ಚಿನ್ನದ ಬೆಲೆ ಇಳಿಕೆ; ಆಗಸ್ಟ್ 5ರಂದು 10 ಗ್ರಾಂ ಚಿನ್ನ ಎಷ್ಟು ಇಳಿಕೆಯಾಗಿದೆ?
ನವದೆಹಲಿ, ಆಗಸ್ಟ್ 05: ಆಗಸ್ಟ್ ತಿಂಗಳಿನಲ್ಲಿ ದೇಶದಾದ್ಯಂತ ಚಿನ್ನದ ವಹಿವಾಟು ಕುಂಠಿತಗೊಂಡಿದ್ದು, ಗುರುವಾರ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗಿದೆ. ಆಗಸ್ಟ್ 5ರ ಗುರುವಾರ ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಮತ್ತೆ ಕುಸಿತವಾಗಿದೆ. ಬೆಳ್ಳಿ ಬೆಲೆಯೂ ತಗ್ಗಿದೆ.
ಗುರುವಾರದ ಈ ಪರಿಷ್ಕೃತ ಬೆಲೆಯೊಂದಿಗೆ, ಆಗಸ್ಟ್ 05ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 90 ರೂ ಇಳಿಕೆಯಾಗಿ 46,950 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 100 ರೂ ಇಳಿಕೆಯಾಗಿ 51,220 ರೂ ಆಗಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್(1 ounce=28.3495 ಗ್ರಾಂ)ಗೆ ಶೇ 0.06% ರಷ್ಟು ಇಳಿಕೆಯಾಗಿ 1,810.63 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.16%ರಷ್ಟು ಏರಿಕೆಯಾಗಿ 25.41 ಯುಎಸ್ ಡಾಲರ್ ಆಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಆಗಸ್ಟ್ 05ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ...
{photo-feature}












Click it and Unblock the Notifications