Gold Rate May 19: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬದಲಾವಣೆ: ಲೋಹ ಪ್ರಿಯರಿಗೆ 50 - 50

Gold Rate May 19: ಚಿನ್ನದ ಬೆಲೆಯು ಮೇ 19ರ ಮಂಗಳವಾರ ಭಾರೀ ಹೆಚ್ಚಳವಾಗಿದೆ. ಕೇಂದ್ರ ಸರ್ಕಾರ - ಪ್ರಧಾನಿ ನರೇಂದ್ರ ಮೋದಿ ಅವರು ಚಿನ್ನವನ್ನು ಖರೀದಿ ಮಾಡಬೇಡಿ ಎಂದು ಹೇಳಿದ ಮೇಲೆ ನಿರಂತರವಾಗಿ ಚಿನ್ನದ ಬೆಲೆಯು ಹೆಚ್ಚಳವಾಗುತ್ತಿದೆ. ಹಲವರು ಚಿನ್ನದ ಬೆಲೆ ಮುಂದಿನ ದಿನಗಳಲ್ಲಿ ಹೆಚ್ಚಾಗಬಹುದು ಎನ್ನುವ ಆತಂಕದಿಂದ ಇನ್ನಷ್ಟು ಚಿನ್ನವನ್ನು ಖರೀದಿ ಮಾಡುತ್ತಿದ್ದಾರೆ. ಅಲ್ಲದೆ ಈ ನಡುವೆ ಬಂಗಾರ ಖರೀದಿಸಬೇಡಿ ಅಂತ ಹೇಳಿದ ಬೆನ್ನಲ್ಲೇ, ಚಿನ್ನ ಮತ್ತು ಬೆಳ್ಳಿ ಖರೀದಿಗೆ ಕೇಂದ್ರ ಸರ್ಕಾರವು ಅಂಕುಶ ಹಾಕಿದೆ.

ಚಿನ್ನದ ಮೇಲಿನ ಆಮದು ಸುಂಕವನ್ನು ಶೇ.6 ರಿಂದ ಶೇ.15ಕ್ಕೆ ಏರಿಸಲಾಗಿದೆ. ಇದು, ನೇರವಾಗಿ ಚಿನ್ನಬೆಳ್ಳಿ ಆಮದಿನ ಮೇಲೆ ಪರಿಣಾಮ ಬೀರಲಿದೆ. ಇದರ ಬೆನ್ನಲ್ಲೇ ನಿರಂತರವಾಗಿ ಚಿನ್ನ ಮತ್ತು ಬೆಳ್ಳಿಯ ಬೆಲೆಯು ಹೆಚ್ಚಳವಾಗುತ್ತಿದೆ. ಮಂಗಳವಾರ 18, 22 ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿದೆ. ಚಿನ್ನದೊಂದಿಗೆ ಬೆಳ್ಳಿ ಬೆಲೆಯಲ್ಲೂ ನಿರಂತರವಾಗಿ ಹೆಚ್ಚಳವಾಗುತ್ತಿತ್ತು. ಆದರೆ, ಮೇ19ರ ಮಂಗಳವಾರ ಬೆಳ್ಳಿ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿದೆ. ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆಯ ನಿಖರ ವಿವರ ಇಲ್ಲಿದೆ.

Gold Rate May 19

18 ಕ್ಯಾರೆಟ್ ಚಿನ್ನದ ಬೆಲೆ: 18 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 11,778 ರೂ. 10 ಗ್ರಾಂ ಚಿನ್ನದ ಬೆಲೆಯು 1,17,780 ರೂ. ಆಗಿದೆ. ಸೋಮವಾರಕ್ಕೆ ಹೋಲಿಕೆ ಮಾಡಿದರೆ 18 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆಯು 61 ರೂಪಾಯಿ ಹಾಗೂ 10 ಗ್ರಾಂ ಚಿನ್ನದ ಬೆಲೆಯು 610 ರೂಪಾಯಿ ಹೆಚ್ಚಳವಾಗಿದೆ.

22 ಕ್ಯಾರೆಟ್ ಚಿನ್ನದ ಬೆಲೆ: 22 ಕ್ಯಾರೆಟ್ ಚಿನ್ನದ ಬೆಲೆಯು 1 ಗ್ರಾಂಗೆ 14,395 ರೂಪಾಯಿ ಆಗಿದೆ. 10 ಗ್ರಾಂ ಚಿನ್ನದ ಬೆಲೆಯು 1,43,950 ರೂ. ಆಗಿದೆ. 1 ಗ್ರಾಂ ಚಿನ್ನದ ಬೆಲೆಯು 75 ರೂಪಾಯಿ ಹಾಗೂ 10 ಗ್ರಾಂ ಚಿನ್ನದ ಬೆಲೆಯು 750 ರೂಪಾಯಿ ಹೆಚ್ಚಳವಾಗಿದೆ.

24 ಕ್ಯಾರೆಟ್ ಚಿನ್ನದ ಬೆಲೆ: ಇನ್ನು 24 ಕ್ಯಾರೆಟ್ ಚಿನ್ನದ ಬೆಲೆಯು 1 ಗ್ರಾಂಗೆ 15,704 ರೂಪಾಯಿ ಆಗಿದೆ. 10 ಗ್ರಾಂ ಚಿನ್ನದ ಬೆಲೆಯು 1,57,040 ರೂ. ಆಗಿದೆ. ಸೋಮವಾರಕ್ಕೆ ಹೋಲಿಕೆ ಮಾಡಿದರೆ, 1 ಗ್ರಾಂ ಚಿನ್ನದ ಬೆಲೆಯು 82 ರೂಪಾಯಿ ಹಾಗೂ 10 ಗ್ರಾಂನ ಮೇಲೆ 820 ರೂಪಾಯಿ ಹೆಚ್ಚಳವಾಗಿದೆ.

Gold: ಚಿನ್ನದ ವಿಚಾರದ ಬಗ್ಗೆ ಖ್ಯಾತ ಜ್ಯೋತಿಷಿಯ ವೈರಲ್ ಪೋಸ್ಟ್‌: ಕೇಂದ್ರ ಸರ್ಕಾರದಿಂದಲೇ ಉತ್ತರ, ಜನ ಸಾಮಾನ್ಯರಿಗೆ ಸಂದೇಶ
Gold: ಚಿನ್ನದ ವಿಚಾರದ ಬಗ್ಗೆ ಖ್ಯಾತ ಜ್ಯೋತಿಷಿಯ ವೈರಲ್ ಪೋಸ್ಟ್‌: ಕೇಂದ್ರ ಸರ್ಕಾರದಿಂದಲೇ ಉತ್ತರ, ಜನ ಸಾಮಾನ್ಯರಿಗೆ ಸಂದೇಶ

Gold Rate May 19: ಬೆಳ್ಳಿ ಬೆಲೆ ಭರ್ಜರಿ ಇಳಿಕೆ

ಇನ್ನು ಸಾಮಾನ್ಯವಾಗಿ ಚಿನ್ನದ ಬೆಲೆ ಹೆಚ್ಚಳವಾಗುವ ಸಂದರ್ಭದಲ್ಲಿ ಬೆಳ್ಳಿ ಬೆಲೆಯೂ ಸಹ ಹೆಚ್ಚಳವಾಗುತ್ತಿತ್ತು. ಇದೀಗ ಚಿನ್ನದ ಬೆಲೆ ಹೆಚ್ಚಳವಾದರೂ ಬೆಳ್ಳಿ ಬೆಲೆಯು ಭರ್ಜರಿ ಇಳಿಕೆಯಾಗಿದೆ. ಬೆಳ್ಳಿ ಬೆಲೆಯು ಪ್ರತಿ ಗ್ರಾಂಗೆ 285 ರೂಪಾಯಿ ಹಾಗೂ ಪ್ರತಿ ಕೆ.ಜಿ ಬೆಳ್ಳಿ ಬೆಲೆಯು 2,85,000 ರೂ. ಆಗಿದೆ. ಬೆಳ್ಳಿಯ ಬೆಲೆಯಲ್ಲಿ ಪ್ರತಿ ಗ್ರಾಂಗೆ 5 ರೂಪಾಯಿ ಹಾಗೂ ಒಂದು ಕೆ.ಜಿ ಬೆಳ್ಳಿ ಬೆಲೆಯಲ್ಲಿ 5000 ರೂಪಾಯಿ ಭರ್ಜರಿ ಇಳಿಕೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+