Gold Rate: ಒಂದೇ ದಿನ ₹6000 ಏರಿಕೆ ಕಂಡ ಚಿನ್ನದ ಬೆಲೆ; ಬೆಳ್ಳಿ ಬೆಲೆ ಎಷ್ಟಿದೆ?

ಕಳೆದ ಕೆಲವು ದಿನದಿಂದ ಕುಸಿತ ಕಂಡಿದ್ದ ಚಿನ್ನದ ಬೆಲೆ ಮತ್ತೆ ಭರ್ಜರಿ ಏರಿಕೆ ಕಂಡಿದೆ. 89,000 ರೂಪಾಯಿಗಳಿಗಿಂತ ಕಡಿಮೆಯಾಗಿದ್ದ 10 ಗ್ರಾಂ ಅಪರಂಜಿ ಚಿನ್ನದ ಬೆಲೆ ಬುಧವಾರ ಮತ್ತೆ ಏರಿಕೆ ಕಂಡು 89,000 ರೂಪಾಯಿ ಗಡಿ ದಾಟುವತ್ತ ಮುನ್ನಡೆದಿದೆ. ಹಾಗಾದರೆ ಚಿನ್ನದ ಬೆಲೆ ಎಷ್ಟು ಹೆಚ್ಚಾಗಿದೆ ಎನ್ನುವ ಮಾಹಿತಿ ಇಲ್ಲಿದೆ.

ಜಾಗತಿಕವಾಗಿ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದ್ದು ಹೂಡಿಕೆದಾರರು ಚಿನ್ನದ ಮೇಲೆ ಹೂಡಿಕೆಗೆ ಆಸಕ್ತಿ ತೋರಿಸುತ್ತಿದ್ದಾರೆ. ಆಭರಣ ವ್ಯಾಪಾರಿಗಳು ಮತ್ತು ಹೂಡಿಕೆದಾರರ ಖರೀದಿ ಹೆಚ್ಚಳ ಮತ್ತು ಜಾಗತಿಕವಾಗಿ ಚಿನ್ನದ ಮೇಲೆ ಹೂಡಿಕೆ ಹೆಚ್ಚಳದಿಂದ ಬೆಲೆ ಹೆಚ್ಚಳವಾಗಿದೆ.

gold rate rise 6000 on march 5th here the silver price details

24 ಕ್ಯಾರಟ್ ಶುದ್ಧ ಚಿನ್ನದ ಬೆಲೆ 10 ಗ್ರಾಂಗೆ 600 ರೂಪಾಯಿ ಏರಿಕೆಯಾಗಿದ್ದು ₹87,980 ತಲುಪಿದೆ. ಮಾರ್ಚ್ 4ರಂದು ಮಂಗಳವಾರ ಕೂಡ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 550 ರೂಪಾಯಿ ಏರಿಕೆ ಕಂಡಿತ್ತು. ಎರಡೇ ದಿನದಲ್ಲಿ 10 ಗ್ರಾಂ ಚಿನ್ನದ ಬೆಲೆ 1150 ರೂಪಾಯಿ ಏರಿಕೆಯಾಗಿದೆ.

ಷೇರು ಮಾರುಕಟ್ಟೆ ನಿರಂತರವಾಗಿ ಕುಸಿಯುತ್ತಿದ್ದರೂ ಚಿನ್ನದ ಮೆಲೆ ಹೆಚ್ಚಾಗುತ್ತಲೇ ಇದೆ. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಫ್ ಸುಂಕ ಹೆಚ್ಚಿಸುವ ಭೀತಿಯ ನಡುವೆ ಜಾಗತಿಕವಾಗಿ ಹಲವು ಮಾರುಕಟ್ಟೆಗಳು ಕುಸಿತ ಕಂಡಿವೆ. ಮಾರುಕಟ್ಟೆ ಏರಿಳಿತ ಕಾಣುವಾಗ ಹೂಡಿಕೆದಾರರು ಚಿನ್ನದ ಮೇಲಿನ ಹೂಡಿಕೆಯನ್ನು ಸುರಕ್ಷಿತ ಎಂದು ಭಾವಿಸುವುದು ಸಾಮಾನ್ಯವಾಗಿದೆ.

ಚಿನ್ನದ ಬೆಲೆ ಎಷ್ಟಿದೆ?

ಬೆಂಗಳೂರಿನಲ್ಲಿ ಮಂಗಳವಾರ 8,738 ರೂಪಾಯಿ ಇದ್ದ 1 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ ಬುಧವಾರ 8,978 ರೂಪಾಯಿ ಆಗಿತ್ತು. ಪ್ರತಿ ಗ್ರಾಂ ಚಿನ್ನಕ್ಕೆ 60 ರೂಪಾಯಿ ಏರಿಕೆಯಾಗಿದೆ. 10 ಗ್ರಾಂ ಶುದ್ಧ ಚಿನ್ನದ ಬೆಲೆ 600 ರೂಪಾಯಿ ಏರಿಕೆಯಾಗಿ ₹87,980 ರಲ್ಲಿ ವಹಿವಾಟು ನಡೆಸಿದೆ.

ಮಂಗಳವಾರ ₹8,010 ಇದ್ದ 1 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 55 ರೂಪಾಯಿ ಏರಿಕೆ ಕಂಡು ಬುಧವಾರ 8,065 ರೂಪಾಯಿಗೆ ಮಾರಾಟವಾಗಿದೆ. 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 550 ರೂಪಾಯಿ ಏರಿಕೆಯಾಗಿದ್ದು 80,650 ರೂಪಾಯಿಗೆ ಮಾರಾಟವಾಗಿದೆ.

ಬೆಳ್ಳಿ ಬೆಲೆ ಎಷ್ಟಿದೆ?

ಒಂದು ಕಡೆ ಚಿನ್ನದ ಬೆಲೆ ಏರಿಕೆಯಾಗಿದ್ದರೆ ಮತ್ತೊಂದು ಕಡೆ ಬೆಳ್ಳಿ ಬೆಲೆ ಬುಧವಾರ ಸ್ಥಿರತೆ ಕಾಯ್ದುಕೊಂಡಿದೆ. ಮಂಗಳವಾರ 98,000 ರೂಪಾಯಿ ಇದ್ದ ಒಂದು ಕೆ.ಜಿ ಬೆಳ್ಳಿ ಬೆಲೆ ಬುಧವಾರ ಕೂಡ ಅದೇ ಬೆಲೆಯಲ್ಲಿ ವಹಿವಾಟು ನಡೆಸಿದೆ.

ಜಾಗತಿಕವಾಗಿ ಷೇರುಮಾರುಕಟ್ಟೆ ಕುಸಿತ ಕಾಣುತ್ತಿರುವಾಗ ಚಿನ್ನ ಹೂಡಿಕೆದಾರರ ಪಾಲಿಗೆ ವರದಾನವಾಗಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+