• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶುಕ್ರವಾರದಂದು ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ!

|

ನವದೆಹಲಿ, ನವೆಂಬರ್ 16 : ಸ್ಥಳೀಯ ಆಭರಣಗಾರರಿಂದ ಬೇಡಿಕೆ ತಗ್ಗಿರುವುದರಿಂದ ಹಳದಿ ಲೋಹದ ಬೆಲೆಯಲ್ಲಿ ಶುಕ್ರವಾರ(ನವೆಂಬರ್ 16)ದಂದು ಇಳಿಕೆ ಕಂಡು ಬಂದಿದೆ. ಆದರೆ, ಬೆಳ್ಳಿ ದರದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ.

ದೆಹಲಿ ಚಿನಿವಾರಪೇಟೆಯಲ್ಲಿ ಬಂಗಾರದ ಬೆಲೆ ಶುಕ್ರವಾರದಂದು 235 ರೂಪಾಯಿ ಇಳಿಕೆಯಾಗಿ 10ಗ್ರಾಂಗೆ 32,015 ರು ಆಗಿದೆ. ಗುರುವಾರ ಬಂಗಾರದ ಬೆಲೆಯಲ್ಲಿ 350 ರೂಪಾಯಿ ಹೆಚ್ಚಳ ಕಂಡು ಬಂದಿತ್ತು. ಬೆಳ್ಳಿ ಬೆಲೆ 1 ಕೆಜಿಗೆ 37,900 ರು ನಷ್ಟಿದೆ.

ಪ್ರತಿ 10 ಗ್ರಾಮ್ ಚಿನ್ನದ ಬೆಲೆ 350 ರುಪಾಯಿ ಏರಿಕೆ, ಬೆಳ್ಳಿಯೂ ಏರಿತು

ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು 71.92ರು ಪ್ರತಿ ಡಾಲರ್ ನಷ್ಟಿದೆ. ಗುರುವಾರದಂದು 34 ಪೈಸೆ ಏರಿಕೆ ಕಂಡು 71.97ರು ನಷ್ಟಿತ್ತು.

ದೆಹಲಿಯಲ್ಲಿ ಶೇಕಡಾ 99.9 ಹಾಗೂ ಶೇಕಡಾ 99.5ರಷ್ಟು ಶುದ್ಧ ಬಂಗಾರ 32,015 ರು ಪ್ರತಿ 10ಗ್ರಾಂ ಮತ್ತು 10 ಗ್ರಾಂಗೆ 31,865 ರೂಪಾಯಿ ನಷ್ಟಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಶೇಕಡಾ 0.2 ರಷ್ಟು ಏರಿಕೆ ಕಂಡು 1215.33 ಡಾಲರ್ ಪ್ರತಿ ಔನ್ಸ್ ಆಗಿದೆ.

ದೀಪಾವಳಿ ನಂತರ ತಗ್ಗಿದ ಬೇಡಿಕೆ, ಚಿನ್ನದ ಬೆಲೆ ಇಳಿಕೆ

ಬ್ರಿಟಿಷ್ ಪ್ರಧಾನಿ ಥೆರೆಸಾ ಮೇ ಅವರು ಬ್ರೆಕ್ಸಿಟ್ ಯೋಜನೆ ಗೊಂದಲದಿಂದಾಗಿ ಕರೆನ್ಸಿ ವ್ಯತ್ಯಾಸ ನಿರೀಕ್ಷಿತವಾಗಿದೆ. ಇದಲ್ಲದೆ, ಯುಎಸ್ -ಚೀನಾ ವಹಿವಾಟು ವಿವಾದ ಕೂಡಾ ಚಿನ್ನದ ಬೆಲೆ ಮೇಲೆ ಪರಿಣಾಮ ಬೀರಲಿದೆ.

English summary
Gold prices fell today(November 16) on muted demand from local jewellers and a strengthening rupee. Gold rates declined by Rs 235 to Rs 32,015 per 10 grams. Silver rates today were however steady at Rs 37,900 per kg.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X