Gold Price on Feb 8: ಪ್ರೇಮಿಗಳ ದಿನಾಚರಣೆ ಮುನ್ನ ಚಿನ್ನದ ಬೆಲೆಯಲ್ಲಿ ಕುಸಿತ, ಬೆಂಗಳೂರಿನಲ್ಲಿ ಎಷ್ಟಿದೆ?

ಬೆಂಗಳೂರು, ಫೆಬ್ರವರಿ 08: ದೇಶಾದ್ಯಂತ ಚಿನ್ನಕ್ಕೆ ಬೆಲೆ ಏರುಗತಿಯಲ್ಲಿ ಸಾಗಿದಂತೆ ಬೇಡಿಕೆಯು ಅಪಾರ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಮಹಿಳೆಯರು ಹಬ್ಬ, ಕಾರ್ಯಕ್ರಮಗಳು, ಮದುವೆ, ಫ್ಯಾಮಿಲಿ ಫಂಕ್ಷನ್ ಗಳಲ್ಲಿ ಚಿನ್ನ ಖರೀದಿಗೆ ಮನಸ್ಸು ಮಾಡುತ್ತಾರೆ. ಹೀಗಾಗಿ ಚಿನ್ನಕ್ಕೆ ವರ್ಷವಿಡಿ ಬೇಡಿಕೆ ಇದ್ದೆ ಇದೆ. ನಿರಂತರವಾಗಿ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲಿಯಲ್ಲಿ ಶನಿವಾರ ಫೆಬ್ರವರಿ 08ರಂದು ಕೊಂಚ ಇಳಿಕೆ ಕಂಡು ಬಂದಿದೆ.

ಚಿನ್ನದ ಬೆಲೆ 24 ಕ್ಯಾರಟ್ ಒಂದು ಗ್ರಾಂ ಬೆಲೆ ಇಂದು 8650 ರೂಪಾಯಿ ಇದೆ. 22 ಕ್ಯಾರಟ್ ಒಂದು ಗ್ರಾಂ ಚಿನ್ನದ ದರ 7929 ರೂಪಾಯಿ ಇದೆ. ಹತ್ತು ಗ್ರಾಂ 24 ಕ್ಯಾರಟ್ ಚಿನಕ್ಕೆ ಇಂದು 86500 ರೂಪಾಯಿ ಇದೆ. ಇಂದಿಗೆ ದರದಲ್ಲಿ 10 ರೂಪಾಯಿ ಕುಸಿತ ಕಂಡಿದೆ. 22 ಕ್ಯಾರಟ್ ಹತ್ತು ಗ್ರಾಂ ದರವು 79290 ರೂಪಾಯಿ ಇದ್ದು, 10 ರೂಪಾಯಿ ಇಳಿಕೆ ಕಂಡಿದೆ. ಇನ್ನೂ ಬೆಳ್ಳಿ ದರದಲ್ಲಿ ಕೊಂಚ ಬದಲಾವಣೆ ಆಗಿದ್ದು, ಬೆಳ್ಳಿ ದರವು 100 ರೂ.ಗೆ ಇಳಿಕೆ ಒಂದು ಕೆ.ಜಿ. ಬೆಳ್ಳಿ ಬೆಲೆ 99,400 ರೂ. ಇದೆ ಎಂದು ವರದಿ ತಿಳಿಸಿದೆ.

Gold-Silver Price on Today February 8th Gold Rate slightly Reduced Now

100 ರೂಪಾಯಿ ಕುಸಿತ

ನೀವೇನಾದರೂ 24 ಕ್ಯಾರಟ್ 100 ಗ್ರಾಂ ಚಿನ್ನಕ್ಕೆ 100 ರೂಪಾಯಿ ಇಳಿಕೆ ಕಂಡಿದೆ. ಚಿನ್ನದ ಬೆಲೆಯು ನಗರದಿಂದ ನಗರಕ್ಕೆ, ರಾಜ್ಯದಿಂದ ರಾಜ್ಯಕ್ಕೆ ಕೊಂಚ ವ್ಯತ್ಯಾಸ ಕಂಡು ಬರುತ್ತಿದೆ. ವೇಸ್ಟೇಜ್, ಇನ್ನಿತರ ಶುಲ್ಕ ಸೇರಿ ಚಿನ್ನಾಭರಣಗಳ ಬೆಲೆಯಲ್ಲಿ ಕೊಂಚ ಏರಿಳಿತ ಕಂಡು ಬರುತ್ತದೆ. ಆರ್ಥಿಕ ತಜ್ಞರ ಪ್ರಕಾರ, ಚಿನ್ನದ ಬೆಲೆಯು ಈ ವರ್ಷಾಂತ್ಯಕ್ಕೆ ಗರಿಷ್ಠ ಪ್ರಮಾಣದಲ್ಲಿ ಏರಿಕೆ ಆಗಲಿದೆ ಎಂದು ಅಂದಾಜಿಸಲಾಗಿದೆ.

ಫೆ.1 ರಿಂದ 8ರವರೆಗಿನ 1ಗ್ರಾಂ ಚಿನ್ನದ ದರ ವಿವರ (22 & 24 ಕ್ಯಾರಟ್)

ಫೆಬ್ರವರಿ 1: 22 ಕ್ಯಾರಟ್ ಚಿನ್ನದ ದರ 7,745 ರೂ. ಮತ್ತು 24 ಕ್ಯಾರಟ್ ಚಿನ್ನ ಬೆಲೆ 8,449 ರೂ.

ಫೆಬ್ರವರಿ 2: 7,745 ರೂ. ಮತ್ತು 8,449 ರೂಪಾಯಿ

ಫೆಬ್ರವರಿ 3: 7,705 ರೂ. ಮತ್ತು 8,405 ರೂಪಾಯಿ

ಫೆಬ್ರವರಿ 4: 7,810 ರೂ. ಮತ್ತು 8,520 ರೂಪಾಯಿ

ಫೆಬ್ರವರಿ 5: 7,905 ರೂ. ಮತ್ತು 8,624 ರೂಪಾಯಿ

ಫೆಬ್ರವರಿ 7: 7,930 ರೂ. ಮತ್ತು 8,651 ರೂಪಾಯಿ

ಫೆಬ್ರವರಿ 6: 7,930 ರೂ. ಮತ್ತು 8,651 ರೂಪಾಯಿ

ಫೆಬ್ರವರಿ 8: 7,929 ರೂ. ಮತ್ತು 8,650 ರೂಪಾಯಿ

ಭವಿಷ್ಯದಲ್ಲಿ ಚಿನ್ನ ಮತ್ತು ಬೆಳ್ಳಿಗೆ ಭಾರೀ ಬೇಡಿಕೆ ಮುಂದುವರಿಯಲಿದೆ. ಇನ್ನೊಂದು ತಿಂಗಳಲ್ಲಿ 90 ಸಾವಿರ ರೂ. ಗಡಿ ದಾಟಿದರೂ ದಾಟಬಹುದು ಎಂದು ಹೇಳಲಾಗುತ್ತಿದೆ. ಬಂಗಾರದ ಮೇಲಿನ ದರ ನಿರಂತರ ಹೆಚ್ಚಳ ಕಾರಣಕ್ಕೆ ಷೇರು ಪೇಟೆಯಲ್ಲಿ ಗೋಲ್ಡ್ ಇನ್ವೆಸ್ಟ್ ಹೆಚ್ಚಾಗುತ್ತಿದೆ. ನಿಮ್ಮ ಲಾಭ, ಆದಾಯದ ಚೂರು ಮೊತ್ತ ಬಂಗಾರದ ಮೇಲೆ ಹೂಡಿಕೆ ಮಾಡಿ ಎಂದು ತಜ್ಞರು ಸಲಹೆ ನೀಡುತ್ತಾರೆ. ಇದರಿಂದ ನೀವು ಬೆಲೆ ಏರಿಕೆ ವೇಳೆ ಲಾಭದ ಹಾದಿಯಲ್ಲಿ ಸಾಲು ಅನುಕೂಲವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+