ಹೆಚ್ಚಿದ ಬೇಡಿಕೆ, ಚಿನ್ನ, ಬೆಳ್ಳಿ ಬೆಲೆ ಏರಿಕೆ
ನವದೆಹಲಿ, ಆಗಸ್ಟ್ 17: ಹಬ್ಬ ಹರಿದಿನಗಳು, ಶುಭ ಸಂದರ್ಭಗಳು ಸಾಲು ಸಾಲಾಗಿ ಬರುತ್ತಿರುವುದರಿಂದ ಚಿನ್ನ, ಬೆಳ್ಳಿ ಬೆಲೆ ಏರಿಕೆಯಾಗಿದೆ. ಜಾಗತಿಕ ಮಟ್ಟದಲ್ಲಿ ಕೂಡಾ ಬೇಡಿಕೆ ಹೆಚ್ಚಾಗಿರುವುದರಿಂದ ಚಿನ್ನದ ಬೆಲೆ ಏರಿಕೆಯಾಗಿದೆ. ಚಿನ್ನದ ಬೆಲೆಯಲ್ಲಿ 300 ರು ಏರಿಕೆಯಾಗಿ 10 ಗ್ರಾಂ ಚಿನ್ನ 30,050 ರು ಗಡಿ ದಾಟಿದೆ.
40,000 ರೂ ಇದ್ದ ಬೆಳ್ಳಿ ಬೆಲೆಯಲ್ಲೂ ಏರಿಕೆ ಕಂಡಿದೆ. ಬೆಳ್ಳಿ ಬೆಲೆ 40,200 ರೂ ಗೆ ಏರಿಕೆಯಾಗಿದೆ. ಚಿನ್ನದ ಮೇಲೆ ಹೂಡಿಕೆ ಹೆಚ್ಚಾಗುತ್ತಿರುವುದರಿಂದಲೂ ಚಿನ್ನದ ಬೆಲೆಯಲ್ಲಿ ಏರಿಕೆಗೆ ಕಾರಣವಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಶೇ 0.43 ಹೆಚ್ಚಾಗಿ 1,288.30 ಡಾಲರ್ ಮತ್ತು ಬೆಳ್ಳಿ ಬೆಲೆಯಲ್ಲಿ ಶೇ 0.12 ಹೆಚ್ಚಾಗಿ 17.12 ಡಾಲರ್ ನಷ್ಟಿದೆ. ಚಿನ್ನದ ಬೆಲೆ ಏರಿಸಬೇಕೆಂಬುದು ಸ್ಥಳೀಯ ಚಿನ್ನಾಭರಣ ವರ್ತಕರ ಬೇಡಿಕೆ ಹೆಚ್ಚಾಗಿದೆ. ಮುಂಬರುವ ದಿನಗಳಲ್ಲಿ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ.












Click it and Unblock the Notifications