Gold Rate: ಒಂದೇ ದಿನ ₹10,400 ಏರಿಕೆಯಾದ ಚಿನ್ನದ ಬೆಲೆ! ಬೆಳ್ಳಿ ಬೆಲೆ ಹೇಗಿದೆ ತಿಳಿಯಿರಿ

ವರಮಹಾಲಕ್ಷ್ಮಿ ಹಬ್ಬಕ್ಕೆ ಚಿನ್ನ ಖರೀದಿ ಮಾಡಬೇಕು ಎನ್ನುವ ಯೋಚನೆಯಲ್ಲಿದ್ದವರಿಗೆ ಚಿನ್ನದ ಬೆಲೆ ಶಾಕ್ ಕೊಟ್ಟಿದೆ. ಮಂಗಳವಾರ ಒಂದೇ ದಿನ ಚಿನ್ನದ ಬೆಲೆ 10,400 ರೂಪಾಯಿ ಏರಿಕೆಯಾಗಿದೆ. ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದ್ದರೆ ಬೆಳ್ಳಿ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ. ಹಾಗಾದರೆ ಕರ್ನಾಟಕದಲ್ಲಿ ಮಂಗಳವಾರ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎನ್ನುವ ಮಾಹಿತಿ ಇಲ್ಲಿದೆ.

ಆಗಸ್ಟ್ 9 ರಂದು 79 ರೂಪಾಯಿ ಏರಿಕೆಯಾಗಿದ್ದ 1 ಗ್ರಾಂ ಶುದ್ಧ ಚಿನ್ನದ ಬೆಲೆ, ಆಗಸ್ಟ್ 10 ರಂದು ಮತ್ತೆ ಬೆಲೆ 21 ರೂಪಾಯಿ ಹೆಚ್ಚಳವಾಗಿತ್ತು. ಆಗಸ್ಟ್ 11 ರಂದು ಸ್ಥಿರತೆ ಕಾಯ್ದುಕೊಂಡಿದ್ದ ಚಿನ್ನದ ಧಾರಣೆ ಆಗಸ್ಟ್ 12ರಂದು 26 ರೂಪಾಯಿ ಹೆಚ್ಚಾಗಿತ್ತು. ಇಂದು ಒಂದೇ ದಿನ 1 ಗ್ರಾಂ ಚಿನ್ನದ ಬೆಲೆ 100 ರೂಪಾಯಿ ಹೆಚ್ಚಾಗಿದ್ದು ಆಭರಣ ಪ್ರಿಯರಿಗೆ ಶಾಕ್ ಕೊಟ್ಟಿದೆ.

Gold Rate Surges by 10 400 in August Latest Silver Prices in Karnataka

ಮಂಗಳವಾರ 24 ಕ್ಯಾರೆಟ್ (ಶುದ್ಧ ಚಿನ್ನ) ಬೆಲೆ 1 ಗ್ರಾಂಗೆ 104 ರೂಪಾಯಿ ಹೆಚ್ಚಾಗಿದ್ದು, 22 ಕ್ಯಾರೆಟ್ (ಆಭರಣ ಚಿನ್ನ) ಬೆಲೆ ಕೂಡ 1 ಗ್ರಾಂಗೆ 95 ರೂಪಾಯಿ ಹೆಚ್ಚಾಗಿದೆ. ಸೋಮವಾರ 7058 ರೂಪಾಯಿ ಇದ್ದ 1 ಗ್ರಾಂ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಮಂಗಳವಾರ 7162 ರೂಪಾಯಿಗೆ ಹೆಚ್ಚಾಗಿದೆ.

ಆಭರಣ ಚಿನ್ನದ ಬೆಲೆ ಹೇಗಿದೆ?

ಸೋಮವಾರ 6470 ರೂಪಾಯಿ ಇದ್ದ ಆಭರಣ ಚಿನ್ನದ ಬೆಲೆ ಮಂಗಳವಾರ 6565 ರೂಪಾಯಿಗೆ ಏರಿಕೆಯಾಗಿದೆ. ಒಂದು ಗ್ರಾಂ ಆಭರಣದ ಚಿನ್ನದ ಬೆಲೆಯಲ್ಲಿ 95 ರೂಪಾಯಿ ಏರಿಕೆಯಾಗಿದೆ. ಈ ವಾರದಲ್ಲಿ ಸತತ ಎರಡನೇ ದಿನ ಚಿನ್ನದ ಬೆಲೆ ಹೆಚ್ಚಾಗಿರುವುದು ಆಭರಣ ಪ್ರಿಯರಲ್ಲಿ ನಿರಾಸೆ ಮೂಡಿಸಿದೆ. ವರಮಹಾಲಕ್ಷ್ಮಿ ಹಬ್ಬದ ಹಿನ್ನಲೆಯಲ್ಲಿ ಚಿನ್ನ ಖರೀದಿ ಮಾಡಲು ಪ್ಲಾನ್ ಮಾಡಿದ್ದವರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ.

ಬೆಳ್ಳಿ ಬೆಲೆಯಲ್ಲಿ ಕುಸಿತ

ಚಿನ್ನದ ಬೆಲೆಯಲ್ಲಿ ಹೆಚ್ಚಳವಾದರೆ ಬೆಳ್ಳಿ ಬೆಲೆಯಲ್ಲಿ ಕುಸಿತ ಕಂಡಿದೆ. ಬೆಂಗಳೂರಿನಲ್ಲಿ ಮಂಗಳವಾರ ಬೆಳ್ಳಿ ಬೆಲೆಯಲ್ಲಿ 4,000 ರೂಪಾಯಿ ಕುಸಿತ ಕಂಡಿದೆ. ಸೋಮವಾರ 87,500 ರೂಪಾಯಿ ಇದ್ದ ಒಂದು ಕೆಜಿ ಬೆಳ್ಳಿ ಬೆಲೆ ಮಂಗಳವಾರ 83,500 ರೂಪಾಯಿಗೆ ಕುಸಿದಿದೆ.

ಹಿಂಡೆನ್‌ಬರ್ಗ್‌ ವರದಿಯ ಬಳಿಕ ಸೋಮವಾರ ಕುಸಿತ ಕಂಡಿದ್ದ ಷೇರು ಮಾರುಕಟ್ಟೆ ಮಂಗಳವಾರ ಕೂಡ ಕುಸಿತವನ್ನು ಮುಂದುವರೆಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+