Gold Rate on Aug 27: ಗಣೇಶ ಚತುರ್ಥಿ ದಿನವೇ ಚಿನ್ನ ಪ್ರಿಯರಿಗೆ ಶಾಕ್: ಇಂದಿನ ಚಿನ್ನ & ಬೆಳ್ಳಿ ಬೆಲೆ ವಿವರ ಇಲ್ಲಿದೆ

Gold Rate on Aug 27: ಗಣೇಶ ಚತುರ್ಥಿಯ ದಿನವೇ ಚಿನ್ನ ಪ್ರಿಯರಿಗೆ ಭಾರೀ ಶಾಕ್ ಎದುರಾಗಿದೆ. ಚಿನ್ನದ ಬೆಲೆಯು ಹೊಸ ದಾಖಲೆ ಬರೆದಿದೆ. ಇದಕ್ಕೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ತೆರಿಗೆ ನೀತಿಯೂ ಕಾರಣ. ಭಾರತದ ಮೇಲೆ ತೆರಿಗೆ ದಾಳಿ ಮಾಡುವುದಕ್ಕೆ ಅಮೆರಿಕ ಅಧ್ಯಕ್ಷ ಸರ್ವ ಸನ್ನದ್ಧವಾಗಿದ್ದು ಅದರ ಪರಿಣಾಮ ವಿವಿಧ ವಸ್ತುಗಳ ಮೇಲೆ ಆಗುತ್ತಿದೆ. ಅದರಲ್ಲಿ ಚಿನ್ನ ಮತ್ತು ಬೆಳ್ಳಿಯೂ ಪ್ರಮುಖವಾಗಿದ್ದು. ಇದರ ಪರಿಣಾಮ ಬಂಗಾರದ ಮೇಲೆ ಆಗುತ್ತಿದೆ. ಆಗಸ್ಟ್‌ 27ರ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ಹಾಗೂ ನೆನ್ನೆಗೆ ಹೋಲಿಕೆ ಮಾಡಿದರೆ ಏನು ವ್ಯತ್ಯಾಸವಾಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಚಿನ್ನ ಮತ್ತು ಬೆಳ್ಳಿ ಬೆಲೆಯು ಗಣೇಶ ಚತುರ್ಥಿಯ ದಿನ ತುಸು ಏರಿಕೆ ಕಂಡಿದೆ. ಆಗಸ್ಟ್‌ ತಿಂಗಳ ಪ್ರಾರಂಭದಲ್ಲಿ ಕಡಿಮೆಯಾಗಿದ್ದ ಚಿನ್ನದ ಬೆಲೆಯು ಚಿನ್ನ ಪ್ರಿಯರಲ್ಲಿ ಹೊಸ ಸಂತೋಷವನ್ನುಂಟು ಮಾಡಿತ್ತು. ಆದರೆ ಇದೀಗ ತಿಂಗಳಾಂತ್ಯದಲ್ಲಿ ಚಿನ್ನದ ಬೆಲೆಯು ಭಾರೀ ಹೆಚ್ಚಳವಾಗಿದೆ.

Gold Rate Today Aug 27 Ganesh Chaturthi Shock for Gold Buyers Check Latest Gold amp amp Silver Prices

18 ಕ್ಯಾರೆಟ್ ಚಿನ್ನದ ಬೆಲೆ: 18 ಕ್ಯಾರೆಟ್ ಚಿನ್ನದ ಬೆಲೆಯು ಆಗಸ್ಟ್‌ 27ರಂದು ಭಾರೀ ಏರಿಕೆ ಕಂಡಿದೆ. 18 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 7,683 ಹಾಗೂ 10 ಗ್ರಾಂಗೆ 76,830 ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ ಒಂದು ಗ್ರಾಂಗೆ 28 ರೂಪಾಯಿ ಹಾಗೂ 10 ಗ್ರಾಂಗೆ 280 ರೂಪಾಯಿ ಹೆಚ್ಚಳವಾಗಿದೆ.

22 ಕ್ಯಾರೆಟ್ ಚಿನ್ನದ ಬೆಲೆ: 22 ಕ್ಯಾರೆಟ್‌ ಚಿನ್ನದ ಬೆಲೆಯಲ್ಲೂ ಹೆಚ್ಚಳವಾಗಿದೆ. 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆಯು 9,390 ರೂಪಾಯಿ ಹಾಗೂ 10 ಗ್ರಾಂಗೆ 93,900 ರೂಪಾಯಿ ಆಗಿದೆ. ಮಂಗಳವಾರಕ್ಕೆ ಹೋಲಿಕೆ ಮಾಡಿದರೆ ಪ್ರತಿ ಗ್ರಾಂಗೆ 35 ರೂಪಾಯಿ ಹಾಗೂ 10 ಗ್ರಾಂಗೆ 350 ರೂಪಾಯಿ ಹೆಚ್ಚಳವಾಗಿದೆ.

24 ಕ್ಯಾರೆಟ್ ಚಿನ್ನದ ಬೆಲೆ: ಇನ್ನು 18 ಕ್ಯಾರೆಟ್ ಹಾಗೂ 22 ಕ್ಯಾರೆಟ್‌ನಂತೆಯೇ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಹೆಚ್ಚಳವಾಗಿದೆ. 24 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 10,244 ರೂಪಾಯಿ ಹಾಗೂ 10 ಗ್ರಾಂಗೆ 1,02,440 ರೂಪಾಯಿ ಆಗಿದೆ. ಮಂಗಳವಾರಕ್ಕೆ ಹೋಲಿಕೆ ಮಾಡಿದರೆ 24 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 38 ರೂಪಾಯಿ ಹಾಗೂ 10 ಗ್ರಾಂಗೆ 380 ರೂಪಾಯಿ ಹೆಚ್ಚಳವಾಗಿದೆ.

ಬೆಳ್ಳಿ ಬೆಲೆ ಎಷ್ಟಿದೆ: ಇನ್ನು ಗಣೇಶ ಚತುರ್ಥಿಯ ದಿನದಂದು ಬೆಳ್ಳಿ ಬೆಲೆಯು ಯಥಾಸ್ಥಿತಿ ಮುಂದುವರಿದಿದೆ. ಬೆಳ್ಳಿ ಬೆಲೆಯು ಒಂದು ಗ್ರಾಂಗೆ 120 ರೂಪಾಯಿ ಹಾಗೂ ಪ್ರತಿ ಕೆ.ಜಿಗೆ 1,20,000 ಸಾವಿರ ರೂಪಾಯಿ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+