದಂತೆ ಭಾರತದಲ್ಲಿನ ಚಿನ್ನದ ದರದಲ್ಲಿಯೂ ಬದಲಾವಣೆಗಳಾಗಲಿವೆ. ಹೀಗಾಗಿ ದಿನದ ಚಿನ್ನ-ಬೆಳ್ಳಿ ದರದಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇದೆ.

ದೆಹಲಿಯಲ್ಲಿ ಬೆಲೆ ಹೆಚ್ಚಳ

ದೆಹಲಿಯಲ್ಲಿ ಬೆಲೆ ಹೆಚ್ಚಳ

ರಾಜಧಾನಿ ದೆಹಲಿಯಲ್ಲಿ ಕೂಡ ಬಂಗಾರದ ಬೆಲೆಯಲ್ಲಿ ಅಲ್ಪ ಏರಿಕೆ ಕಂಡಿದೆ. 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 10 ರೂಪಾಯಿ ಹೆಚ್ಚಳಯೊಂದಿಗೆ 46,280 ರೂಪಾಯಿಗೆ ತಲುಪಿದೆ. 24 ಕ್ಯಾರಟ್ ಚಿನ್ನ ಬೆಲೆ ಪ್ರತಿ 10 ಗ್ರಾಂ 10 ರೂ ಏರಿಕೆಯಾಗಿದ್ದು, 50,430 ರೂಪಾಯಿಗೆ ತಲುಪಿದೆ.

ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ

ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ

ಬೆಂಗಳೂರಿನಲ್ಲಿ ಹಳದಿ ಲೋಹದ ದರ ಮತ್ತಷ್ಟು ದುಬಾರಿಯಾಗಿದೆ. 22 ಕ್ಯಾರಟ್ ಚಿನ್ನದ ಪ್ರತಿ ಹತ್ತು ಗ್ರಾಂ ಚಿನ್ನದ ದರ 90 ರೂಪಾಯಿ ಏರಿಕೆಯಾಗಿದ್ದು, 44,250 ರೂಪಾಯಿ ತಲುಪಿದೆ. 24 ಕ್ಯಾರಟ್‌ನ 10 ಗ್ರಾಂ ಚಿನ್ನದ ದರ 100 ರೂ ಏರಿಕೆಯೊಂದಿಗೆ 48,270 ರೂಪಾಯಿಗೆ ಹೆಚ್ಚಳ ಕಂಡಿದೆ.

'ಚಿನ್ನ' ಖರೀದಿಸುವವರಿಗೆ ಬಂಗಾರದಂಥ ಸುದ್ದಿ ಕೊಟ್ಟ ರಾಜ್ಯ ಬಿಜೆಪಿ ಸರ್ಕಾರ!'ಚಿನ್ನ' ಖರೀದಿಸುವವರಿಗೆ ಬಂಗಾರದಂಥ ಸುದ್ದಿ ಕೊಟ್ಟ ರಾಜ್ಯ ಬಿಜೆಪಿ ಸರ್ಕಾರ!

ಚೆನ್ನೈನಲ್ಲಿ ದರ ಏರಿಕೆ

ಚೆನ್ನೈನಲ್ಲಿ ದರ ಏರಿಕೆ

ಚೆನ್ನೈ ನಗರದಲ್ಲಿ ಬಂಗಾರದ ದರ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿದೆ. 22 ಕ್ಯಾರಟ್‌ನ ಪ್ರತಿ 10 ಗ್ರಾಂಗೆ 10 ರೂ ಏರಿಕೆಯಾಗಿದ್ದು, 44,540 ರೂ.ಗೆ ತಲುಪಿದೆ. ಹಾಗೆಯೇ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂ 10 ರೂ. ಹೆಚ್ಚಿದ್ದು, 48,580 ರೂಪಾಯಿಗೆ ಮಾರಾಟವಾಗುತ್ತಿದೆ.

ಮುಂಬೈನಲ್ಲಿ ಚಿನ್ನದ ಬೆಲೆ ಹೆಚ್ಚಳ

ಮುಂಬೈನಲ್ಲಿ ಚಿನ್ನದ ಬೆಲೆ ಹೆಚ್ಚಳ

ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 45,020 ರೂಪಾಯಿಗೆ ಏರಿಕೆಯಾಗಿದೆ. 24 ಕ್ಯಾರಟ್ ಚಿನ್ನ 46,020 ರೂ. ದರಕ್ಕೆ ಮಾರಾಟವಾಗುತ್ತಿದೆ. ಕೇರಳದಲ್ಲಿ ಹಳದಿ ಲೋಹದ ದರ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 44,250 ರೂ ಮತ್ತು 24 ಕ್ಯಾರಟ್ ಹಳದಿ ಲೋಹ 48,270 ರೂಪಾಯಿಗೆ ಮಾರಾಟವಾಗುತ್ತಿದೆ. ಕೋಲ್ಕತಾದಲ್ಲಿ 22 ಕ್ಯಾರಟ್ ಚಿನ್ನಕ್ಕೆ 46,320 ರೂಪಾಯಿ ಮತ್ತು 24 ಕ್ಯಾರಟ್ ಚಿನ್ನಕ್ಕೆ 49,020 ರೂ ದರವಿದೆ.

ದೇಶದಲ್ಲಿ ಬೆಳ್ಳಿ ಬೆಲೆ

ದೇಶದಲ್ಲಿ ಬೆಳ್ಳಿ ಬೆಲೆ

ದೇಶದಲ್ಲಿ ಬೆಳ್ಳಿ ದರ ಬಹುತೇಕ ನಗರಗಳಲ್ಲಿ ಇಳಿಕೆಯಾಗಿದೆ. ದೇಶದಲ್ಲಿ ಸರಾಸರಿ ಬೆಳ್ಳಿ ದರ ಒಂದು ಕೆಜಿಗೆ 68,600 ರೂಪಾಯಿ ಇದೆ. ಬೆಂಗಳೂರಿನಲ್ಲಿ ಸಹ ಬೆಳ್ಳಿ ಬೆಲೆಯಲ್ಲಿ ಪ್ರತಿ ಕೆಜಿಗೆ 68,600 ರೂಪಾಯಿಯಲ್ಲಿ ಸ್ಥಿರವಾಗಿದೆ. ಚೆನ್ನೈನಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 73,700 ರೂಪಾಯಿ ಇದೆ. ಮುಂಬೈನಲ್ಲಿ ಬೆಳ್ಳಿ ದರ ಪ್ರತಿ ಕೆಜಿಗೆ 68,600 ರೂಪಾಯಿ ಇದೆ.

* ಚಿನ್ನ ಮತ್ತು ಬೆಳ್ಳಿ ಬೆಲೆಯು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರ ಬದಲಾವಣೆ ಮತ್ತು ಸ್ಥಳೀಯ ತೆರಿಗೆ ನೀತಿಗಳಿಗೆ ಅನುಗುಣವಾಗಿ ಬದಲಾಗುತ್ತದೆ. ಈ ಮಾಹಿತಿ ಬೆಳಿಗ್ಗೆ 10 ಗಂಟೆಯವರೆಗಿನ ಮಾರುಕಟ್ಟೆ ದರ ಬದಲಾವಣೆಯನ್ನು ಆಧರಿಸಿದೆ.

English summary
Gold and silver prices hikes on April 19 in some major cities across India. Here is the price details of major cities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X