Gold Price: ಚಿನ್ನ-ಬೆಳ್ಳಿ ದರದಲ್ಲಿ ಮತ್ತೆ ಹಾವು-ಏಣಿ ಆಟ: ಒಂದೇ ದಿನದಲ್ಲಿ ದಾಖಲೆಯ ಏರಿಕೆ ಕಂಡ ಬಂಗಾರ
ಬೆಂಗಳೂರು: ಜಾಗತಿಕವಾಗಿ ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿರುವ ಚಿನ್ನ-ಬೆಳ್ಳಿ ದರದಲ್ಲಿ ಹಾವು ಏಣಿ ಆಟ ಮುಂದುವರಿದಿದೆ. ಕಳೆದ ಎಂಟು ದಿನಗಳಿಂದ ನಿರಂತರವಾಗಿ ಇಳಿಕೆ ಮತ್ತು ಆಗಾಗ ಏರಿಕೆ ಕಾಣುತ್ತಿರುವ ಚಿನ್ನ-ಬೆಳ್ಳಿ ಎರಡು ಲೋಹಗಳ ದರದಲ್ಲಿ ಇಂದು ಶನಿವಾರ ಫೆಬ್ರವರಿ 07ರಂದು ಮತ್ತೆ ಹೆಚ್ಚಾಗಿದೆ. ಅದರಲ್ಲೂ ಬಂಗಾರದ ಬೆಲೆಯಲ್ಲಿ ದಾಖಲೆಯ ಏಕದಿನದ ಗರಿಷ್ಠ ಹೆಚ್ಚಳ ಕಂಡು ಬಂದಿದೆ. ಶ್ವೇತ ಲೋಹ ಬೆಳ್ಳಿಯಲ್ಲಿ ದರ ಸ್ವಲ್ಪ ಏರಿಕೆ ಆಗಿದೆ.
ಹೂಡಿಕೆದಾರರಿಗೆ ಇಂದಿನ ದರ ಹೆಚ್ಚಳ ಕೊಂಚ ನೆಮ್ಮದಿ ತಂದಿದ್ದು, ಏರಿಕೆಯ ಭರವಸೆ ಮೂಡಿಸಿದೆ. ಗ್ರಾಹಕರಿಗೆ ಮತ್ತೆ ಆಘಾತ ನೀಡಿದೆ. 24 ಕ್ಯಾರಟ್ ಚಿನ್ನದ ದರವು ಒಂದೇ ದಿನಕ್ಕೆ 2890 ರೂಪಾಯಿ ಹೆಚ್ಚಾಗಿದ್ದು, 10 ಗ್ರಾಂ ಬೆಲೆ ಇಂದು 1,56,600 ರೂಪಾಯಿ ಮುಟ್ಟಿದೆ. ಇದರ ಬೆಲೆ ನೆನ್ನೆ ಶುಕ್ರವಾರ (ಫೆ.06) 1,53,710 ರೂಪಾಯಿ ಇತ್ತು.

ಇನ್ನೂ 22 ಕ್ಯಾರಟ್ ಚಿನ್ನದ ದರವು ಒಂದೇ ದಿನಕ್ಕೆ 2650 ರೂಪಾಯಿಗೆ ಏರಿಕೆ ಕಾಣುವ ಮೂಲಕ ಅದರ 10 ಗ್ರಾಂ ಬೆಲೆ ಇಂದು 1,43,550 ರೂಪಾಯಿ ತಲುಪಿದೆ. ಇದರ ಬೆಲೆ ನೆನ್ನೆ ಶುಕ್ರವಾರ (ಫೆ.06) 1,12,720 ರೂಪಾಯಿ ಇತ್ತು ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. ದರದಲ್ಲಿ ವ್ಯತ್ಯಾಸವಾಗಿದ್ದರೂ ಸಹಿತ ಚಿನ್ನವು ಇಳಿಕೆಯ ಹಾದಿ ಹಿಡಿದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಕೆ ಆಗಲಿದೆಯೇ ಎಂಬ ಚರ್ಚೆಗಳು ಶುರುವಾಗಿವೆ.
ಬೆಳ್ಳಿ ದರ 10,000 ರೂ.ಏರಿಕೆ
ಸಾರ್ವಕಾಲಿಕ ದಾಖಲೆ ಮಟ್ಟ ತಲುಪಿದ್ದ ಬೆಳ್ಳಿ ಒಂದು ಕೆಜಿ ಬೆಲೆಯು ಮತ್ತೆ 10,000 ರೂಪಾಯಿಗೆ ಏರಿಕೆ ಆಗಿದೆ. ಇದರಿಂದಾಗಿ ನೆನ್ನೆ ಶುಕ್ರವಾರ 2,75,000 ರೂಪಾಯಿ ಇದ್ದ ಬೆಳ್ಳಿಯು ಇವತ್ತಿಗೆ 2,85,000 ರೂಪಾಯಿಗೆ ಮುಟ್ಟಿದೆ. ಇದು ಗ್ರಾಹಕರನ್ನು ಚಿಂತೀಗೀಡಾಗುವಂತೆ ಮಾಡಿದೆ. ಫೆಬ್ರವರಿ 4ರಂದು ಒಂದೇ ದಿನ 40,000 ರೂಪಾಯಿ ಏರಿಕೆ ಕಂಡಿದ್ದ ಬೆಳ್ಳಿ, ನಂತರ ಎರಡು ದಿನ ನಿರಂತರವಾಗಿ 20,000 ಮತ್ತು 25,000 ರೂಪಾಯಿ ಇಳಿಕೆ ಕಂಡಿತ್ತು. ಇಂದು ಮತ್ತೆ ಹೆಚ್ಚಾಗಿದೆ.
ಚಿನ್ನದ ಮೇಲೆ ಹೂಡಿಕೆ ಬಗ್ಗೆ ಆರ್ಥಿಕ ತಜ್ಞರು ಹೇಳುವುದೇನು?
ಆರ್ಥಿಕ ತಜ್ಞರು, ಮಾರುಕಟ್ಟೆಯಲ್ಲಿ ಈ ಲೋಹಗಳಿಗೆ ಬೇಡಿಕೆ ಇದ್ದೇ ಇದೆ. ಕೈಗಾರಿಕೆಗೆ ಹೆಚ್ಚು ಬಳಕೆ ಆಗುತ್ತಿರುವ ಬೆಳ್ಳಿಯು ಪೂರೈಕೆ ಈ ವರ್ಷ ಕೊಂಚ ಕಡಿಮೆ ಆಗಲಿದ್ದು, ಅದರ ಬೆಲೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದಿದ್ದಾರೆ. ಮತ್ತೊಬ್ಬರು ಚಿನ್ನದ ಬೆಲೆಯಲ್ಲಿ ಹಾವು ಏಣಿ ಆಟ ಮುಂದುವರಿಯಲಿದೆ. ಆದರೆ ಹೂಡಿಕೆದಾರರು ಅಗತ್ಯ ಎಚ್ಚರಿಕೆ ವಹಿಸಬೇಕು. ಅಧಿಕ ಲಾಭದ ಆಸೆಗೆ ಬಿದ್ದು ಚಿನ್ನದ ಮೇಲೆ ಭಾರೀ ಹಣ ಹೂಡಿಕೆ ನಿರ್ಧಾರ ಸದ್ಯಕ್ಕೆ ಬೇಡ ಎಂದಿದ್ದಾರೆ. ಸದ್ಯ ಎಲ್ಲೆಡೆ ಚಿನ್ನ-ಬೆಳ್ಳಿ ದರ ಇಳಿಕೆ ಮತ್ತು ಏರಿಕೆ, ಹೂಡಿಕೆ, ಖರೀದಿ ಕುರಿತು ಹೆಚ್ಚಿನ ಚರ್ಚೆಗಳು ಮುಂದುವರಿದಿವೆ.
-
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ












Click it and Unblock the Notifications