• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಗ್ಗಿದ ಬೇಡಿಕೆ, ಚಿನ್ನದ ಬೆಲೆ ಇಳಿಕೆ, ಬೆಳ್ಳಿ ಬೆಲೆ ಸ್ಥಿರ

|

ನವದೆಹಲಿ, ಡಿಸೆಂಬರ್ 17: ಸ್ಥಳೀಯ ಆಭರಣಗಾರರಿಂದ ತಗ್ಗಿದ ಬೇಡಿಕೆ, ಜಾಗತಿಕವಾಗಿ ಬೆಲೆ ಕುಸಿತದಿಂದಾಗಿ ಸೋಮವಾರದಂದು ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಆದರೆ, ಬೆಳ್ಳಿ ಬೆಲೆ ಸ್ಥಿರವಾಗಿದೆ.

ದೆಹಲಿ ಚಿನಿವಾರಪೇಟೆಯಲ್ಲಿ ಬಂಗಾರದ ಬೆಲೆ 190 ರೂಪಾಯಿ ಇಳಿಕೆ ಕಂಡಿದ್ದು, 10 ಗ್ರಾಂ ಚಿನ್ನದ ಬೆಲೆ 32,000 ರೂಪಾಯಿಯಾಗಿದೆ. ಬೆಳ್ಳಿ ಬೆಲೆ ಯಾವುದೇ ಬದಲಾವಣೆಯಿಲ್ಲದೆ ಕೆ.ಜಿ.ಗೆ 38,400 ರೂಪಾಯಿಯಂತೆ ಮಾರಾಟವಾಗುತ್ತಿದೆ.

ಶನಿವಾರದಂದು ಕೂಡಾ ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡು ಬಂದಿತ್ತು. ಎರಡು ದಿನದಲ್ಲಿ ಬಂಗಾರದ ಬೆಲೆ ಒಟ್ಟು 220 ರೂಪಾಯಿ ಇಳಿಕೆ ಕಂಡಂತಾಗಿದೆ.

ದೆಹಲಿಯಲ್ಲಿ ಶೇ 99.9ರಷ್ಟು ಹಾಗೂ ಶೇ 99.5ರಷ್ಟು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು, ಕ್ರಮವಾಗಿ 10 ಗ್ರಾಂಗೆ 32,000 ರು ಹಾಗೂ 31850ರು ನಷ್ಟಾಗಿದೆ. ಸವರನ್ ಚಿನ್ನದ ಬೆಲೆ 8 ಗ್ರಾಂಗೆ 25000ರು ನಷ್ಟಿದು, ಯಾವುದೆ ವ್ಯತ್ಯಾಸವಾಗಿಲ್ಲ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೂಡ ಬಂಗಾರದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ನ್ಯೂಯಾರ್ಕ್ ನಲ್ಲಿ ಬಂಗಾರದ ಬೆಲೆ ಶೇಕಡಾ 0.07 ರಷ್ಟು ಇಳಿಕೆ ಕಂಡು 1,238.20 ಡಾಲರ್ ಪ್ರತಿ ಔನ್ಸ್ ಆಗಿದೆ. ಬೆಳ್ಳಿ ಬೆಲೆ 14.64 ಡಾಲರ್ ಪ್ರತಿ ಔನ್ಸ್ ಆಗಿದೆ. ಚಿನ್ನದ ಬೆಲೆ ಕೆಲ ಸಮಯ ಇಳಿಮುಖವಾಗುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬೆಳ್ಳಿ ಕಾಯಿನ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ, 100 ನಾಣ್ಯಗಳಿಗೆ 74000 ರು ಖರೀದಿ ಹಾಗೂ 75000ರು ಮಾರಾಟ ದರ ಇದೆ.

English summary
Weak demand from domestic jewellers and lower global prices sent gold rates lower today. Gold prices today fell by Rs 190 to Rs 32,000 per 10 gram. This is the second consecutive day gold prices have seen sharp declines. Gold rates had declined Rs 160 on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X