ಏ. 16ರಂದು ದೇಶದ ವಿವಿಧ ನಗರಗಳಲ್ಲಿ ಚಿನ್ನದ ದರ ಎಷ್ಟಿದೆ?

ಬೆಂಗಳೂರು, ಏಪ್ರಿಲ್ 16: ದೇಶದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಮತ್ತೆ ತುಟ್ಟಿಯಾಗಿದೆ. ಕೆಲವು ನಗರಗಳಲ್ಲಿ ಇಳಿಕೆಯಾಗಿದೆ. ಸತತ ಎರಡನೆಯ ದಿನ ಹಳದಿ ಲೋಹದ ದರದಲ್ಲಿ ಏರಿಕೆಯಾಗಿದೆ. ಎಂಸಿಎಕ್ಸ್ ಗೋಲ್ಡ್ ಜೂನ್ ಶೇ 0.18ರ ಕುಸಿತದೊಂದಿಗೆ 46,900 ರಿಂದ 47,092 ರೂಪಾಯಿಗೆ ತಲುಪಿದೆ.

ಗುರುವಾರ ಎಂಸಿಎಕ್ಸ್‌ನಲ್ಲಿ ಜೂನ್ ಫ್ಯೂಚರ್ ಚಿನ್ನದ ದರ 47,175 ರೂಪಾಯಿಯೊಂದಿಗೆ ಅಂತ್ಯಗೊಂಡಿತ್ತು. ಶುಕ್ರವಾರ 47,099 ರೂಪಾಯಿಯೊಂದಿಗೆ ತೆರೆದುಕೊಂಡಿತ್ತು. ಬೆಳ್ಳಿ ದರ ಶೇ 0.19ರ ಇಳಿಕೆಯೊಂದಿಗೆ ಪ್ರತಿ ಕೆಜಿಗೆ 68,407 ರೂಪಾಯಿಯಲ್ಲಿ ಮಾರಾಟವಾಗುತ್ತಿದೆ. ದೇಶದಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರ ಸರಾಸರಿ 4,485 ರೂಪಾಯಿಗೆ ಇಳಿಕೆಯಾಗಿದೆ. 24 ಕ್ಯಾರಟ್‌ನ ಪ್ರತಿ ಒಂದು ಗ್ರಾಂ ಚಿನ್ನದ ದರ 4,585 ರೂಪಾಯಿ ಇದೆ. ದೇಶದಲ್ಲಿ ಚಿನ್ನದ ಸರಾಸರಿ ದರ ಪ್ರತಿ 10 ಗ್ರಾಂಗೆ 10 ರೂಪಾಯಿ ಇಳಿಕೆಯೊಂದಿಗೆ 44,850 ರೂಪಾಯಿಗೆ ಕುಸಿದಿದೆ. 24 ಕ್ಯಾರಟ್‌ನ ಚಿನ್ನದ ದರ ಕೂಡ 10 ರೂ. ಕುಸಿದಿದ್ದು, ಪ್ರತಿ 10 ಗ್ರಾಂಗೆ 45,850 ರೂಪಾಯಿ ಇದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ವಹಿವಾಟು ಬದಲಾದಂತೆ ಭಾರತದಲ್ಲಿನ ಚಿನ್ನದ ದರದಲ್ಲಿಯೂ ಬದಲಾವಣೆಗಳಾಗಲಿವೆ. ಹೀಗಾಗಿ ದಿನದ ಚಿನ್ನ-ಬೆಳ್ಳಿ ದರದಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇದೆ.

ದೆಹಲಿಯಲ್ಲಿ ಬೆಲೆ ಹೆಚ್ಚಳ

ದೆಹಲಿಯಲ್ಲಿ ಬೆಲೆ ಹೆಚ್ಚಳ

ರಾಜಧಾನಿ ದೆಹಲಿಯಲ್ಲಿ ಬಂಗಾರದ ಬೆಲೆಯಲ್ಲಿ ಅಲ್ಪ ಕುಸಿತಕಂಡಿದೆ. 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 10 ರೂಪಾಯಿ ಇಳಿಕೆಯೊಂದಿಗೆ 45,850 ರೂಪಾಯಿಗೆ ತಲುಪಿದೆ. 24 ಕ್ಯಾರಟ್ ಚಿನ್ನ ಬೆಲೆ ಪ್ರತಿ 10 ಗ್ರಾಂ 10 ರೂ ಕುಸಿದಿದ್ದು, 50,020 ರೂಪಾಯಿಗೆ ತಲುಪಿದೆ.

ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ

ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ

ಬೆಂಗಳೂರಿನಲ್ಲಿ ಹಳದಿ ಲೋಹದ ದರ ತುಟ್ಟಿಯಾಗಿದೆ. 22 ಕ್ಯಾರಟ್ ಚಿನ್ನದ ಪ್ರತಿ ಹತ್ತು ಗ್ರಾಂ ಚಿನ್ನದ ದರ 300 ರೂಪಾಯಿ ಏರಿಕೆಯಾಗಿದ್ದು, 44,000 ರೂಪಾಯಿ ತಲುಪಿದೆ. 24 ಕ್ಯಾರಟ್‌ನ 10 ಗ್ರಾಂ ಚಿನ್ನದ ದರ 330 ರೂ ಏರಿಕೆಯೊಂದಿಗೆ 48,000 ರೂಪಾಯಿಗೆ ಹೆಚ್ಚಳ ಕಂಡಿದೆ.

ಚೆನ್ನೈನಲ್ಲಿ ದರ ಇಳಿಕೆ

ಚೆನ್ನೈನಲ್ಲಿ ದರ ಇಳಿಕೆ

ಚೆನ್ನೈ ನಗರದಲ್ಲಿ ಬಂಗಾರದ ದರ ಅಲ್ಪ ಪ್ರಮಾಣದಲ್ಲಿ ತಗ್ಗಿದೆ. 22 ಕ್ಯಾರಟ್‌ನ ಪ್ರತಿ 10 ಗ್ರಾಂಗೆ 10 ರೂ ತಗ್ಗಿದ್ದು, 43,620 ರೂ.ಗೆ ತಲುಪಿದೆ. ಹಾಗೆಯೇ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂ 10 ರೂ. ಇಳಿಕೆಯಾಗಿದ್ದು, 47,590 ರೂಪಾಯಿಗೆ ಮಾರಾಟವಾಗುತ್ತಿದೆ.

ಮುಂಬೈನಲ್ಲಿ ಚಿನ್ನದ ಬೆಲೆ ಹೆಚ್ಚಳ

ಮುಂಬೈನಲ್ಲಿ ಚಿನ್ನದ ಬೆಲೆ ಹೆಚ್ಚಳ

ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 44,850 ರೂಪಾಯಿಗೆ ಇಳಿಕೆಯಾಗಿದೆ. 24 ಕ್ಯಾರಟ್ ಚಿನ್ನ 45,850 ರೂ. ದರಕ್ಕೆ ಮಾರಾಟವಾಗುತ್ತಿದೆ. ಕೇರಳದಲ್ಲಿ ಹಳದಿ ಲೋಹದ ದರ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 44,000 ರೂ ಮತ್ತು 24 ಕ್ಯಾರಟ್ ಹಳದಿ ಲೋಹ 48,000 ರೂಪಾಯಿಗೆ ಮಾರಾಟವಾಗುತ್ತಿದೆ. ಕೋಲ್ಕತಾದಲ್ಲಿ 22 ಕ್ಯಾರಟ್ ಚಿನ್ನಕ್ಕೆ 46,090 ರೂಪಾಯಿ ಮತ್ತು 24 ಕ್ಯಾರಟ್ ಚಿನ್ನಕ್ಕೆ 48,800 ರೂ ದರವಿದೆ.

ದೇಶದಲ್ಲಿ ಬೆಳ್ಳಿ ಬೆಲೆ

ದೇಶದಲ್ಲಿ ಬೆಳ್ಳಿ ಬೆಲೆ

ದೇಶದಲ್ಲಿ ಬೆಳ್ಳಿ ದರ ಬಹುತೇಕ ನಗರಗಳಲ್ಲಿ ಏರಿಕೆಯಾಗಿದೆ. ದೇಶದಲ್ಲಿ ಬೆಳ್ಳಿ ದರ ಸರಾಸರಿ 700 ರೂಪಾಯಿ ಏರಿಕೆಯೊಂದಿಗೆ 68,500 ರೂಪಾಯಿಗೆ ತಲುಪಿದೆ. ಬೆಂಗಳೂರಿನಲ್ಲಿ ಸಹ ಬೆಳ್ಳಿ ಬೆಲೆಯಲ್ಲಿ ಪ್ರತಿ ಕೆಜಿಗೆ 700 ರೂಪಾಯಿಗೆ ಹೆಚ್ಚಳದೊಂದಿಗೆ 68,500 ರೂಪಾಯಿಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಬೆಳ್ಳಿ ಬೆಲೆ ಸ್ಥಿರವಾಗಿದ್ದು, ಒಂದು ಕೆಜಿಗೆ 71,900 ರೂಪಾಯಿ ಇದೆ. ಮುಂಬೈನಲ್ಲಿ ಬೆಳ್ಳಿ ದರ ಪ್ರತಿ ಕೆಜಿಗೆ 68,500 ರೂಪಾಯಿ ಇದೆ.

* ಚಿನ್ನ ಮತ್ತು ಬೆಳ್ಳಿ ಬೆಲೆಯು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರ ಬದಲಾವಣೆ ಮತ್ತು ಸ್ಥಳೀಯ ತೆರಿಗೆ ನೀತಿಗಳಿಗೆ ಅನುಗುಣವಾಗಿ ಬದಲಾಗುತ್ತದೆ. ಈ ಮಾಹಿತಿ ಬೆಳಿಗ್ಗೆ 10 ಗಂಟೆಯವರೆಗಿನ ಮಾರುಕಟ್ಟೆ ದರ ಬದಲಾವಣೆಯನ್ನು ಆಧರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+