Gold Rate Today: ಚಿನ್ನ ಖರೀದಿದಾರರಿಗೆ ಸದ್ಯದಲ್ಲೇ ಬಿಗ್‌ ಶಾಕ್‌, ಇಂದಿನ ದರ ಎಷ್ಟಿದೆ ನೋಡಿ

ಪಿತೃಪಕ್ಷ ಇದ್ದ ಕಾರಣ ಎರಡು ವಾರಗಳಿಂದ ಚಿನ್ನ ಹಾಗೂ ಬೆಳ್ಳಿಯ ದರವು ತುಸು ಏರಿಳಿತ ಕಂಡಿತ್ತು. ಪಿತೃಪಕ್ಷದ ಕೊನೆಯ ದಿನವಾದ ಇಂದು ಮಹಾಲಯ ಅಮಾವಾಸ್ಯೆ ಆಚರಣೆಗಳನ್ನ ಪಾಲಿಸಲಾಗುತ್ತದೆ. ಹಾಗಾಗಿ ಈ ದಿನ ಚಿನ್ನ ಖರೀದಿಗೆ ಗ್ರಾಹಕರು ಮುಂದಾಗುವುದಿಲ್ಲ. ಆದರೂ ನಿನ್ನೆ ಚಿನ್ನದ ದರವು ಭಾರೀ ಏರಿಕೆ ಕಂಡಿತ್ತು. ಇಂದು ಬೆಂಗಳೂರು ಸೇರಿದಂತೆ ವಿವಿಧೆಡೆ 24 ಕ್ಯಾರೆಟ್, 22 ಕ್ಯಾರೆಟ್, 18 ಕ್ಯಾರೆಟ್ ಹಾಗೂ ಬೆಳ್ಳಿ ದರಗಳು ಎಷ್ಟಿದೆ? ಎನ್ನುವ ಮಾಹಿತಿ ಇಲ್ಲಿದೆ..

ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹11,215, 22 ಕ್ಯಾರೆಟ್ ಚಿನ್ನಕ್ಕೆ ₹10,280 ಮತ್ತು 18 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹8,411 ಆಗಿದೆ. ಗ್ರಾಂ.ಮೇಲೆ 82 ರೂಪಾಯಿವರೆಗೆ ಏರಿಕೆ ಕಂಡಿತ್ತು. ಬೆಂಗಳೂರಿನಲ್ಲಿ ಇಂದಿನ 24 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹11,215, 8 ಗ್ರಾಂ. ಚಿನ್ನದ ದರ ₹89,720, 10 ಗ್ರಾಂ. ಚಿನ್ನದ ದರ ₹1,12,150, 100 ಗ್ರಾಂ. ಚಿನ್ನದ ದರ ₹11,21,500 ಆಗಿದ್ದು, ನಿನ್ನೆ ಬರೋಬ್ಬರಿ ₹8,200 ಏರಿಕೆ ಕಂಡಿದ್ದ ದರವು ಇಂದು ಯತಾಸ್ಥಿತಿಯಲ್ಲಿದೆ.

gold-rate-india-bengaluru-today-september-21-2025

ಬೆಂಗಳೂರಿನಲ್ಲಿ ಇಂದಿನ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹10,280, 8 ಗ್ರಾಂ. ಚಿನ್ನದ ದರ ₹82,240, 10 ಗ್ರಾಂ. ಚಿನ್ನದ ದರ ₹1,02,800, 100 ಗ್ರಾಂ. ಚಿನ್ನದ ದರ ₹10,28,000 ಆಗಿದೆ. ಮೊನ್ನೆಗೆ ಹೋಲಿಸಿದರೆ ಈ ದರ ₹7,500ಗೆ ಏರಿಕೆಯಾಗಿತ್ತು. ಬೆಂಗಳೂರಿನಲ್ಲಿ ಇಂದಿನ 18 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹8,411, 8 ಗ್ರಾಂ. ಚಿನ್ನದ ದರ ₹67,288, 10 ಗ್ರಾಂ. ಚಿನ್ನದ ದರ ₹84,110, 100 ಗ್ರಾಂ. ಚಿನ್ನದ ದರ ₹8,41,100 ಆಗಿದ್ದು, ಬರೋಬ್ಬರಿ ₹6,100 ಹೆಚ್ಚಳ ಕಂಡಿದ್ದು, ಇಂದು ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ.

ಬೆಂಗಳೂರಿನಲ್ಲಿ ಕಳೆದ 10 ದಿನಗಳ ಚಿನ್ನದ ದರಪಟ್ಟಿ (ಗ್ರಾಂ.ಗೆ)

ದಿನಾಂಕ: 24 ಕ್ಯಾರೆಟ್ ಚಿನ್ನ; 22 ಕ್ಯಾರೆಟ್ ಚಿನ್ನ

ಸೆಪ್ಟೆಂಬರ್ 21, ₹11,215 ; ₹10,280

ಸೆಪ್ಟೆಂಬರ್ 20, ₹11,215 ; ₹10,280

ಸೆಪ್ಟೆಂಬರ್ 19, ₹11,133 ; ₹10,205

ಸೆಪ್ಟೆಂಬರ್ 18, ₹11,117 ; ₹10,190

ಸೆಪ್ಟೆಂಬರ್ 17, ₹11,171 ; ₹10,240

ಸೆಪ್ಟೆಂಬರ್ 16, ₹11,193 ; ₹10,260

ಸೆಪ್ಟೆಂಬರ್ 15, ₹11,106 ; ₹10,180

ಸೆಪ್ಟೆಂಬರ್ 14, ₹11,117 ; ₹11,117

ಸೆಪ್ಟೆಂಬರ್ 13, ₹11,117 ; ₹10,190

ಸೆಪ್ಟೆಂಬರ್ 12, ₹11,128 ; ₹10,200

ಬೆಳ್ಳಿ-ಪ್ಲಾಟಿನಂ ದರ ಎಷ್ಟು?

ಬೆಂಗಳೂರಿನಲ್ಲಿ ಇಂದು ಕೂಡ ಬೆಳ್ಳಿಯ ಬೆಲೆ ಇಳಿಕೆ ಕಂಡಿದ್ದು, ಪ್ರತಿ ಗ್ರಾಂಗೆ ₹133.60 ಮತ್ತು ಪ್ರತಿ ಕಿಲೋ.ಗ್ರಾಂಗೆ ₹1,33,600 ಆಗಿದೆ. ನಿನ್ನೆಯಿಂದಲೂ ಇದೇ ದರ ಮುಂದುವರಿದಿದೆ. ಬೆಂಗಳೂರಿನಲ್ಲಿ ಇಂದು ಪ್ಲಾಟಿನಂ ಬೆಲೆ ಪ್ರತಿ ಗ್ರಾಂಗೆ ₹ 3,976 ಮತ್ತು 10 ಗ್ರಾಂಗೆ ₹39,760 ಆಗಿದೆ. ಚಿನ್ನದ ದರವು ನಿಂತರವಾಗಿ ಏರಿಕೆ ಕಾಣುತ್ತಿದ್ದು, ಪಿತೃಪಕ್ಷ ಕೂಡ ಮುಗಿಯುತ್ತಿರುವುದರಿಂದ ದರಗಳು ಮತ್ತಷ್ಟು ಏರುವ ನಿರೀಕ್ಷೆ ಇದೆ. ಇಂದು ಮಹಾಲಯ ಅಮಾವಾಸ್ಯೆ ಇರುವುದರಿಂದ ನಾಳೆಯಿಂದ ದರಗಳು ಮತ್ತೆ ಏರುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+