Gold Rate Jan 8: ಚಿನ್ನ ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್, ಚಿನ್ನ - ಬೆಳ್ಳಿ ಬೆಲೆ ಇಳಿಕೆ

ಚಿನ್ನ ಪ್ರಿಯರಿಗೆ ಸುದೀರ್ಘ ಒಂದು ವಾರದ ನಂತರ ಗುಡ್‌ನ್ಯೂಸ್ ಸಿಕ್ಕಿದೆ. ಕಳೆದ ಒಂದು ವಾರದಿಂದಲೂ ಚಿನ್ನದ ಬೆಲೆ ನಿರಂತರವಾಗಿ ಹೆಚ್ಚಳವಾಗುತ್ತಿತ್ತು. ಇದೀಗ ಕೊನೆಗೂ ಗುರುವಾರ ಜನವರಿ 8ರಂದು ಚಿನ್ನ ಮತ್ತು ಬೆಳ್ಳಿ ಬೆಲೆಯು ಭರ್ಜರಿ ಇಳಿಕೆಯಾಗಿದೆ. ಅಮೆರಿಕಾ - ವೆನೆಜುವೆಲಾ ಸಂಘರ್ಷದ ನಂತರ, ಅಮೆರಿಕಾ ಹಾಗೂ ರಷ್ಯಾದ ನಡುವೆ ಸಂಘರ್ಷ ಏರ್ಪಡುವ ಮುನ್ಸೂಚನೆ ಸಿಕ್ಕಿದೆ. ರಷ್ಯಾದ ತೈಲ ಹಡಗನ್ನು ಅಮೆರಿಕಾದ ನೌಕಾಪಡೆಗಳು ವಶಪಡಿಸಿಕೊಂಡಿರುವುದು ಹೊಸ ಆತಂಕಕ್ಕೆ ಕಾರಣವಾಗಿದೆ. ಈ ರೀತಿ ಇರುವಾಗ ಅಚ್ಚರಿಯಂತೆ ಚಿನ್ನ ಮತ್ತು ಬೆಳ್ಳಿ ಬೆಲೆಯು ಭರ್ಜರಿ ಇಳಿಕೆಯಾಗಿದೆ. ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆಯ ವಿವರ ನೋಡೋಣ.

24 ಕ್ಯಾರೆಟ್ ಚಿನ್ನದ ಬೆಲೆ: 24 ಕ್ಯಾರೆಟ್‌ನ ಒಂದು ಗ್ರಾಂನ ಚಿನ್ನದ ಬೆಲೆಯು 13,800 ರೂಪಾಯಿ ಆಗಿದೆ. 10 ಗ್ರಾಂನ ಚಿನ್ನದ ಬೆಲೆಯು 1,38,000 ಸಾವಿರ ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ 24 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 27 ರೂಪಾಯಿ ಹಾಗೂ 10 ಗ್ರಾಂನ ಚಿನ್ನದ ಬೆಲೆಯು 270 ರೂಪಾಯಿ ಕಡಿಮೆಯಾಗಿದೆ.

Gold Rate Jan 8 Bengaluru Big Relief for Buyers as Gold and Silver Prices Fall

22 ಕ್ಯಾರೆಟ್ ಚಿನ್ನದ ಬೆಲೆ: ಇನ್ನು 22 ಕ್ಯಾರೆಟ್‌ನ ಚಿನ್ನದ ಬೆಲೆಯಲ್ಲೂ ಇಳಿಕೆ ಕಂಡು ಬಂದಿದೆ. 22 ಕ್ಯಾರೆಟ್‌ನ ಒಂದು ಗ್ರಾಂನ ಚಿನ್ನದ ಬೆಲೆಯು 12,650 ರೂಪಾಯಿ ಹಾಗೂ 10 ಗ್ರಾಂನ ಚಿನ್ನದ ಬೆಲೆಯು 1,26,500 ರೂಪಾಯಿ ಆಗಿದೆ. ಬುಧವಾರಕ್ಕೆ ಹೋಲಿಕೆ ಮಾಡಿದರೆ ಒಂದು ಗ್ರಾಂನ ಚಿನ್ನದ ಬೆಲೆಯು 25 ರೂಪಾಯಿ ಹಾಗೂ 10 ಗ್ರಾಂನ ಮೇಲೆ 250 ರೂಪಾಯಿ ಕಡಿಮೆಯಾಗಿದೆ.

18 ಕ್ಯಾರೆಟ್ ಚಿನ್ನದ ಬೆಲೆ: 18 ಗ್ರಾಂನ ಒಂದು ಗ್ರಾಂ ಚಿನ್ನದ ಬೆಲೆಯು ಜನವರಿ 8ರಂದು 10,350 ರೂಪಾಯಿ ಆಗಿದೆ. 10 ಗ್ರಾಂ ಚಿನ್ನದ ಬೆಲೆಯು 1,03,500 ರೂಪಾಯಿ ಆಗಿದೆ. ಜನವರಿ 7ಕ್ಕೆ ಹೋಲಿಕೆ ಮಾಡಿದರೆ 18 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 21 ರೂಪಾಯಿ ಹಾಗೂ 10 ಗ್ರಾಂ ಚಿನ್ನದ ಬೆಲೆಯು 210 ರೂಪಾಯಿ ಕಡಿಮೆಯಾಗಿದೆ.

ಬೆಳ್ಳಿ ಬೆಲೆಯಲ್ಲೂ ಭರ್ಜರಿ ಇಳಿಕೆ

ಇನ್ನು ಚಿನ್ನದೊಂದಿಗೆ ಬೆಳ್ಳಿ ಬೆಲೆಯಲ್ಲೂ ಭರ್ಜರಿ ಇಳಿಕೆ ಕಂಡಿದೆ. ಬೆಳ್ಳಿ ಬೆಲೆಯು ಒಂದು ಗ್ರಾಂಗೆ 252 ರೂಪಾಯಿ ಆಗಿದೆ. ಒಂದು ಕೆ.ಜಿ ಬೆಳ್ಳಿ ಬೆಲೆಯು 2,52,000 ಸಾವಿರ ರೂಪಾಯಿ ಆಗಿದೆ. ಜನವರಿ 7ಕ್ಕೆ ಹೋಲಿಕೆ ಮಾಡಿದರೆ ಒಂದು ಗ್ರಾಂನ ಬೆಳ್ಳಿ ಬೆಲೆಯು 5 ರೂಪಾಯಿ ಕಡಿಮೆಯಾಗಿದೆ. ಅಲ್ಲದೇ ಒಂದು ಕೆ.ಜಿ ಬೆಳ್ಳಿಯ ಮೇಲೆ 5000 ಸಾವಿರ ರೂಪಾಯಿ ಕಡಿಮೆಯಾಗಿದೆ.

ಚಿನ್ನ ಮತ್ತು ಬೆಳ್ಳಿ ಬೆಲೆ ಹೆಚ್ಚಾಗುವ ಸಾಧ್ಯತೆ

ಇನ್ನು ಅಮೆರಿಕಾ ಹಾಗೂ ರಷ್ಯಾದ ನಡುವೆ ಎದುರಾಗಿರುವ ಸಂಘರ್ಷದಿಂದ ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಈಗಾಗಲೇ ಚಿನ್ನ ಮತ್ತು ಬೆಳ್ಳಿ ಬೆಲೆಯು ಸಾಕಷ್ಟು ಹೆಚ್ಚಳವಾಗಿದ್ದು, ಡೊನಾಲ್ಡ್‌ ಟ್ರಂಪ್ ನೀತಿಗಳಿಂದ ಮುಂದಿನ ದಿನಗಳಲ್ಲಿ ಚಿನ್ನ ಇನ್ನಷ್ಟು ದುಬಾರಿ ಆಗುವ ಸಾಧ್ಯತೆ ದಟ್ಟವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+