Gold Rate Oct 26: ಅಕ್ಟೋಬರ್ 26 ವಾರಾಂತ್ಯ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ?
Gold Rate Oct 26: ಚಿನ್ನದ ಮೇಲೆ ಜನ ಸುರಕ್ಷತೆಯ ದೃಷ್ಟಿಯಿಂದ ಹೂಡಿಕೆ ಮಾಡುತ್ತಾರೆ. ಚಿನ್ನ ಯಾವುದಾದರೂ ಸಮಯದಲ್ಲಿ ಬೆಲೆ ಏರಿಕೆಯಾಗಬಹುದು, ಸಂಕಷ್ಟದ ಸಮಯದಲ್ಲಿ ಚಿನ್ನದಿಂದ ಸಹಾಯವಾಗಲಿದೆ ಹಾಗೂ ಬೆಸ್ಟ್ ಹೂಡಿಕೆ ಎನ್ನುವುದು ಸೇರಿದಂತೆ ಹಲವು ಕಾರಣಗಳಿಗೆ ಜನ ಚಿನ್ನ ಖರೀದಿ ಮಾಡುವುದು ಇದೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಚಿನ್ನದ ಬೆಲೆಯು ಮೂರು ಪಟ್ಟು ಹೆಚ್ಚಳವಾಗಿದೆ. ಇದೀಗ ಚಿನ್ನದ ಬೆಲೆ ಇನ್ನೂ ಏರಿಕೆಯ ಹಾದಿಯಲ್ಲಿ ಸಾಗಿದ್ದು ಮಾಸಾಂತ್ಯದಲ್ಲಿ ಚಿನ್ನದ ಬೆಲೆ ಸ್ಥಿರವಾಗಿದೆ. ತಿಂಗಳ ಕೊನೆಯ ವಾರದಲ್ಲಿ ಚಿನ್ನದ ಬೆಲೆಯಲ್ಲಿ ಹೆಚ್ಚೇನು ಬದಲಾವಣೆಗಳು ಆಗಿಲ್ಲ.
ಇನ್ನು ಇತ್ತೀಚಿನ ದಿನಗಳಲ್ಲಿ ಬೆಳ್ಳಿಯ ಮೇಲೆ ಸಹ ಹೂಡಿಕೆ ಮಾಡುವುದು ಹೆಚ್ಚಾಗಿದೆ. ಇನ್ನು ಕಳೆದ ವಾರ ಪ್ರಾರಂಭದಲ್ಲಿ ಇಳಿಕೆಯಾಗಿದ್ದ ಚಿನ್ನದ ಬೆಲೆಯು ವಾರಾಂತ್ಯದ ವೇಳೆಗೆ ಹೆಚ್ಚಾಗಿದೆ. ಇಂದಿನ (ಅಕ್ಟೋಬರ್ 26ರ) ಚಿನ್ನ ಮತ್ತು ಬೆಳ್ಳಿಯ ನಿಖರ ಬೆಲೆ ಎಷ್ಟಿದೆ ಎನ್ನುವ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ: ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆಯು 1 ಗ್ರಾಂಗೆ 12,562 ರೂಪಾಯಿ ಆಗಿದೆ. ಶನಿವಾರವೂ ಸಹ 12,562 ರೂ. ಇತ್ತು. ಅದೇ ಬೆಲೆ ಮುಂದುವರಿದಿದೆ. ಇನ್ನು 24 ಕ್ಯಾರೆಟ್‌ನ 8 ಗ್ರಾಂ ಚಿನ್ನದ ಬೆಲೆ 1,00,496 ರೂಪಾಯಿ ಆಗಿದೆ. ಇನ್ನು 10 ಗ್ರಾಂ ಚಿನ್ನದ ಬೆಲೆಯು ಭಾನುವಾರ 1,25,620 ರೂಪಾಯಿ ಇದೆ. ನೆನ್ನೆ ಸಹ ಇದೇ ಬೆಲೆ ಇತ್ತು. ಇನ್ನು 100 ಗ್ರಾಂ ಚಿನ್ನದ ಬೆಲೆಯು ಅಕ್ಟೋಬರ್ 26ರಂದು 12,56,200 ರೂಪಾಯಿ ಆಗಿದೆ. 100 ಗ್ರಾಂ ಚಿನ್ನದ ಬೆಲೆಯೂ ಯಥಾಸ್ಥಿತಿ ಮುಂದುವರಿದಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ: ಇನ್ನು 22 ಕ್ಯಾರೆಟ್ ಚಿನ್ನದ ಬೆಲೆಯು 1 ಗ್ರಾಂಗೆ 11,515 ರೂಪಾಯಿ ಆಗಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆಯು 92,120 ರೂಪಾಯಿ ಆಗಿದೆ. 10 ಗ್ರಾಂನ ಚಿನ್ನ ಬೆಲೆಯು 1,15,150 ರೂಪಾಯಿ ಆಗಿದೆ. ಇನ್ನು ಕ್ಯಾರೆಟ್‌ನ 100 ಗ್ರಾಂ ಚಿನ್ನದ ಬೆಲೆ 11,51,500 ರೂಪಾಯಿ ಆಗಿದೆ. ಇನ್ನು 22 ಕ್ಯಾರೆಟ್‌ನ 1,8, 10 ಗ್ರಾಂ ಮತ್ತು 100 ಗ್ರಾಂ ಚಿನ್ನದ ಬೆಲೆಯು ಯಥಾಸ್ಥಿತಿ ಮುಂದುವರಿದಿದೆ.
18 ಕ್ಯಾರೆಟ್ ಚಿನ್ನದ ಬೆಲೆ ಹೇಗಿದೆ: ಇನ್ನು ಬೆಂಗಳೂರಿನಲ್ಲಿ 18 ಕ್ಯಾರೆಟ್‌ನ ಚಿನ್ನದ ಬೆಲೆಯು 1 ಗ್ರಾಂಗೆ 9,422 ರೂಪಾಯಿಯಾಗಿದೆ. 8 ಗ್ರಾಂ ಚಿನ್ನದ ಬೆಲೆ 75,376 ರೂಪಾಯಿ ಆಗಿದೆ. 10 ಗ್ರಾಂಗೆ 94,220 ರೂಪಾಯಿ ಆಗಿದೆ. 100 ಗ್ರಾಂ ಚಿನ್ನದ ಬೆಲೆ 9,42,200 ರೂಪಾಯಿ ಆಗಿದೆ. ಇನ್ನು ನೆನ್ನೆಯ ಬೆಲೆಗೆ ಹೋಲಿಕೆ ಮಾಡಿದರೆ ಚಿನ್ನದ ಬೆಲೆಯಲ್ಲಿ ಯಾವುದೇ ಮಹತ್ವದ ಬದಲಾವಣೆಗಳು ಸಹ ಆಗಿಲ್ಲ.
ಬೆಳ್ಳಿ ಬೆಲೆ ಹೇಗಿದೆ: ಕಳೆದ ಕೆಲವು ದಿನಗಳಿಂದ ಬೆಳ್ಳಿಯ ಬೆಲೆ ಸಹ ಹೆಚ್ಚಳವಾಗುತ್ತಿತ್ತು. ಆದರೆ ಇದೀಗ ಬೆಳ್ಳಿ ಬೆಲೆ ಏರಿಳಿತ ಕಾಣುತ್ತಿದೆ. ನೆನ್ನೆಗೆ ಹೋಲಿಕೆ ಮಾಡಿದರೆ ಬೆಳ್ಳಿ ಬೆಲೆಯಲ್ಲಿ ಯಾವುದೇ ಮಹತ್ವದ ಬದಲಾವಣೆಗಳು ಆಗಿಲ್ಲ. ಬೆಳ್ಳಿ ಬೆಲೆಯು 1 ಗ್ರಾಂ 157 ರೂಪಾಯಿ ಆಗಿದೆ. ಅದೇ ರೀತಿ ಬೆಳ್ಳಿ ಬೆಲೆಯು 8 ಗ್ರಾಂಗೆ 1,256 ರೂಪಾಯಿ ಆಗಿದೆ. ಇನ್ನು 10 ಗ್ರಾಂ ಬೆಳ್ಳಿ ಬೆಲೆ 1,570 ರೂಪಾಯಿ ಆಗಿದೆ. 100 ಮತ್ತು 1000 ಗ್ರಾಂ ಬೆಳ್ಳಿ ಬೆಲೆ ಅನುಕ್ರಮವಾಗಿ 15,700 ಹಾಗೂ 1,57,000 ರೂಪಾಯಿ ಆಗಿದೆ.












Click it and Unblock the Notifications