Get Updates
Get notified of breaking news, exclusive insights, and must-see stories!

Gold Price Today: ಇಂದು ದಾಖಲೆ ಮಟ್ಟದಲ್ಲಿ ಚಿನ್ನ-ಬೆಳ್ಳಿ ದರ ಏರಿಕೆ, ನಿಮ್ಮೂರಲ್ಲಿ ಎಷ್ಟಿದೆ ಬೆಲೆ?

ಬೆಂಗಳೂರು: ಚಿನ್ನ ಬೆಳ್ಳಿ ದರದಲ್ಲಿ ಹಾವು ಏಣಿ ಆಟ ಮುಂದುವರಿದಿದೆ. ಇಂದು ಸೋಮವಾರ ಫೆಬ್ರವರಿ 9 ರಂದು ಬೆಳ್ಳಿ ಮತ್ತು ಬಂಗಾರದ ದರದಲ್ಲಿ ಮತ್ತೆ ಗರಿಷ್ಠ ಪ್ರಮಾಣದ ಭರ್ಜರಿ ಏರಿಕೆ ದಾಖಲಿಸಿದೆ. ಈ ಮೂಲಕ ಗ್ರಾಹಕರಿಗೆ ಆಘಾತ ನೀಡಿದೆ. ಯಾರೆಲ್ಲ ಈ ಲೋಹಗಳ ಖರೀದಿಗೆ ಮುಂದಾಗಿದ್ದರೋ ಅವರಿಗೆ ಬ್ರೇಕ್ ಬಿದ್ದಂತಾಗಿದೆ. ಹೂಡಿಕೆದಾರರಲ್ಲಿ ಕೊಂಚ ನಿರಾಳತೆ ಮೂಡಿಸಿದೆ. ದರ ಹೆಚ್ಚಾಗಿದ್ದೆಷ್ಟು? ಬೆಂಗಳೂರು ದರ ವಿವರ ಇಲ್ಲಿದೆ.

ಜಾಗತಿಕ ಬಿಕ್ಕಟ್ಟು, ಸುಂಕ ಹೇರಿಕೆ, ಕೇಂದ್ರ ಬ್ಯಾಂಕ್‌ಗಳಿಂದ ಹೇರಳ ಚಿನ್ನ ಖರೀದಿ ಸೇರಿದಂತೆ ಹಲವು ಕಾರಣಗಳಿಂದ ಮೂರೇ ತಿಂಗಳಲ್ಲಿ ಚಿನ್ನ-ಬೆಳ್ಳಿ ದರ ಗಗನಕ್ಕೇರಿತು. ಜನವರಿ ಒಂದು ತಿಂಗಳಲ್ಲಿ ಬೆಳ್ಳಿ ಸಾರ್ವಕಾಲಿಕ ದಾಖಲೆ ಬರೆದು 4.10 ಲಕ್ಷಕ್ಕೇರಿತ್ತು. ಕಳೆದ ಹತ್ತು ದಿನಗಳಿಂದ ಚಿನ್ನ-ಬೆಳ್ಳಿ ಇಳಿಕೆ ಹಾದಿ ಹಿಡಿದಿದ್ದವು, ಇದೀಗ ವಾರದ ಮೊದಲ ದಿನ (ಫೆಬ್ರವರಿ 09) ದರದಲ್ಲಿ ಮತ್ತೆ ವ್ಯಾಪಕವಾಗಿ ಹೆಚ್ಚಾಗಿದೆ.

Gold Silver Price Today

ಚಿನ್ನದ ದರದಲ್ಲಿ ವ್ಯಾಪಕ ಹೆಚ್ಚಳ

ಇಂದು 22 ಕ್ಯಾರಟ್ ಚಿನ್ನದ 10 ಗ್ರಾಂ ದರವು ಬರೋಬ್ಬರಿ 2050 ರೂಪಾಯಿ ಹೆಚ್ಚಾಗಿದ್ದು, 1,45,600 ರೂಪಾಯಿ ಮುಟ್ಟಿದೆ. ಇದರ ಬೆಲೆ ನೆನ್ನೆ 1,43,550 ರೂಪಾಯಿ ಇತ್ತು. ಇನ್ನೂ 24 ಕ್ಯಾರಟ್ 10 ಗ್ರಾಂ ಬೆಲೆಯು 2240 ರೂಪಾಯಿ ಏರಿಕೆ ಆಗಿದ್ದು, 1,58,000 ರೂಪಾಯಿಗೆ ತಲುಪಿದೆ. ನೆನ್ನೆ ಇದರ ಬೆಲೆಯು 1,56,600 ರೂಪಾಯಿ ಇತ್ತು. ಇಳಿಕೆ ಕಂಡಿತು ಎನ್ನುವಷ್ಟರಲ್ಲಿ ದಿನೇ ದಿನೆ ಬಂಗಾರದ ಮತ್ತೆ ಗಗನದತ್ತ ಮುಖ ಮಾಡಿದೆ. ಏರಿಕೆ ಮತ್ತು ಇಳಿಕೆ ಇನ್ನು ಮುಂದೆ ಸಹಜ ಪ್ರಕ್ರಿಯೆ ಎಂಬಂತಾಗುವ ಲಕ್ಷಣಗಳು ಕಾಣಿಸುತ್ತಿವೆ.

ಬೆಳ್ಳಿ ದರ ಭರ್ಜರಿ ಏರಿಕೆ

ಬೆಳ್ಳಿ ದರ ನೋಡುವುದಾರೆ, ಒಂದೇ ದಿನಕ್ಕೆ ಬೆಳ್ಳಿಯು 1ಕೆಜಿ ದರದಲ್ಲಿ 15,000 ರೂಪಾಯಿ ದಾಖಲೆಯ ಏರಿಕೆ ಕಂಡು ಬಂದಿದ್ದು ಬೆಲೆಯು 3,00,000 ರೂ.ತಲುಪಿದೆ. ನೆನ್ನೆ 100 ಗ್ರಾಂ ಬೆಳ್ಳಿಗೆ 28,500 ರೂಪಾಯಿ ಇದ್ದದ್ದು, ಒಂದೇ ದಿನಕ್ಕೆ 30,000 ರೂಪಾಯಿಗೆ ಏರಿಕೆ ಆಗಿದೆ. ಹತ್ತೇ ದಿನದ ಅಂತದಲ್ಲಿ 4.10 ಲಕ್ಷ ರೂ.ನಿಂದ 2.75 ಲಕ್ಷಕ್ಕೆ ಕುಸಿತ ಕಂಡಿದ್ದ ಬೆಳ್ಳಿ ಇಂದು ಮತ್ತೆ ಭರ್ಜರಿ ಏರಿಕೆ ಕಂಡಿದೆ. ಇದು ಗ್ರಾಹಕರ ನಿದ್ದೆಗಡಿಸಿದರೆ, ಹೂಡಿಕೆದಾರರಲ್ಲಿ ಮಂದಹಾಸ ಮೂಡಿಸಿದೆ.

ಬೆಂಗಳೂರು ಚಿನ್ನ ಬೆಳ್ಳಿ ದರಪಟ್ಟಿ

22k 10ಗ್ರಾಂ ಚಿನ್ನದ ಬೆಲೆ : 1,45, 600 ರೂಪಾಯಿ

24k 10ಗ್ರಾಂ ಬಂಗಾರದ ದರ: 1,58,540 ರೂಪಾಯಿ

ಒಂದು ಕೆಜಿ ಬೆಳ್ಳಿ ದರ: 3,00,000 ರೂಪಾಯಿ

ನಗರವಾರು 22k 01 ಗ್ರಾಂ ಬೆಲೆ ಮಾಹಿತಿ

ಚೆನ್ನೈ: 14,650 ರೂಪಾಯಿ

ಮುಂಬೈ: 14,560 ರೂಪಾಯಿ

ದೆಹಲಿ: 14,575 ರೂಪಾಯಿ

ಕೊಲ್ಕತ್ತಾ: 14,560 ರೂಪಾಯಿ

ಬೆಂಗಳೂರು: 14,560 ರೂಪಾಯಿ

ಹೈದರಾಬಾದ್: 14,560 ರೂಪಾಯಿ

ಕೇರಳ: 14,560 ರೂಪಾಯಿ

ಪುಣೆ: 14,560 ರೂಪಾಯಿ

ವಡೋದರಾ: 14,565 ರೂಪಾಯಿ

ಅಹ್ಮದಾಬಾದ್: 14,565 ರೂಪಾಯಿ

---------

ಕ್ರಿಕೆಟ್ ಬಗ್ಗೆ ನಿಮಗೇನು ಬೇಕೋ ಅದೆಲ್ಲ 'ಮೈಖೇಲ್‌' ವೆಬ್‌ಸೈಟ್‌ನಲ್ಲಿದೆ

ಕ್ರಿಕೆಟ್ ಆಟವನ್ನು ಲೈವ್ ನೋಡುವುದಷ್ಟೇ ಅಲ್ಲ, ರಿಪೋರ್ಟ್‌ ಓದುವುದೂ ಸಹ ಅಭಿಮಾನಿಗಳ ಪಾಲಿಗೆ ಸುಖ. ಕನ್ನಡದಲ್ಲಿ ಕ್ರಿಕೆಟ್‌ ಲೋಕದ ಸಮಗ್ರ ಮಾಹಿತಿ 'ಮೈಖೇಲ್' ಜಾಲತಾಣದಲ್ಲಿ ಲಭ್ಯ. ಇಲ್ಲಿ ಲೈವ್ ಸ್ಕೋರ್‌, ಬ್ರೇಕಿಂಗ್ ನ್ಯೂಸ್, ಪಂದ್ಯಗಳ ವೇಳಾಪಟ್ಟಿ, ಮ್ಯಾಚ್ ರಿಪೋರ್ಟ್‌, ಆಟಗಾರರ ಹೇಳಿಕೆ, ವಿವಾದ, ಗಾಸಿಪ್, ಪ್ರೊಫೈಲ್, ಆಕರ್ಷಕ ಫೋಟೊಗಳು, ಇನ್‌ಫೋಗ್ರಾಫಿಕ್ಸ್ ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಬಯಸುವ ಎಲ್ಲವೂ ಇದೆ. ಕ್ರಿಕೆಟ್ ಬಗ್ಗೇ ಏನೇ ಬೇಕಿದ್ದರೂ 'ಮೈಖೇಲ್' ವೆಬ್‌ಸೈಟ್ ನೋಡಿ. ನೆನಪಿರಲಿ: ಕನ್ನಡದಲ್ಲಿ ಕ್ರಿಕೆಟ್‌, 'ಮೈಖೇಲ್' ವೆಬ್‌ಸೈಟ್ ಬೆಸ್ಟ್‌.

ಕ್ರೀಡಾಲೋಕದ ತಾಜಾ ಮಾಹಿತಿಗಾಗಿ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲೂ ಮೈಖೇಲ್‌ ಫಾಲೊ ಮಾಡಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+