Gold Rate October 19: ಭಾರೀ ಇಳಿಕೆ ಕಂಡಿದ್ದ ಚಿನ್ನ-ಬೆಳ್ಳಿ ದರ ಇಂದು ಎಷ್ಟಿದೆ?

ಈ ವಾರದ ಆರಂಭದಿಂದಲೂ ನಿರಂತರವಾಗಿ ಏರಿಕೆ ಕಂಡಿದ್ದ ಚಿನ್ನ ಹಾಗೂ ಬೆಳ್ಳಿಯ ದರಗಳು ವಾರಾಂತ್ಯದಲ್ಲಿ ಭಾರೀ ಇಳಿಕೆ ಕಾಣುವ ಮೂಲಕ ಚಿನ್ನ ಖರೀದಿದಾರರಿಗೆ ನೆಮ್ಮದಿ ನೀಡಿತ್ತು. ದೀಪಾವಳಿ ವೇಳೆಗೆ ಚಿನ್ನ ಮತ್ತಷ್ಟು ದುಬಾರಿಯಾಗಲಿದೆ ಎಂದು ಆತಂಕದಲ್ಲಿದ್ದವರಿಗೆ ನಿನ್ನೆಯ ದರ ಇಳಿಕೆಯು ಖುಷಿ ನೀಡಿದೆ. ಚಿನ್ನ ಹಾಗೂ ಬೆಳ್ಳಿ ಖರೀದಿಸುವವರಿಗೆ ಇಂದಿನ 24 ಕ್ಯಾರೆಟ್, 22 ಕ್ಯಾರೆಟ್, 18 ಕ್ಯಾರೆಟ್ ಚಿನ್ನ ಹಾಗೂ ಬೆಳ್ಳಿಯ ದರಗಳು ಪ್ರತಿ ಗ್ರಾಂ.ಗೆ ಎಷ್ಟಿದೆ? ಎನ್ನುವ ಮಾಹಿತಿ ಇಲ್ಲಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ ನೋಡುವುದಾದರೆ ಸದ್ಯ 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹13,086, 22 ಕ್ಯಾರೆಟ್ ಚಿನ್ನಕ್ಕೆ ₹11,995 ಮತ್ತು 18 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹9,814ರಷ್ಟಿದೆ. ಶನಿವಾರ ಎಲ್ಲ ಚಿನ್ನದ ದರಗಳು ಭಾರೀ ಇಳಿಕೆ ಕಂಡಿದ್ದು, ಅದೇ ದರಗಳು ಮುಂದುವರಿದಿವೆ. ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹13,086 ಆಗಿದ್ದು, 8 ಗ್ರಾಂ.ಚಿನ್ನದ ದರ ₹1,04,688, 10 ಗ್ರಾಂ.ಚಿನ್ನದ ದರ ₹1,30,860, 100 ಗ್ರಾಂ.ಚಿನ್ನದ ದರವು ₹13,08,600 ಆಗಿದೆ. ಇಂದು ಕೂಡ ಇದೇ ದರ ಮುಂದುವರಿಯುವ ಸಾಧ್ಯತೆ ಇದೆ.

Gold Silver Price Today October 19 Major Drop In Gold Rates In Bengaluru India

ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹11,995 ಆಗಿದ್ದು, 8 ಗ್ರಾಂ.ಚಿನ್ನದ ದರ ₹95,960, 10 ಗ್ರಾಂ.ಚಿನ್ನದ ದರ ₹1,19,950, 100 ಗ್ರಾಂ.ಚಿನ್ನದ ದರ ₹11,99,500 ಆಗಿದ್ದು, ಹಿಂದಿನ ದರಕ್ಕಿಂತ ₹17,500 ರೂಪಾಯಿ ಭಾರೀ ಕುಸಿತ ಕಂಡಿತ್ತು. ಬೆಂಗಳೂರಿನಲ್ಲಿ 18 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹9,814 ಆಗಿದ್ದು ಹಿಂದಿನ ದರಕ್ಕಿಂತ ₹144 ಕಡಿಮೆಯಾಗಿತ್ತು, 8 ಗ್ರಾಂ.ಚಿನ್ನದ ದರ ₹78,512, 10 ದರ ಪ್ರತಿ ಗ್ರಾಂಗೆ ₹98,140, 100 ದರ ಪ್ರತಿ ಗ್ರಾಂಗೆ ₹9,81,400 ಇದೆ. ಒಟ್ಟಾರೆ ₹14,400ರಷ್ಟು ಕಡಿಮೆಯಾಗಿದೆ. ಇಂದಿನ ದರವು ಸದ್ಯದಲ್ಲೇ ಅಪ್ಡೇಟ್‌ ಆಗಲಿದೆ.

ಬೆಂಗಳೂರಿನಲ್ಲಿ ಕಳೆದ 10 ದಿನಗಳ ಚಿನ್ನದ ದರಪಟ್ಟಿ (ಗ್ರಾಂ.ಗೆ)

ದಿನಾಂಕ: 24 ಕ್ಯಾರೆಟ್ ಚಿನ್ನ; 22 ಕ್ಯಾರೆಟ್ ಚಿನ್ನ

ಅಕ್ಟೋಬರ್‌ 19: ₹13,086 ; ₹11,995

ಅಕ್ಟೋಬರ್‌ 18: ₹13,086 ; ₹11,995

ಅಕ್ಟೋಬರ್ 17: ₹13,277 ; ₹12,170

ಅಕ್ಟೋಬರ್ 16: ₹12,944 ; ₹11,865

ಅಕ್ಟೋಬರ್ 15: ₹12,889 ; ₹11,815

ಅಕ್ಟೋಬರ್ 14: ₹12,868 ; ₹11,795

ಅಕ್ಟೋಬರ್ 13: ₹12,540 ; ₹11,495

ಅಕ್ಟೋಬರ್ 12: ₹12,508 ; ₹11,465

ಅಕ್ಟೋಬರ್ 11: ₹12,508 ; ₹11,465

ಅಕ್ಟೋಬರ್ 10: ₹12,371 ; ₹11,340

ಬೆಳ್ಳಿ ದರ ಎಷ್ಟಿದೆ?

ಬೆಂಗಳೂರಿನಲ್ಲಿ ಬೆಳ್ಳಿಯ ಬೆಲೆ ಪ್ರಸ್ತುತ ಪ್ರತಿ ಗ್ರಾಂಗೆ ₹180 ಮತ್ತು ಪ್ರತಿ ಕಿಲೋಗ್ರಾಂಗೆ ₹1,80,000 ಆಗಿದೆ. ಶನಿವಾರದ ವೇಳೆ ದರವು ₹13,900ರಷ್ಟು ಕಡಿಮೆಯಾಗಿತ್ತು. ಬೆಂಗಳೂರಿನಲ್ಲಿ ಪ್ಲಾಟಿನಂ ಬೆಲೆ ಪ್ರತಿ ಗ್ರಾಂಗೆ ₹4,555 ಮತ್ತು 10 ಗ್ರಾಂಗೆ ₹ 45,550 ಇದ್ದು, ₹2,650ರಷ್ಟು ಭಾರೀ ಇಳಿಕೆ ಕಂಡಿತ್ತು. ವಾರಾಂತ್ಯ ಇರುವ ಹಿನ್ನೆಲೆ ದರಗಳು ಸ್ಥಿರವಾಗಿ ಇರಲಿದ್ದು, ಸೋಮವಾರದಿಂದ ದೀಪಾವಳಿ ಆಚರಣೆ ಇರುವ ಕಾರಣ ಈ ವೇಳೆಗೆ ಚಿನ್ನ ಹಾಗೂ ಬೆಳ್ಳಿಯ ದರ ಮತ್ತೆ ಏರುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+