Gold Price Today: ದೀಪಾವಳಿ ಹಿನ್ನೆಲೆ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ?
ಬೆಳಕಿನ ಹಬ್ಬ ದೀಪಾವಳಿಗೆ ಕೆಲವೇ ದಿನಗಳು ಬಾಕಿ ಇದೆ. ಈ ಹಬ್ಬಕ್ಕೆ ಜನ ಚಿನ್ನ ಹಾಗೂ ಬೆಳ್ಳಿ ಖರೀದಿಸಲು ಮುಗಿಬೀಳುತ್ತಾರೆ. ಅಲ್ಲದೆ ದೀಪಾವಳಿ ವೇಳೆ ಚಿನ್ನ ಖರೀದಿಸುವುದು ಒಳ್ಳೆಯದು ಎಂಬ ನಂಬಿಕೆಯೂ ಇದೆ. ಹೀಗಾಗಿ ಆಭರಣ ಮಳಿಗೆಗಳಲ್ಲಿ ಚಿನ್ನ ಖರೀದಿದಾರರು ತುಂಬಿ ತುಳುಕಾಡುತ್ತಿದ್ದಾರೆ. ಚಿನ್ನ ಹಾಗೂ ಬೆಳ್ಳಿ ದರ ಕೂಡ ಕಳೆದ ವಾರದಿಂದ ನಿರಂತರವಾಗಿ ಏರಿಕೆ ಕಾಣುತ್ತಿದೆ. ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಇಂದಿನ 24 ಕ್ಯಾರೆಟ್, 22 ಕ್ಯಾರೆಟ್, 18 ಕ್ಯಾರೆಟ್ ಹಾಗೂ ಬೆಳ್ಳಿಯ ದರಗಳು ಪ್ರತಿ ಗ್ರಾಂ.ಗೆ ಎಷ್ಟಿದೆ? ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ..
ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹12,540, 22 ಕ್ಯಾರೆಟ್ ಚಿನ್ನಕ್ಕೆ ₹11,495 ಮತ್ತು 18 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹9,405 ಇದೆ. ನಿನ್ನೆಗಿಂತ ಪ್ರತಿ ಗ್ರಾಂಗೆ 32 ರೂಪಾಯಿ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹12,540, 8 ಗ್ರಾಂ. ಚಿನ್ನದ ದರ ₹1,00,320, 10 ಗ್ರಾಂ. ಚಿನ್ನದ ದರ ₹1,25,400, 100 ಗ್ರಾಂ. ಚಿನ್ನದ ದರ ₹12,54,000 ಆಗಿದ್ದು, ₹3,200 ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಇಂದಿನ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹11,495, 8 ಗ್ರಾಂ. ಚಿನ್ನದ ದರ ₹91,960, 10 ಗ್ರಾಂ.ಚಿನ್ನದ ದರ ₹1,14,950, 100 ಗ್ರಾಂ. ಚಿನ್ನದ ದರ ₹11,49,500ಗೆ ತಲುಪಿದ್ದು, ₹3,000 ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಇಂದಿನ 18 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹9,405, 8 ಗ್ರಾಂ.ಚಿನ್ನದ ದರ ₹75,240, 10 ಗ್ರಾಂ.ಚಿನ್ನದ ದರ ₹94,050, 100 ಗ್ರಾಂ.ಚಿನ್ನದ ದರ ₹9,40,500ಗೆ ಏರಿದ್ದು, ನಿನ್ನೆಗಿಂತ ದರ ₹2,400 ಹೆಚ್ಚಾಗಿದೆ.
ಬೆಂಗಳೂರಿನಲ್ಲಿ ಕಳೆದ 10 ದಿನಗಳ ಚಿನ್ನದ ದರಪಟ್ಟಿ (ಗ್ರಾಂ.ಗೆ)
ದಿನಾಂಕ: 24 ಕ್ಯಾರೆಟ್ ಚಿನ್ನ; 22 ಕ್ಯಾರೆಟ್ ಚಿನ್ನ
ಅಕ್ಟೋಬರ್ 13: ₹12,540 ; ₹11,495
ಅಕ್ಟೋಬರ್ 12: ₹12,508 ; ₹11,465
ಅಕ್ಟೋಬರ್ 11: ₹12,508 ; ₹11,465
ಅಕ್ಟೋಬರ್ 10: ₹12,371 ; ₹11,340
ಅಕ್ಟೋಬರ್ 9: ₹12,415 ; ₹11,380
ಅಕ್ಟೋಬರ್ 8: ₹12,393 ; ₹11,360
ಅಕ್ಟೋಬರ್ 7: ₹12,202 ; ₹11,185
ಅಕ್ಟೋಬರ್ 6: ₹12,077 ; ₹11,070
ಅಕ್ಟೋಬರ್ 5: ₹11,940 ; ₹10,945
ಬೆಳ್ಳಿ-ಪ್ಲಾಟಿನಂ ದರ ಎಷ್ಟಿದೆ?
ಬೆಂಗಳೂರಿನಲ್ಲಿ ಇಂದಿನ ಬೆಳ್ಳಿ ಬೆಲೆ ಪ್ರತಿ ಗ್ರಾಂಗೆ ₹185 ಮತ್ತು ಪ್ರತಿ ಕಿಲೋಗ್ರಾಂಗೆ ₹1,85,000 ಆಗಿದೆ. ನಿನ್ನೆಗಿಂತ ದರ 2,700 ರೂಪಾಯಿ ಹೆಚ್ಚಾಗಿದೆ. ಇಂದು ಪ್ಲಾಟಿನಂ ಬೆಲೆ ಪ್ರತಿ ಗ್ರಾಂಗೆ ₹4,641 ಮತ್ತು 10 ಗ್ರಾಂ.ಗೆ ₹ 46,410 ಆಗಿದೆ. ಪ್ರತಿ ಗ್ರಾಂ ಮೇಲೆ ₹99 ಏರಿಕೆ ಕಂಡಿದೆ. ದೀಪಾವಳಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇರುವುದರಿಂದ ದರಗಳು ಮತ್ತಷ್ಟು ಏರುವ ನಿರೀಕ್ಷೆ ಇದೆ.












Click it and Unblock the Notifications